ನವವಿವಾಹಿತೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ.. ಇವತ್ತು ವಿವಾಹ ವಾರ್ಷಿಕೋತ್ಸವ

  • sadhu srinath
  • Published On - 13:02 PM, 24 Oct 2020

ಬೆಂಗಳೂರು: ನವವಿವಾಹಿತ ಗೃಹಿಣಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರೋಜಾ (24) ಎಂಬಾಕೆಯ ಶವ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇವತ್ತು ರೋಜಾ-ವಿಕಾಸ್ ವಿವಾಹ ವಾರ್ಷಿಕೋತ್ಸವ
ನೂತನ ದಂಪತಿ ವಿಕಾಸ್-ರೋಜಾ ಹೆಸರುಘಟ್ಟ ಮುಖ್ಯರಸ್ತೆಯ ಗೃಹಲಕ್ಷ್ಮೀ ಲೇಔಟ್ ನಲ್ಲಿ ವಾಸವಿದ್ದರು. ರೋಜಾ, ಗಂಡನ ಕಿರುಕುಳದ ಬಗ್ಗೆ ತನ್ನ ತಾಯಿ ಮನೆಯವರ ಬಳಿ ಹೇಳಿಕೊಂಡಿದ್ದರಂತೆ.

ಇವತ್ತು ರೋಜಾ-ವಿಕಾಸ್ ವಿವಾಹ ವಾರ್ಷಿಕೋತ್ಸವದ ದಿನವಾಗಿದೆ. ಆದರೆ ನೇಣು ಬಿಗಿದ ಸ್ಥಿತಿಯಲ್ಲಿ ರೋಜಾ ಶವ ಪತ್ತೆಯಾಗಿರುವುದು ಖೇದಕರ ಸಂಗತಿ. ಗಂಡ ವಿಕಾಸ್ ಹಾಗೂ ಮತ್ತವನ ಕುಟುಂಬಸ್ಥರು ರೋಜಾ ಸಾವಿಗೆ ಕಾರಣ ಎಂದು ರೋಜಾ ತಾಯಿ ಮನೆಯವರು ಆರೋಪ ಮಾಡಿದ್ದು, ಪೀಣ್ಯಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.