ಸಾರಿಗೆ ಯೋಜನೆಯಿಂದಲೂ ಚೀನಾ ಕಂಪನಿಗಳಿಗೆ ಗೇಟ್‌ಪಾಸ್: ಗಡ್ಕರಿ ಖಡಕ್ ನಿರ್ಧಾರ

ನವದೆಹಲಿ: ಕೇಂದ್ರ ಸರ್ಕಾರ ಚೀನಾ ವಿರುದ್ಧದ ಪ್ರತಿಕಾರವನ್ನ ಮತ್ತಷ್ಟು ತೀವ್ರಗೊಳಿಸಿದೆ. ಎರಡು ದಿನಗಳ ಹಿಂದಷ್ಟೇ ಚೀನಾ ಮೂಲದ 59 ಆಪ್‌ಗಳನ್ನ ಬ್ಯಾನ್‌ ಮಾಡಿ ಆದೇಶ ಹೊರಡಿಸಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಈ ಌಪ್‌ಗಳು ಭಾರತದಲ್ಲಿ ಬ್ಲಾಕ್‌ ಆಗಿವೆ.

ಈಗ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಕೂಡಾ ತಮ್ಮ ಇಲಾಖೆಯಲ್ಲಿನ ಯೋಜನೆಗಳಿಂದ ಚೀನಾಕ್ಕೆ ಗೇಟ್‌ ಪಾಸ್‌ ನೀಡೋದಾಗಿ ಹೇಳಿದ್ದಾರೆ. ಭೂ ಸಾರಿಗೆಯ ಯೋಜನೆಗಳಲ್ಲಿ, ಚಿಕ್ಕ, ಅತಿ ಚಿಕ್ಕ ಮತ್ತು ಮಧ್ಯಮ ಗಾತ್ರದ ವ್ಯಾಪಾರ ವಹಿವಾಟುಗಳಲ್ಲಿ ಚೀನಾ ಕಂಪನಿಗಳು ಮತ್ತು ಚೀನಾದ ಕಂಪನಿಗಳ ಪಾಲುದಾರಿಕೆ ಹೊಂದಿರುವ ಕಂಪನಿಗಳನ್ನ ಕೂಡಾ ನಿಷೇಧಿಸುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ಶೀಘ್ರದಲ್ಲೇ ಆದೇಶ ಹೊರಡಿಸುವುದಾಗಿ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. ಜೊತೆಗೆ ಈಗಾಗಲೇ ಜಾರಿಯಲ್ಲಿರುವ ಯೋಜನೆಗಳು ಮತ್ತು ಕೆಲಸ ಆರಂಭವಾಗಿ ಅರ್ಧದಲ್ಲಿರುವ ಯೋಜನೆಗಳಿಂದಲೂ ಕೂಡಾ ಚೀನಾ ಕಂಪನಿಗಳು ಅಥವಾ ಪಾಲುದಾರಿಕೆಯಲ್ಲಿನ ಕಂಪನಿಗಳ ಗುತ್ತಿಗೆಯನ್ನ ರದ್ದು ಪಡಿಸುವುದಾಗಿ ತಿಳಿಸಿದ್ದಾರೆ. ಇಂಥ ಯೋಜನೆಗಳಿಗೆ ಮತ್ತೇ ಹೊಸದಾಗಿ ಟೆಂಡರ್‌ ಕರೆಯುವುದಾಗಿ ಗಡ್ಕರಿ ತಿಳಿಸಿದ್ದಾರೆ.

Related Tags:

Related Posts :

Category:

error: Content is protected !!