ಈ‌ ವರ್ಷದ ಗಣರಾಜ್ಯೋತ್ಸವಕ್ಕೆ ವಿದೇಶಿ ಅತಿಥಿ ಆಹ್ವಾನಿಸಲ್ಲ- ಭಾರತೀಯ ವಿದೇಶಾಂಗ ಇಲಾಖೆ

ಪ್ರತಿ ವರ್ಷ ವಿದೇಶಿ ಸರ್ಕಾರದ ಮುಖ್ಯಸ್ಥರಿಗೆ ಗಣರಾಜ್ಯೋತ್ಸವಕ್ಕೆ ಆಹ್ವಾನ ನೀಡಲಾಗುತ್ತಿತ್ತು. ಆದರೆ, ಈ‌ ವರ್ಷದ ಗಣರಾಜ್ಯೋತ್ಸವಕ್ಕೆ ವಿದೇಶಿ ಅತಿಥಿಗಳನ್ನು ಆಹ್ವಾನಿಸುವುದಿಲ್ಲ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

  • TV9 Web Team
  • Published On - 19:25 PM, 14 Jan 2021
ಸಾಂಕೇತಿಕ ಚಿತ್ರ

ದೆಹಲಿ: ಈ‌ ವರ್ಷದ ಗಣರಾಜ್ಯೋತ್ಸವಕ್ಕೆ ವಿದೇಶಿ ಅತಿಥಿಗಳನ್ನು ಆಹ್ವಾನಿಸುವುದಿಲ್ಲ. ಕೊರೊನಾ ಕಾರಣದಿಂದ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ವಿದೇಶಿ ಅತಿಥಿ‌ಗೆ ಆಹ್ವಾನವಿಲ್ಲ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. ಪ್ರತಿ ವರ್ಷ ವಿದೇಶಿ ಸರ್ಕಾರದ ಮುಖ್ಯಸ್ಥರಿಗೆ ಗಣರಾಜ್ಯೋತ್ಸವಕ್ಕೆ ಆಹ್ವಾನ ನೀಡಲಾಗುತ್ತಿತ್ತು. ಆದರೆ, ಈ ಬಾರಿ ವಿದೇಶಿ ಸರ್ಕಾರದ ಮುಖ್ಯಸ್ಥರನ್ನು ಆಹ್ವಾನಿಸದೇ ಇರಲು ಭಾರತೀಯ ವಿದೇಶಾಂಗ ಇಲಾಖೆ ತೀರ್ಮಾನ ಮಾಡಿದೆ.

ಈ ಮೊದಲು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆಹ್ವಾನಿಸಲಾಗಿತ್ತು. ಆದರೆ ಬ್ರಿಟನ್​ನಲ್ಲಿ ರೂಪಾಂತರಗೊಂಡ ಕೊರೊನಾದಿಂದ ಬೋರಿಸ್ ಜಾನ್ಸನ್ ಬರಲು ನಿರಾಕರಿಸಿದರು. ಹೀಗಾಗಿ, ಬೇರೆ ದೇಶದ ಮುಖ್ಯಸ್ಥರನ್ನೂ ಆಹ್ವಾನಿಸದೇ ಇರಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿಂದೆ ಎರಡು ಬಾರಿ ಮಾತ್ರ ವಿದೇಶಿ ಗಣ್ಯ ಅತಿಥಿ ಇಲ್ಲದೇ ಗಣರಾಜ್ಯೋತ್ಸವ ಆಚರಣೆಯಾಗಿತ್ತು.

ಹೇಗೂ ಮುಖ್ಯ ಅತಿಥಿಗಳಿಲ್ಲ.. ಗಣರಾಜ್ಯೋತ್ಸವ ಸಮಾರಂಭ ಆಚರಿಸುವುದೂ ಬೇಡ: ಶಶಿ ತರೂರ್