ಬೆಂಗಳೂರು ಮಾತ್ರವಲ್ಲ ಜಿಲ್ಲೆಯಲ್ಲೂ ಲಾಕ್‌ಡೌನ್‌, ಹೊಸ ಗೈಡ್‌ಲೈನ್ಸ್‌ ಏನು?

ಬೆಂಗಳೂರು: ಇವತ್ತಿನಿಂದ ರಾಜಧಾನಿ ಲಾಕ್‌ ಆಗ್ತಾ ಇದೆ. ಇನ್ನು ಉಳಿದ ಜಿಲ್ಲೆಗಳ ಕಥೆಯೇನು..? ನಿನ್ನೆ ನಡೆದ ಎಲ್ಲಾ ಜಿಲ್ಲೆಗಳ ಡಿಸಿ ಹಾಗೂ ಇನ್‌ಚಾರ್ಚ್‌ ಮಿನಿಸ್ಟರ್‌ಗಳ ಸಭೆಯಲ್ಲಿ ಸಿಎಂ ಹೇಳಿದ್ದೇನು..? ಯಾವ್ಯಾವ ಜಿಲ್ಲೆಗಳು ಫುಲ್‌ ಲಾಕ್‌ಡೌನ್‌ ಆಗುತ್ತೆ? ಯಾವ್ಯಾವ ಜಿಲ್ಲೆಯಲ್ಲಿ ಹಾಫ್ ಲಾಕ್‌ಡೌನ್‌ ಅನ್ನೋದರ ಕಂಪ್ಲೀಟ್‌ ಡಿಟೇಲ್ಸ್ ಇಲ್ಲಿದೆ..

ಗಡಿ, ಗಡಿಗಳನ್ನೆಲ್ಲಾ ಮೀರಿ ಬಂದ ಮಹಾಮಾರಿ ಊರುಕೇರಿಗೆಲ್ಲಾ ಹಬ್ಬಿದೆ. ಯಾವ ಜಿಲ್ಲೆಯೂ ಈಗ ಕೊರೊನಾದಿಂದ ಮುಕ್ತವಾಗಿಲ್ಲ. ಸೋಂಕಿತರ ಸಂಖ್ಯೆಯನ್ನ ಕಂಟ್ರೋಲ್‌ ಮಾಡಲು ಸರ್ಕಾರ ಹರಸಾಹಸ ಮಾಡಿದೆ. ಕೊನೆಗೆ ಲಾಕ್‌ಡೌನ್‌ ವಿಧಿಸುತ್ತಿದೆ.ಇಂದಿನಿಂದ ಬರೀ ಬೆಂಗಳೂರು ಮಾತ್ರ ಬಂದ್‌ ಆಗ್ತಿಲ್ಲ. ಅರ್ಧಕರ್ಧ ರಾಜ್ಯವೇ ಸ್ತಬ್ಧವಾಗೋ ಸಾಧ್ಯತೆಯಿದೆ. ಸಿಎಂ ಯಡಿಯೂರಪ್ಪ ನಡೆಸಿದ ಮೀಟಿಂಗ್‌ನಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ.. ಹಾಗಿದ್ರೆ, ಯಾವ್ಯಾವ ಜಿಲ್ಲೆಗಳಲ್ಲಿ ಕೊರೊನಾ ಕಂಟ್ರೋಲ್ ತಪ್ಪಿ ಹೋಗಿದೆ. ಯಾವ ಜಿಲ್ಲೆಗಳು ಲಾಕ್‌ಡೌನ್‌ ಆಗುತ್ತಿದೆ. ಯಾವ್ಯಾವ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಇಲ್ಲ ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ..

19 ಜಿಲ್ಲಾಧಿಕಾರಿಗಳ ಜೊತೆ ಸಿಎಂ ಸುದೀರ್ಘ ಚರ್ಚೆ!
ಲಾಕ್‌ಡೌನ್ ವಿಚಾರವಾಗಿ 19 ಜಿಲ್ಲಾಧಿಕಾರಿಗಳು, ಇನ್‌ಚಾರ್ಚ್‌ ಮಿನಿಸ್ಟರ್‌ಗಳ ಜೊತೆ ಸಿಎಂ ಸಭೆ ನಡೆಸಿದ್ರು.. ಸೋಂಕಿತರು ಹೆಚ್ಚಾಗಿರುವ ಮತ್ತು ಸೋಂಕು ಹೆಚ್ಚು ಹರಡುತ್ತಿರುವ ಜಿಲ್ಲೆಗಳಿಗೆ ಲಾಕ್‌ಡೌನ್ ಬೇಕಾ ಬೇಡವಾ ಅನ್ನೋ ಬಗ್ಗೆ ಚರ್ಚಿಸಲಾಯ್ತು.. ಎಲ್ಲಾ ಮಾಹಿತಿಯನ್ನು ಪಡೆದ ಸಿಎಂ ಯಡಿಯೂರಪ್ಪ, ಕೆಲವೊಂದು ಸ್ಪಷ್ಟ ಸೂಚನೆಗಳನ್ನ ಕೊಟ್ರು. ಸಿಎಂ ಸೂಚನೆ ಮೇರೆಗೆ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಲಾಕ್‌ಡೌನ್‌ಗೆ ಡೇಟ್ ಫಿಕ್ಸ್ ಆಗಿದೆ.

ಲಾಕ್‌ಡೌನ್‌ ರೂಲ್ಸ್
ಸೋಂಕಿನ ಹೊಡೆತಕ್ಕೆ ತತ್ತರಿಸಿರೋ ಧಾರವಾಡ ಜಿಲ್ಲೆಗೆ ಬುಧವಾರದಿಂದ ಬೀಗ ಬೀಳಲಿದೆ. ಜುಲೈ 24ರ ರಾತ್ರಿ 8 ಗಂಟೆಯವರೆಗೂ ಇಡೀ ಜಿಲ್ಲೆಯನ್ನ ಬಂದ್‌ ಮಾಡ್ತೀವಿ ಅಂತಾ ಸಚಿವ ಜಗದೀಶ್‌ ಶೆಟ್ಟರ್‌ ಮಾಹಿತಿ ನೀಡಿದ್ದಾರೆ.

ದಕ್ಷಿಣ ಕನ್ನಡ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವಾರ ಲಾಕ್‌ಡೌನ್‌ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.. ಬುಧವಾರ ಮಧ್ಯರಾತ್ರಿಯಿಂದ ಕಟ್ಟುನಿಟ್ಚಿನ ಲಾಕ್‌ಡೌನ್ ಜಾರಿಯಾಗಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ರಾಯಚೂರು
ರಾಯಚೂರಿನಲ್ಲಿ ಲಾಕ್‌ಡೌನ್‌ ಇಲ್ಲ.. ಸೀಲ್‌ಡೌನ್‌ಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ರಾಯಚೂರು, ಸಿಂಧನೂರು ಪಟ್ಟಣ ಮಾತ್ರ ಸೀಲ್‌ಡೌನ್ ಆಗಲಿದೆ.. ಜುಲೈ 15ರಿಂದ ಜುಲೈ 22ರವರೆಗೆ ಕಂಪ್ಲೀಟ್ ಬಂದ್ ಆಗಲಿದೆ. ಅಗತ್ಯಸೇವೆ ಹೊರತುಪಡಿಸಿ ಎಲ್ಲಾ ಚಟುವಟಿಕೆಗೆ ನಿರ್ಬಂಧ ಏರಲಾಗಿದೆ.

ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯಲ್ಲಿ ಹಾಫ್‌ ಡೇ ಲಾಕ್‌ಡೌನ್‌ ಜಾರಿಯಾಗ್ತಿದೆ. ಶಿವಮೊಗ್ಗ ನಗರದಲ್ಲಿ ಮಧ್ಯಾಹ್ನ 3ರಿಂದ ಬೆಳಗ್ಗೆ 5 ಗಂಟೆವರೆಗೆ ನಿರ್ಬಂಧ ವಿಧಿಸಲಾಗಿದೆ.
ಇನ್ನುಳಿದಂತೆ ಸಿಎಂ ಸಭೆಯಲ್ಲಿ ಯಾವ್ಯಾವ ಜಿಲ್ಲಾಧಿಕಾರಿಗಳ ಲಾಕ್‌ಡೌನ್‌ ಅಭಿಪ್ರಾಯ ಏನಾಗಿತ್ತು ಅನ್ನೋದನ್ನ ನೋಡೋದಾದ್ರೆ.. ಬೆಳಗಾವಿ ಜಿಲ್ಲೆಯ 6 ತಾಲೂಕು ಲಾಕ್‌ಡೌನ್‌ಗೆ ಡಿಸಿ ಮನವಿ ಮಾಡಿದ್ದಾರೆ.

ಕಲಬುರಗಿ ಜಿಲ್ಲಾಧಿಕಾರಿ ಕಲಬುರಗಿ ನಗರ ಮಾತ್ರ ಲಾಕ್‌ಡೌನ್‌ ಮಾಡಿದ್ರೆ ಸಾಕು ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಗಡಿಗಳನ್ನ ಸೀಲ್‌ಡೌನ್‌ ಮಾಡಿ ಎಂದಿದ್ದಾರೆ. ಮೈಸೂರು ಡಿಸಿಯೂ ಅಷ್ಟೇ ಇಡೀ ಜಿಲ್ಲೆ ಲಾಕ್‌ಡೌನ್‌ ಬೇಡ ಎಂದಿದ್ದಾರೆ. ಮಂಡ್ಯ, ವಿಜಯಪುರ, ಉತ್ತರ ಕನ್ನಡ, ಬಳ್ಳಾರಿ ಜಿಲ್ಲಾಧಿಕಾರಿಗಳು ನಮಗೆ ಲಾಕ್‌ಡೌನ್‌ ಬೇಡ ಎಂದಿದ್ದಾರೆ.

ಹೀಗೆ.. ಕೊರೊನಾ ಹೈರಿಸ್ಕ್‌ ಜಿಲ್ಲೆಗಳು ಲಾಕ್‌ಡೌನ್ ಆಗ್ತಿದ್ರೆ, ಉಳಿದ ಜಿಲ್ಲೆಗಳ ಜವಾಬ್ದಾರಿಯನ್ನ ಸಿಎಂ ಯಡಿಯೂರಪ್ಪ ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ. ಉಸ್ತುವಾರಿ ಸಚಿವರುಗಳಿಗೂ ಕೊರೊನಾ ನಿಯಂತ್ರಿಸುವ ಟಾಸ್ಕ್‌ ಕೊಟ್ಟಿದ್ದಾರೆ. ಜಿಲ್ಲಾಧಿಕಾರಿಗಳು ಕೊರೊನಾ ಕೇಸ್‌ಗಳು ಜಾಸ್ತಿಯಾದ್ರೆ ಆಯಾ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮಾಡುವ ಸಾಧ್ಯತೆಯೂ ಇದೆ. ಏನೇ ಆಗಲಿ. ಇಡೀ ರಾಜ್ಯದಲ್ಲಿ ಕೊರೊನಾ ಕಂಟ್ರೋಲ್‌ಗೆ ಬಂದ್ರಷ್ಟೇ ಸಾಕು.

Related Tags:

Related Posts :

Category:

error: Content is protected !!