ನ್ಯೂಜಿಲ್ಯಾಂಡ್​ನಲ್ಲೊಬ್ಬ ಕಾಮುಕ ಸಚಿವ ಸ್ಥಾನ ಮಾನ ಕಳೆದುಕೊಂಡನಪ್ಪ!

ಅನೈತಿಕ ಸಂಬಂಧ ಹೊಂದಿದ್ದ ನ್ಯೂಜಿಲ್ಯಾಂಡ್​ ಸರ್ಕಾರದ ಸಚಿವನೊಬ್ಬನನ್ನ ಪ್ರಧಾನಿ ಜಸಿಂದಾ ಆರ್ಡೆರ್ನ್ ಕೆಲಸದಿಂದ ವಜಾ ಮಾಡಿದ್ದಾರೆ. ತನ್ನ ಮಾಜಿ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧವಿದ್ದ ಹಿನ್ನೆಲೆಯಲ್ಲಿ ವಲಸೆ ಖಾತೆ ಸಚಿವ ಇಯನ್​ ಲೀಸ್​-ಗ್ಯಾಲೋವೇ (Iain Lees-Galloway) ತಮ್ಮ ಖಾತೆಯಿಂದ ವಜಾ ಆಗಿದ್ದಾರೆ.

ಪ್ರಧಾನಿ ಆರ್ಡೆರ್ನ್ ಪ್ರಕಾರ ಇಯನ್​ ಲೀಸ್​-ಗ್ಯಾಲೋವೇ ನಿರ್ವಹಿಸುತ್ತಿದ್ದ ಖಾತೆಯಡಿ ಕಚೇರಿ ಸಂಬಂಧಗಳು (Workplace Relations) ಸಹ ಒಂದು ಭಾಗವಾಗಿದ್ದರಿಂದ ಸಚಿವರನ್ನ ಆ ಖಾತೆಯಲ್ಲಿ ಮುಂದುವರಿಸುವುದು ಸಮಂಜಸವಲ್ಲ. ಜೊತೆಗೆ, ಈ ಪ್ರಕರಣದಿಂದ ಅಧಿಕಾರದ ದುರಪಯೋಗ ಸಹ ಆಗುತ್ತದೆ. ಹೀಗಾಗಿ, ಅವರನ್ನ ಕೆಲಸದಿಂದ ವಜಾ ಮಾಡಲಾಗಿದೆ ಎಂದಿದ್ದಾರೆ.

ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಚಿವನ ತಲೆದಂಡ?
ಅಂದ ಹಾಗೆ, ನ್ಯೂಜಿಲ್ಯಾಂಡ್​ನಲ್ಲಿ​ ಇದೇ ಸೆಪ್ಟಂಬರ್​ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಹೀಗಾಗಿ, ಸಚಿವರ ರಾಸಲೀಲೆ ಪ್ರಕರಣವು ಆಡಳಿತ ಪಕ್ಷದ ಗೆಲುವಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ.

ಜೊತೆಗೆ, ಸಚಿವರ ಕಾಮದಾಟವನ್ನ ಬೆಳಕಿಗೆ ತಂದಿರೋದು ವಿರೋಧ ಪಕ್ಷದ ನಾಯಕಿ ಜೂಡಿಥ್​ ಕಾಲಿನ್ಸ್​. ಆದ್ದರಿಂದ, ಮುಂಬರುವ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಪ್ರಧಾನಿ ಆರ್ಡೆರ್ನ್​ಗೆ ಈ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿತ್ತು ಎನ್ನಲಾಗಿದೆ.

ಇನ್ನು, ಮೂರು ಮಕ್ಕಳ ತಂದೆಯಾಗಿರುವ ಇಯನ್​ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನನ್ನ ವರ್ತನೆ ಅನುಚಿತವಾಗಿದ್ದು, ಈ ಕುರಿತು ಕ್ಷಮಾಪಣೆ ಕೇಳುತ್ತೇನೆ ಎಂದು ಹೇಳಿದ್ದಾರೆ.

Related Tags:

Related Posts :

Category:

error: Content is protected !!