ಕೊರೊನಾ ಆಯ್ತು, ಈಗ ಬ್ರೂಸಿಲೋಸಿಸ್ ಸರದಿ: ಇದು ಪುರುಷತ್ವವನ್ನೇ ನಾಶ ಮಾಡಿಬಿಡುತ್ತಂತೆ!

ದೆಹಲಿ: ಇಷ್ಟು ದಿನ ಚೀನಾದ ಕಿಲ್ಲರ್ ಕೊರೊನಾ ವೈರಸ್ ಇಡೀ ವಿಶ್ವವಕ್ಕೆ ನಡುಕ ಹುಟ್ಟಿಸಿತ್ತು. ಇನ್ನೂ ಕೂಡ ಇದರ ಕರಿ ನೆರಳು ಸರಿದಿಲ್ಲ. ಇದರ ನಡುವೆಯೇ ಈಗ ಮತ್ತೊಂದು ಮಾಹಾಮಾರಿ ಸೋಂಕು ಕಾಣಿಸಿಕೊಂಡಿದೆ. ವಾಯವ್ಯ ಚೀನಾದಲ್ಲಿ ಹೊಸ ಬ್ರೂಸಿಲೋಸಿಸ್ ಬ್ಯಾಕ್ಟೀರಿಯಾ ಸೋಂಕು ಪತ್ತೆಯಾಗಿದೆ. 3245 ಮಂದಿಗೆ ಈ ಸೋಂಕು ತಗುಲಿರುವುದು ದೃಢವಾಗಿದೆ.

ಕಳೆದ ವರ್ಷ ಬಯೋ ಫಾರ್ಮಾಸ್ಯುಟಿಕಲ್ ಕಂಪನಿಯಲ್ಲಿ ಸೋರಿಕೆಯಾದ ಕಾರಣ ಈ ಬ್ಯಾಕ್ಟೀರಿಯಾ ಹುಟ್ಟಿದೆ ಎನ್ನಲಾಗುತ್ತಿದೆ. ಚೀನಾದ ಗನ್ ಸೂ ಪ್ರಾಂತ್ಯದಲ್ಲಿ ಪತ್ತೆಯಾಗಿದೆ. ಈ ಸೋಂಕು ತಗುಲಿದರೆ ಪುರುಷರಿಗೆ ಭಾರಿ ಅಪಾಯ‌ ಕಟ್ಟಿಟ್ಟಬುತ್ತಿ. ಏಕೆಂದರೆ ಈ ಸೋಂಕಿನಿಂದ ಪುರುಷರು ತಮ್ಮ ಪುರುಷತ್ವವನ್ನೇ ಕಳೆದುಕೊಳ್ಳುತ್ತಾರಂತೆ. ಆಮೆರಿಕಾದ ಸಿ.ಡಿ.ಸಿ. ಪ್ರಕಾರ ಇದನ್ನು ಮೆಡಿಟರೇನಿಯನ್ ಜ್ವರ ಅಂತಲೂ ಕರೆಯುತ್ತಾರೆ. ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲವಂತೆ.

Related Tags:

Related Posts :

Category:

error: Content is protected !!