ಕಿವೀಸ್ ನಾಡಿನಲ್ಲಿ ಕನ್ನಡ ಪ್ರೇಮ ಮೆರೆದ ರಾಹುಲ್, ಪಾಂಡೆ

, ಕಿವೀಸ್ ನಾಡಿನಲ್ಲಿ ಕನ್ನಡ ಪ್ರೇಮ ಮೆರೆದ ರಾಹುಲ್, ಪಾಂಡೆ

ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ರನ್​ಮಳೆ ಹರಿಸಿದ ಕನ್ನಡಿಗರು ಕಮಾಲ್ ಮಾಡಿದ್ರು. ಕೆ.ಎಲ್.ರಾಹುಲ್ ಮತ್ತು ಮನೀಶ್ ಪಾಂಡೆ ಜೊತೆಯಾಟ ಕನ್ನಡಿಗರಿಗೆ ಕೇವಲ ಮನರಂಜನೆ ನೀಡಿದ್ದಷ್ಟೇ ಅಲ್ಲ, ಕನ್ನಡರಿಗರ ಹಿರಿಮೆಯನ್ನ ಹೆಚ್ಚಿಸಿತ್ತು. ಕಿವೀಸ್ ನೆಲದಲ್ಲಿ ಕನ್ನಡದ ಕಂಪು ಚೆಲ್ಲಿ ಕ್ರೀಡಾಭಿಮಾನಿಗಳನ್ನ ಸಂತಸದಲ್ಲಿ ತೇಲಿಸಿದ್ರು.

ಕರುನಾಡಿನ ಕುವರರಾದ ರಾಹುಲ್ ಮತ್ತು ಮನೀಶ್ ಜೋಡಿ ನಿನ್ನೆ ರನ್ ಸುಂಟರಗಾಳಿ ಎಬ್ಬಿಸಿದ್ದು ನಿಜ. ಅದು ಕನ್ನಡ ಭಾಷೆಯನ್ನ ಮಾತನಾಡಿಕೊಂಡೇ ಕಿವೀಸ್ ಕ್ರಿಕೆಟಿಗರ ಕಿವಿ ಹಿಂಡಿದ್ರು. ಇಬ್ಬರು ಹೀಗೆ ಆನ್​ಫೀಲ್ಡ್​ನಲ್ಲೇ ಸವಿಯಾದ ಕನ್ನಡ ಭಾಷೆಯಲ್ಲಿ ಮಾತನಾಡ್ತಾ, ಕ್ರಿಕೆಟ್ ಪಂದ್ಯಕ್ಕೆ ಹೊಸ ಜೋಷ್ ತುಂಬಿದ್ರು.

ಕಿವೀಸ್ ನೆಲದಲ್ಲಿ ರಾಹುಲ್, ಪಾಂಡೆ ಕನ್ನಡಕ್ಕೆ ಜೈಕಾರ:
ನಿಜ.. ನ್ಯೂಜಿಲೆಂಡ್ ನೆಲದಲ್ಲಿ ಟೀಮ್ ಇಂಡಿಯಾ ಆರಂಭಿಕ ಕುಸಿತ ಕಂಡಾಗ ಅಬ್ಬರ ಬ್ಯಾಟಿಂಗ್ ಮಾಡಿದ್ದು, ಕನ್ನಡದ ಈ ಭಲೇ ಜೋಡಿ. ಹಾಗೇ ಕ್ರೀಸ್​ನಲ್ಲಿ ಸವಿಯಾದ ಕನ್ನಡದಲ್ಲೇ ಮಾತನಾಡಿಕೊಂಡು ರನ್ ಕಲೆಹಾಕಿದ ಈ ಜೋಡಿ ಕನ್ನಡಿಗರ ಮನ ಗೆದ್ದಿದ್ದು ವಿಶೇಷವಾಗಿತ್ತು. ಆಗ ತಾನೇ ಕ್ರೀಸ್​ಗೆ ಎಂಟ್ರಿಯಾಗಿದ್ದ ಪಾಂಡೆ ಜೊತೆಗೆ ರಾಹುಲ್ ಇಲ್ಲಿಂದಲೇ ಕನ್ನಡದಲ್ಲೇ ಮಾತನಾಡಿಸುತ್ತಾ ಆಡೋಕೆ ಮುಂದಾಗ್ತಾರೆ. ರಾಹುಲ್- ಪಾಂಡೆಯ ಈ ಸವಿಯಾದ ಕನ್ನಡ ಮಾತುಗಳು, ಪಂದ್ಯ ವೀಕ್ಷಿಸುತ್ತಿದ್ದ ಕನ್ನಡಿಗರ ಕಿವಿ ನಿಮಿರಿ ನಿಲ್ಲುವಂತೆ ಮಾಡಿತ್ತು.

ರಾಹುಲ್ ಮತ್ತು ಪಾಂಡೆಯ ಕನ್ನಡ ಪ್ರೇಮವನ್ನ.. ಜೇಮ್ಸ್ ನಿಶಾಮ್ ಓವರ್​ನಲ್ಲಿ ಮನೀಶ್ ಪಾಂಡೆ, ಡೀಪ್ ಎಕ್ಸ್ಟ್ರಾ ಕವರ್​ನತ್ತ ಬಾರಿಸಿ 2ರನ್​ಗಳಿಸ್ತಾರೆ. ಮತ್ತೊಂದು ರನ್​ಗೆ ಮುನ್ನುಗ್ತಿ ಬರ್ತಿದ್ದ ಪಾಂಡೆಯನ್ನ ರಾಹುಲ್ ಕನ್ನಡದಲ್ಲೇ ಬೇಡ ಬೇಡ ಎಂದು ಹೇಳ್ತಾರೆ. ರಾಹುಲ್ ಮತ್ತು ಪಾಂಡೆ ಜೋಡಿ ಮೊತ್ತೊಮ್ಮೆ ಕ್ರೀಸ್​ನಲ್ಲಿ ಕನ್ನಡ ಭಾಷೆ ಬಳಸಿದ್ದು 370ನೇ ಓವರ್​ನ 4ನೇ ಬಾಲ್​ನಲ್ಲಿ. ಸ್ಯಾಂಟ್ನರ್ ಮಾಡ್ತಿದ್ದ ಓವರ್​ನಲ್ಲಿ 2ರನ್ ಕದಿಯೋ ಆತುರದಲ್ಲಿ ಮನೀಶ್ ಪಾಂಡೆ ಬಾ ಬಾ ಎಂದು ರಾಹುಲ್​ರನ್ನ ಕನ್ನಡದಲ್ಲೇ ಆಹ್ವಾನಿಸಿದ್ರು.

44.1ನೇ ಓವರ್​ನಲ್ಲಿ ರಾಹುಲ್ ಮಿಡ್ ವಿಕೆಟ್​ನತ್ತ ಬಾರಿಸ್ತಾರೆ. ಈ ವೇಳೆ ಈ ಜೋಡಿ 2ರನ್ ಕದೀತಾರೆ. ಬಳಿಕ ಪಾಂಡೆ 3ನೇ ರನ್​ಗೆ ಓಡು ಓಡು ಮಗಾ ಅಂತಾ ಕನ್ನಡದಲ್ಲೇ ರಾಹುಲ್​ರನ್ನ ಆಹ್ವಾನಿಸ್ತಾರೆ. ಆಗ ರಾಹುಲ್ ಬೇಡ ಬೇಡ ಅಂತಾನೆ.ಹೀಗೆ ರಾಹುಲ್ ಮತ್ತು ಪಾಂಡೆ ಕನ್ನಡದಲ್ಲಿ ಮಾತನಾಡಿರೋದು ಅಲ್ಲಿನ ಸ್ಟಂಪ್ ಮೈಕ್​ನಲ್ಲಿ ರೆಕಾರ್ಡ್ ಆಗಿರುತ್ತೆ. ಇದನ್ನೇ ಅಲಿಸಿದ ಕಾಮೆಂಟೇಟರ್​ಗಳು ಸಹ ಇಬ್ಬರು ಕರ್ನಾಟಕದವರು.

ಹೀಗಾಗಿ ಮನೀಶ್ ಪಾಂಡೆ ಇಂಗ್ಲೀಷ್ ಬದಲು ಕನ್ನಡದಲ್ಲಿ ರಾಹುಲ್ ಜೊತೆಗೆ ಮಾತನಾಡ್ತಿದ್ದಾರೆ ಅಂತಾ ಹೇಳಿದ್ರು. ಇನ್ನು ಮನೀಶ್ ಪಾಂಡೆ 38ರನ್​ಗಳಿಸಿದ್ದಾಗ ಸ್ಯಾಂಟ್ನರ್ ಮಾಡಿದ 45.3ನೇ ಬಾಲ್​ನಲ್ಲಿ ಫಸ್ಟ್ ಸ್ಲಿಪ್​ನತ್ತ ಬಾಲ್ ತಳ್ಳಿ ಓಡ್ತಾರೆ. ಅತ್ತ ಫೀಲ್ಡರ್ ಬಾಲ್ ಬಿಟ್ಟಿದನ್ನ ಕಂಡ ರಾಹುಲ್, ಓಡು ಓಡು ಮಗಾ ಎಂದು ಪಾಂಡೆಗೆ ಹೇಳಿದ್ರು.

ಒಟ್ನಲ್ಲಿ.. ಈ ಹಿಂದೆ ಕನ್ನಡಿಗರೇ ಭಾರತೀಯ ಕ್ರಿಕೆಟ್ ಅನ್ನ ಆಳ್ತಿದ್ರು.. ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ಇವರೆಲ್ಲಾ ಫೀಲ್ಡ್​ನಲ್ಲಿ ಕನ್ನಡದಲ್ಲೇ ಮಾತನಾಡಿಕೊಳ್ತಾ ಆಟವಾಡ್ತಿದ್ರು. ಆದ್ರೀಗ ಮತ್ತದೆ ಗತ ವೈಭವ ಮರು ಸೃಷ್ಟಿಯಾಗಿದೆ. ರಾಹುಲ್ ಮತ್ತು ಪಾಂಡೆ ಜೋಡಿ ಫೀಲ್ಡ್​ನಲ್ಲಿ ಕನ್ನಡದಲ್ಲೇ ಮಾತನಾಡಿ ಕನ್ನಡಿಗರ ಸಂತಸವನ್ನ ದುಪ್ಪಟ್ಟಾಗುವಂತೆ ಮಾಡಿದ್ದಾರೆ.

, ಕಿವೀಸ್ ನಾಡಿನಲ್ಲಿ ಕನ್ನಡ ಪ್ರೇಮ ಮೆರೆದ ರಾಹುಲ್, ಪಾಂಡೆ

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!