ಪ್ರಜೆಗಳಿಗೆ ಸೈಕಲ್ ಓಡಿಸಲು ಉತ್ತೇಜನ ನೀಡುತ್ತಿದೆ ನೆದರ್​ಲ್ಯಾಂಡ್ಸ್​

ನೆದರ್​ಲ್ಯಾಂಡ್ಸ್​ ಉದ್ಯೋಗಿಯೊಬ್ಬರು ಕಛೇರಿಗೆ ಹೋಗಲು ಸೈಕಲ್​ ಬಳಸಿದರೆ ಅವರಿಗೆ ಸಂಬಳದ ಹೊರತಾಗಿ ಪ್ರತಿ ಕಿಲೋ ಮೀಟರ್​ಗೆ 16 ರೂಪಾಯಿಗಳನ್ನು ಕಂಪನಿ ನೀಡುವ ಪರಿಕಲ್ಪನೆಯನ್ನು ಹೊಂದಿದೆ. ದೇಶದ ಹಿತದೃಷ್ಟಿಯಿಂದ ಈ ಹೊಸ ಕಲ್ಪನೆಗೆ ನೆದರ್​ಲ್ಯಾಂಡ್ಸ್​ ಮುಂದಾಗಿದೆ.

  • ಅಂಜು ಚೌಧರಿ
  • Published On - 17:23 PM, 13 Jan 2021
ಪ್ರಾತಿನಿಧಿಕ ಚಿತ್ರ

ನಾವು ಅಭಿವೃದ್ಧಿಯ ಯುಗದಲ್ಲಿದ್ದೇವೆ. ಈ ನಿಟ್ಟಿನಲ್ಲಿ, ಎಲ್ಲಾ ದೇಶಗಳಲ್ಲಿ ವಿವಿಧ ಬಗೆಯ ವಾಹನಗಳ ಬಳಕೆಯ ಸಂಖ್ಯೆ ಹೆಚ್ಚುತ್ತಿದೆ. ಇದರ ಪರಿಣಾಮ ಅವುಗಳು ಹೊರಬಿಡುವ ವಿಷಪೂರಿತ ಅನಿಲಗಳು ಪರಿಸರವನ್ನು ಮಾಲಿನ್ಯಗೊಳಿಸುತ್ತಿವೆ. ಹಾಗಾಗಿ, ಅನೇಕ ದೇಶಗಳು ವಾಹನ ಬಳಕೆ ಕಡಿಮೆ ಮಾಡಲು ನಾನಾ ಕಸರತ್ತು ಮಾಡುತ್ತಿವೆ. ವಾಯುಮಾಲಿನ್ಯ ತಡೆಗೆ ಸೈಕಲ್ ಬಳಕೆಗೆ ಹಲವು ದೇಶಗಳಲ್ಲಿ ನಿರ್ಧಾರ ತೆಗೆದುಕೊಂಡಾಗಿದೆ. ಅವುಗಳಲ್ಲಿ ನೆದರ್​ಲ್ಯಾಂಡ್ಸ್​ ಕೂಡಾ ಒಂದು.

ನೆದರ್​ಲ್ಯಾಂಡ್ಸ್​ ಉದ್ಯೋಗಿಯೊಬ್ಬರು ಕಛೇರಿಗೆ ಹೋಗಲು ಸೈಕಲ್​ ಬಳಸಿದರೆ ಅವರಿಗೆ ಸಂಬಳದ ಹೊರತಾಗಿ ಪ್ರತಿ ಕಿಲೋ ಮೀಟರ್​ಗೆ  0.18 ಯುರೊ (16 ರೂಪಾಯಿ) ಕಂಪನಿ ನೀಡುತ್ತದೆ. ದೇಶದ ಹಿತದೃಷ್ಟಿಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ಹೊಸ ಕಲ್ಪನೆಗೆ ನೆದರ್​ಲ್ಯಾಂಡ್ಸ್​ ಮುಂದಾಗಿದೆ.

ಸೈಕಲ್ ಬಳಕೆ ಪರಿಸರಕ್ಕೆ ಒಳಿತು: ಇನ್ನು, ಸೈಕಲ್ ಬಳಕೆಯು ಪರಿಸರದ ದೃಷ್ಟಿಯಿಂದ ಮಾತ್ರವಲ್ಲದೇ, ಮನುಷ್ಯರ ಆರೋಗ್ಯದ ದೃಷ್ಟಿಯಿಂದಲೂ ಸಾಕಷ್ಟು ಒಳ್ಳೆಯದು. ಇದರಿಂದ ಟ್ರಾಫಿಕ್ ಜಾಮ್ ಸಮಸ್ಯೆಗೆ ಕಡಿವಾಣ ಹಾಕಬಹುದು. ಆದ್ದರಿಂದ ಜನರಿಗೆ ಸೈಕ್ಲಿಂಗ್​ ಮಾಡಲು ಉತ್ತೇಜಿಸುವ ಸಲುವಾಗಿ ಈ ಪರಿಕಲ್ಪನೆಯನ್ನು ಆಯೋಜಿಸಿದೆ. ಯೋಜನೆಗೆ ಅಲ್ಲಿನ ಕಂಪನಿಗಳಿಗೆ ಸರ್ಕಾರ ಕೂಡಾ ನಿರ್ದೇಶನಗಳನ್ನು ನೀಡಿದ್ದು ಈಗ ಎಲ್ಲೆಡೆ ಬೆಂಬಲ ಮತ್ತು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿದೇಶಿ ಬಂಡವಾಳ ಹೂಡಿಕೆ: 2ನೇ ಸ್ಥಾನಕ್ಕೇರಿದ ಅಮೆರಿಕಾ! ತಂತ್ರಜ್ಞಾನ ಕಂಪೆನಿಗಳಿಂದಲೇ ಹೆಚ್ಚು ಹೂಡಿಕೆ