ಅಲಿಬಾಗ್ ಕಡಲತೀರಕ್ಕೆ ಅಪ್ಪಳಿಸಲಿದೆ ನಿಸರ್ಗ ಸೈಕ್ಲೋನ್!

ದೆಹಲಿ: ನಿಸರ್ಗ ಸೈಕ್ಲೋನ್ ಇಂದು ಮಧ್ಯಾಹ 2ರಿಂದ 3ಗಂಟೆ ವೇಳೆಗೆ ಅಲಿಬಾಗ್ ಕಡಲತೀರ ಹಾದು ಹೋಗಲಿದೆ. ಮುಂಬೈ, ಥಾಣೆ, ರಾಯಘಡ ಜಿಲ್ಲೆಗಳಲ್ಲಿ ಗಂಟೆಗೆ 100-120 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.

https://www.tv9marathi.com/maharashtra/cyclone-nisarga-live-updates-226838.html

ಕರಾವಳಿ ಭಾಗದಲ್ಲಿಯೂ ನಿಸರ್ಗ ಚಂಡಮಾರುತದ ಎಫೆಕ್ಟ್ ಶುರುವಾಗಿದೆ. ಅರಬ್ಬಿಸಮುದ್ರದಿಂದ ದಡಕ್ಕೆ ಭಾರಿ ಅಲೆಗಳು ಅಪ್ಪಳಿಸುತ್ತಿವೆ.

ಮುಂದಿನ 24 ಗಂಟೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಮುಂಜಾಗ್ರತಾ ಕ್ರಮವಾಗಿ ದಕ್ಷಿಣಕನ್ನಡ ಜಿಲ್ಲಾಡಳಿತ ಆರೆಂಜ್ ಅಲರ್ಟ್ ಘೋಷಿಸಿದೆ. ಕಾರವಾರ, ಅಂಕೋಲಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಹಳಿಯಾಳದಲ್ಲಿ ಮೋಡ ಮುಸುಕಿದ ವಾತಾವರಣ ಕಂಡು ಬಂದಿದೆ. ಅರಬ್ಬಿಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

ಮಲ್ಪೆ ಬಂದರಿನಲ್ಲಿ ಲಂಗರು ಹಾಕಿರುವ ಬೋಟ್​ಗಳು:
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದಲೇ ಸಾಧಾರಣ ಮಳೆ ಶುರುವಾಗಿದ್ದು, ನಿರಂತರವಾಗಿ ಬಿಟ್ಟು ಬಿಡದೆ ಮಳೆರಾಯ ಆರ್ಭಟ ಮುಂದುವರೆಸಿದ್ದಾನೆ.ಗಂಟೆಗೆ ಸುಮಾರು 50 ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ.ರಾಜ್ಯ ಹವಾಮಾನ ಇಲಾಖೆ ಗಾಳಿ ಮಳೆಯ ಮುನ್ಸೂಚನೆ ನೀಡಿದ್ದು, ಕಡಲತೀರದ ಜನರಲ್ಲಿ‌‌ ಆತಂಕ ಮನೆ ಮಾಡಿದೆ. ಜಿಲ್ಲಾಡಳಿತ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಿದೆ. ಹೀಗಾಗಿ ಮಲ್ಪೆ ಬಂದರಿನಲ್ಲಿ ಸಾವಿರಾರು ಬೋಟ್​ಗಳು ಲಂಗರು ಹಾಕಿವೆ.

ಗುಜರಾತ್​ಗೂ ಅಪ್ಪಳಿಸಲಿದೆ ಮಹಾ ಚಂಡಮಾರುತ:
ಗುಜರಾತ್​ನಲ್ಲಿ 35 ಸಾವಿರ ಜನರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ವಿಮಾನ ಸಂಚಾರ ಸ್ಥಗಿತವಾಗಿದೆ. ಕಡಲ ತೀರ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಜನತೆಗೆ ಮನೆಯೊಳಗೆ ಇರುವಂತೆ ಸೂಚನೆ ನೀಡಲಾಗಿದೆ.ಗುಜರಾತ್​ನಲ್ಲಿ NDRF ತಂಡಗಳ ನಿಯೋಜನೆ ಮಾಡಲಾಗಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more