ನಿವರ್ ಚಂಡಮಾರುತ ಎದುರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ: ಎನ್​ಡಿಆರ್​ಎಫ್

ನಿವರ್ ಭೀಕರ ಚಂಡಮಾರುತವಾಗಿ ರೂಪತಳೆಯುವ ಬಗ್ಗೆ ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಸಿದ್ದು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (ಎನ್​ಡಿಆರ್​ಎಫ್) 19 ಟೀಮುಗಳು ತಮಿಳುನಾಡಿನಲ್ಲಿ, 6 ಪುದುಚೆರಿಯಲ್ಲಿ, ಮತ್ತು 7 ಆಂಧ್ರ ಪ್ರದೇಶದಲ್ಲಿ ಪರಿಸ್ಥಿಯನ್ನು ಎದುರಿಸಲು ಸನ್ನದ್ಧವಾಗಿವೆಯೆಂದು ಎನ್​ಡಿಆರ್​ಎಫ್ ಪ್ರಧಾನ ನಿರ್ದೇಶಕ ಎಸ್ ಎನ್ ಪ್ರಧಾನ್ ತಿಳಿಸಿದ್ದಾರೆ.

  • Arun Belly
  • Published On - 22:19 PM, 25 Nov 2020
Nivar Cyclone
ತಮಿಳುನಾಡು ಕಡಲ ತೀರದಲ್ಲಿ ಪ್ರಬಲಗೊಳ್ಳುತ್ತಿದೆ ನಿವಾರ್ ಚಂಡಮಾರುತ

ಪ್ರಚಂಡ ತೀವ್ರತೆಯ ನಿವರ್ ಚಂಡಮಾರುತವು ತಮಿಳುನಾಡು ರಾಜ್ಯದ ಕುಡಲೂರ್​ನಿಂದ ಸುಮಾರು 85 ಕಿಮೀ ದೂರದ ಪೂರ್ವ ಮತ್ತು ಆಗ್ನೇಯ ಭಾಗ ಹಾಗೂ ಪುದುಚೆರಿಯ ಪೂರ್ವ ಹಾಗೂ ಆಗ್ನೇಯ ಭಾಗದಲ್ಲಿ ಸ್ಥಿತಗೊಂಡಿದ್ದು ತಮಿಳನಾಡು ಮತ್ತು ಪುದುಚೆರಿಯ ಕರಾವಳಿ ಪ್ರದೇಶಗಳಾಗಿರುವ ಕರೈಕಲ್ ಮತ್ತು ಮಮ್ಮಲಪುರಂ ತೀರವನ್ನು ನವೆಂಬರ್ 25ರ ಮಧ್ಯರಾತ್ರಿ ಅಪ್ಪಳಿಸಲಿದೆಯೆಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಕೋಸ್ಟ್ ಗಾರ್ಡ್​ನ ಒಂದು ಹಡಗು ಅಗತ್ಯ ಸಾಮಗ್ರಿಗಳೊಂದಿಗೆ ಚೆನೈ ಬಂದರಿನಲ್ಲಿ ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಆಗ್ನೇಯ ಭಾಗದಲ್ಲಿರುವ ರಾಜ್ಯಗಳು ನಿವರ್ ಚಂಡಮಾರುತವನ್ನು ಎದುರಿಸಿಲು ಸಕಲ ತಯಾರಿಗಳನ್ನು ಮಾಡಿಕೊಂಡಿವೆಯೆಂದು ಆಯಾ ಸರ್ಕಾರಗಳು ತಿಳಿಸಿವೆ.

ನಿವರ್ ಭೀಕರ ಚಂಡಮಾರುತವಾಗಿ ರೂಪತಳೆಯುವ ಬಗ್ಗೆ ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (ಎನ್​ಡಿಆರ್​ಎಫ್) 19 ಟೀಮುಗಳು ತಮಿಳುನಾಡಿನಲ್ಲಿ, 6 ಪುದುಚೆರಿಯಲ್ಲಿ, ಮತ್ತು 7 ಆಂಧ್ರ ಪ್ರದೇಶದಲ್ಲಿ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿವೆಯೆಂದು ಎನ್​ಡಿಆರ್​ಎಫ್ ಪ್ರಧಾನ ನಿರ್ದೇಶಕ ಎಸ್ ಎನ್ ಪ್ರಧಾನ ಇಂದು ಮತ್ತೊಮ್ಮೆ ಹೇಳಿದರು.

ಯಾವುದೇ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ಹಾನಿಯಾಗುವುದನ್ನು ತಟೆಗಟ್ಟಲು ಕೇಂದ್ರ ಸರ್ಕಾರದ ಸಂಸ್ಥೆಗಳು ರಾಜ್ಯ ಸರ್ಕಾರಗಳ ಸಮನ್ವಯದೊಂದಿಗೆ ಕೆಲಸ ಮಾಡುತ್ತಿವೆಯೆಂದು ಸಹ ಪ್ರಧಾನ್ ಹೇಳಿದರು.