ಆಕ್ಸ್​ಫರ್ಡ್ ಆಸ್ಪತ್ರೆಯಲ್ಲಿ ಸ್ವಚ್ಛತೆ ಮಾಯ, ಹಿಂಸೆ ಅನುಭವಿಸುತ್ತಿದ್ದಾರೆ ಸೋಂಕಿತರು

ಆನೇಕಲ್: ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ಬಳಿ ಅತ್ತಿಬೆಲೆಯ ಆಕ್ಸ್​ಫರ್ಡ್ ಆಸ್ಪತ್ರೆಯಲ್ಲಿ ಸ್ವಚ್ಛತೆ ಮಂಗ ಮಾಯವಾಗಿದೆ. ಆಸ್ಪತ್ರೆಯಲ್ಲಿರುವ ಸ್ನಾನದ ಕೋಣೆ, ಶೌಚಾಲಯಗಳಲ್ಲಿ ಶುಚಿತ್ವ ಮರೆಯಾಗಿದೆ . ಈ ಬಗ್ಗೆ ಕೊರೊನಾ ಸೋಂಕಿತರು ಮನವಿ ಮಾಡಿಕೊಂಡ್ರೂ ಸಿಬ್ಬಂದಿ ಮಾತ್ರ ಕ್ಯಾರೆ ಅನ್ತಿಲ್ಲ.

ಒಂದು ವಾರದ ಹಿಂದೆ ಈ ಆಸ್ಪತ್ರೆಗೆ ಸಚಿವ ಸುರೇಶ್ ಕುಮಾರ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಆಸ್ಪತ್ರೆ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡಿದ್ರು. ಸ್ವಚ್ಛತೆಗೆ ಆದ್ಯತೆ ನೀಡುವುದಾಗಿ ಆಸ್ಪತ್ರೆ ಸಿಬ್ಬಂದಿ ತಲೆ ಅಲ್ಲಾಡಿಸಿದ್ರು. ಆದರೆ ಈಗ ಆಸ್ಪತ್ರೆಯಲ್ಲಿ ಅದೇ ಅವ್ಯವಸ್ಥೆ ಎದ್ದು ಕಾಣುತ್ತಿದೆ.

ಅಲ್ಲದೆ ಈ ಬಗ್ಗೆ ಹಲವಾರು ಬಾರಿ ಮಾದ್ಯಮಗಳು ವರದಿ ಮಾಡಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಪ್ರತಿನಿತ್ಯ ಶುಚಿತ್ವವಿಲ್ಲದ ಸ್ನಾನದ ಕೋಣೆ, ಶೌಚಾಲಯಗಳನ್ನು ಬಳಸಲು ಕೊರೊನಾ ಸೋಂಕಿತರಿಗೆ ಹಿಂಸೆಯಾಗುತ್ತಿದೆಯಂತೆ.

Related Tags:

Related Posts :

Category:

error: Content is protected !!