ಕೊರೊನಾ ಭೀತಿ ನಡುವೆಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ನಿಖಿಲ್- ರೇವತಿ

ರಾಮನಗರ: ಎಲ್ಲೆಲ್ಲೂ ಭಯದ ವಾತಾವರಣ, ಒಂಚೂರು ಎಡವಟ್ಟಾದ್ರೂ ನಡೆಯೋದು ಮಾತ್ರ ಭೀಕರ ರಣಭೀಕರ. ಅಂದಹಾಗೆ ದೇಶಕ್ಕೆ ಕೊರೊನಾ ಸೋಂಕು ಅಪ್ಪಳಿಸಿದ ಪರಿಣಾಮ, ಇಡೀ ದೇಶವೇ ಲಾಕ್​ಡೌನ್ ಆಗಿದೆ. ಸಭೆ, ಸಮಾರಂಭಗಳು ಅಂದ್ರೆ ಜನ ಕಿಲೋ ಮೀಟರ್ ಲೆಕ್ಕದಲ್ಲಿ ಓಡೋಡಿ ಹೋಗ್ತಾರೆ. ಇಂಥ ಟೈಂನಲ್ಲೇ ಮಾಜಿ ಸಿಎಂ ಪುತ್ರನ ವಿವಾಹವೂ ಬಂದಿದ್ದು, ಸಿಂಪಲ್ ಆಗಿ ಮದುವೆ ಮುಗಿಸೋಕೆ ಹೆಚ್​ಡಿಕೆ ಕುಟುಂಬ ಅಂತಿಮ ಸಿದ್ಧತೆ ನಡೆಸಿದೆ.

ಕೇತಗಾನಹಳ್ಳಿ ತೋಟದ ಮನೆಯಲ್ಲಿ ಅಂತಿಮ ಸಿದ್ಧತೆ: 
ಮಾಜಿ ಪಿಎಂ ಮೊಮ್ಮಗ, ಮಾಜಿ ಸಿಎಂಗೆ ಮಗ.. ಅಂದಹಾಗೆ ನಿಖಿಲ್ ಕುಮಾರಸ್ವಾಮಿ ಇಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಭರ್ಜರಿ ಫೈಟ್ ಮಾಡಿ, ರಾಜಕೀಯ ಅಖಾಡದಲ್ಲೂ ಅದೃಷ್ಟವನ್ನ ಪರೀಕ್ಷಿಸಿದ್ದ ನಿಖಿಲ್​ಗೆ ಕಂಕಣ ಭಾಗ್ಯ ಒದಗಿ ಬಂದಿದೆ. ಹೆಚ್​ಡಿಡಿ ಮನೆಯಲ್ಲಿ ನಡೀತಿರೋ ಶುಭ ಸಮಾರಂಭವನ್ನು ಅದ್ಧೂರಿಯಾಗಿ ಮಾಡಬೇಕು ಅನ್ನೋ ಕನಸು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಇತ್ತು. ತಮ್ಮ ಪುತ್ರನ ಮದುವೆ ಹಾಗೆ ನಡೆಯಬೇಕು, ತಯಾರಿಗಳು ಹೀಗೆ ಇರಬೇಕು ಅಂತೆಲ್ಲಾ ಹೆಚ್​ಡಿಕೆ ಕನಸು ಕಟ್ಟಿಕೊಂಡಿದ್ರು. ಆದ್ರೆ ಕೊರೊನಾ ಅನ್ನೋ ಹೆಮ್ಮಾರಿ ನಿಖಿಲ್ ಅದ್ಧೂರಿ ಮದುವೆಗೂ ಅಡ್ಡಿಯಾಗಿಬಿಟ್ಟಿತ್ತು.

‘ಯುವರಾಜ’ನ ಮದುವೆಯಲ್ಲಿ ಕೆಲವರು ಮಾತ್ರ ಭಾಗಿ..!
ಅಂದಹಾಗೆ ದೇಶದಲ್ಲಿ ಹಾಗೂ ರಾಜ್ಯದಲ್ಲಿ ‘ಕೊರೊನಾ’ ಅಟ್ಟಹಾಸ ಶುರುವಾಗುವುದಕ್ಕೂ ಮೊದಲೇ ನಿಖಿಲ್ ಮ್ಯಾರೇಜ್ ಫಿಕ್ಸ್ ಆಗಿತ್ತು. ಆದ್ರೆ ದಿಢೀರ್ ಅಂತಾ ದಾಳಿಯಿಟ್ಟ ಕೊರೊನಾ ಎಲ್ಲವನ್ನ ಅಲ್ಲೋಲ ಕಲ್ಲೋಲ ಮಾಡಿದೆ. ಈ ಮೊದಲು ರಾಮನಗರದ ಜಾನಪದ ಲೋಕದ ಸಮೀಪದಲ್ಲಿ ಅದ್ಧೂರಿಯಾಗಿ ನಡೆದಿದ್ದ ಸಿದ್ಧತೆಗಳು ರದ್ದಾಗಿದ್ದವು. ನಂತರ ಸಿಂಪಲ್ ಆಗಿ ಮದುವೆ ಮಾಡಲು ಹೆಚ್​ಡಿಡಿ ಕುಟುಂಬ ನಿರ್ಧರಿಸಿತ್ತು. ಅದರಂತೆ ರಾಮನಗರ ತಾಲೂಕಿನ ಕೇತಗಾನಹಳ್ಳಿ ಗ್ರಾಮದ ಹೆಚ್​ಡಿಕೆ ತೋಟದ ಮನೆಯಲ್ಲಿ ಮದುವೆಗೆ ಅಂತಿಮ ಸಿದ್ಧತೆ ನಡೆದಿದ್ದು, ಇಂದು ನಿಖಿಲ್ ಮತ್ತು ರೇವತಿ ವಿವಾಹ ನೆರವೇರಲಿದೆ. ಆದ್ರೆ ನಿಖಿಲ್ ಮದುವೆಯಲ್ಲಿ ಎರಡೂ ಕುಟುಂಬದವರು ಸೇರಿದಂತೆ ಕೆಲವರು ಮಾತ್ರ ಭಾಗಿಯಾಗಲಿದ್ದಾರೆ ಎನ್ನಲಾಗ್ತಿದೆ.

ಒಟ್ನಲ್ಲಿ ಲಾಕ್​ಡೌನ್ ನಡುವೆಯೂ ಶುಭ ಸಮಾರಂಭ ನಡೆಯುತ್ತಿದ್ದು, ನಾಡಿನ ಚಿತ್ತ ನಿಖಿಲ್ ಮದುವೆಯತ್ತ ನೆಟ್ಟಿದೆ. ವಿವಾಹದಲ್ಲಿ ಭಾರಿ ಪ್ರಮಾಣದಲ್ಲಿ ಜನರು ಸೇರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಜನ ಸೇರದಂತೆ ಕೆಲವು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಅಲ್ಲದೆ ಸುತ್ತಮುತ್ತಲ ಪ್ರದೇಶದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಆದ್ರೆ ಯಾರೆಲ್ಲಾ ನಿಖಿಲ್ ಮದುವೆಗೆ ಬರ್ತಾರೆ, ಲಾಕ್​ಡೌನ್ ಪರಿಣಾಮ ಸೆಲೆಬ್ರಿಟಿಗಳು ಗೈರು ಹಾಜರಾಗ್ತಾರಾ ಅನ್ನೋ ಕುತೂಹಲದ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more