ಕೃಷ್ಣಾ ನದಿಯಲ್ಲಿ ಸಿಲುಕಿದ್ದ ಯುವಕನ ರಕ್ಷಣೆಗೆ NDRFಗೆ ಹಿಡಿದ ಸಮಯವೇಷ್ಟು ಗೊತ್ತಾ?

ಯಾದಗಿರಿ: ಕೃಷ್ಣ ನದಿ ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಯಿ ಯುವಕನನ್ನು ಎನ್‌ಡಿಆರ್‌ಎಫ್‌  ತಂಡ ಭಾರಿ ಪ್ರವಾಹದ ನಡುವೆಯೂ ರಕ್ಷಣೆ ಮಾಡಿ ಸಾಹಸ ಮೆರೆದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಕೃಷ್ಣ ನದಿಯ ನಡುಗಡ್ಡೆಯಲ್ಲಿ ಕುರಿಗಾಯಿ ಟೋಪಣ್ಣ ಎಂಬ ಯುವಕ ಸಿಲುಕಿಕೊಂಡಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಎನ್‌ಡಿಆರ್‌ಎಫ್‌ ತಂಡ, ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದೆ. ಬೋಟ್ ಮೂಲಕ ನಡುಗಡ್ಡೆಗೆ ತೆರಳಿದ ಎನ್‌ಡಿಆರ್‌ಎಫ್‌ ಕುರಿಗಾಯಿ ಯುವಕನನ್ನು ರಕ್ಷಣೆ ಮಾಡಿದೆ.

ವಿಷಯ ತಿಳಿದು ಸ್ಥಳಕ್ಕಾಗಿಮಿಸಿದ್ದ ಸುರಪುರ ಶಾಸಕ ರಾಜುಗೌಡ ಹಾಗೂ ಸ್ಥಳೀಯರು, ಕುರಿಗಾಯಿಯನ್ನ ರಕ್ಷಣೆ ಮಾಡಿದ ಎನ್‌ಡಿಆರ್‌ಎಫ್‌ ತಂಡಕ್ಕೆ ಸನ್ಮಾನ ಮಾಡಿ ಧನ್ಯವಾದ ತಿಳಿಸಿದ್ದಾರೆ.

Related Tags:

Related Posts :

Category: