ಮೋಡದ ಮರೆಯಲ್ಲಿ ಮೋಜಿನಲ್ಲಿದ್ದವರಿಗೆ ಶಾಕ್, ನಂದಿ ಬೆಟ್ಟಕ್ಕೆ ವಾಹನ ಸಂಚಾರಕ್ಕೆ ಬ್ರೇಕ್

ಚಿಕ್ಕಬಳ್ಳಾಪುರ: ಬಡವರ ಊಟಿ ಅಂದ್ರೆ ಅದು ನಂದಿ ಹಿಲ್ಸ್​​​​​​​. ಚಳಿಗಾಲದಲ್ಲಂತೂ ಬೆಳ್ಳಿ ಮೋಡಗಳನ್ನು ನೋಡೋಕೆ ಸಾವಿರಾರು ಮಂದಿ ಬೆಟ್ಟಕ್ಕೆ ಲಗ್ಗೆ ಹಾಕ್ತಾರೆ. ಬೈಕ್​​​​​​, ಕಾರ್​​​​​​ನಲ್ಲಿ ಬೆಟ್ಟ ಏರಿ ಮಜಾ ಮಾಡ್ತಾರೆ. ಆದ್ರೀಗ, ಜಿಲ್ಲಾಡಳಿತ ಪ್ರವಾಸಿಗರಿಗೆ ಶಾಕ್​​ ಕೊಟ್ಟಿದೆ.

ಚುಮುಚುಮು ಚಳಿ. ಹಸಿರು ಸೀರೆ ಉಟ್ಟಂತಿರೋ ಬೆಟ್ಟ. ಕಾಲ ಕೆಳಗೆ ಮೋಡದ ಹಾಸಿಗೆ ನೋಡೋದೇ ಒಂದು ಸೊಬಗು. ತಿರುವಿನಲ್ಲೊಮ್ಮೆ ವೆಹಿಕಲ್​​​​​​ ನಿಲ್ಲಿಸಿ, ಪ್ರಕೃತಿಯ ಅಂದ ಸವಿಯೋ ಮಜಾವೆ ಬೇರೆ. ನಂದಿ ಬೆಟ್ಟದ ದಾರಿಯಲ್ಲಿ ಈ ರೀತಿಯ ಹಿತಾನುಭವಕ್ಕೆ ಈಗ ಜಿಲ್ಲಾಡಳಿತ ಬ್ರೇಕ್​​​​​​ ಹಾಕಿದೆ. ಯಾಕಂದ್ರೆ, ನಂದಿಬೆಟ್ಟದ ಮೇಲೆ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.

ಎಸ್​​​​​.. ಪ್ರವಾಸಿಗರ ಹಾಟ್​ಸ್ಫಾಟ್​​​​ ಆಗಿರೋ, ಚಿಕ್ಕಬಳ್ಳಾಪುರದ ನಂದಿಗಿರಿಧಾಮಕ್ಕೆ ವಾಹನಗಳಲ್ಲಿ ತೆರಳೋಕೆ ಆಗಲ್ಲ. ಯಾಕಂದ್ರೆ, ಪ್ರವಾಸಿಗರಿಗಿಂತ ಕಾರು, ಬೈಕ್, ಆಟೋಗಳ ಸದ್ದೇ ಬೆಟ್ಟದಲ್ಲಿ ಹೆಚ್ಚಾಗ್ತಿತ್ತು. ಅಲ್ಲದೆ, ವಾಯು ಮಾಲಿನ್ಯ, ಶಬ್ಧ ಮಾಲಿನ್ಯದಿಂದಲೂ ಬೆಟ್ಟದ ಪರಿಸರಕ್ಕೆ ಧಕ್ಕೆ ಉಂಟಾಗ್ತಿತ್ತು. ಹೀಗಾಗಿ, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹಾಗೂ ತೋಟಗಾರಿಕೆ ಇಲಾಖೆ, ಬೆಟ್ಟದ ಮೇಲೆ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ.

ಸದ್ಯ, ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರೋ ಕಾರಣ, ಮೊದಲು ಬಂದ ಕೆಲ ವಾಹನಗಳಿಗೆ ಮಾತ್ರ ಬೆಟ್ಟಕ್ಕೆ ಪ್ರವೇಶ ನೀಡಲಾಗ್ತಿದೆ. ಇನ್ನುಳಿದಂತೆ ಎಲ್ಲ ದಿನವೂ, ವಾಹನಗಳ ಸಂಚಾರಕ್ಕೆ ಬ್ರೇಕ್​​​​​​ ಹಾಕಲಾಗಿದೆ. ಪರಿಸರ ಸ್ನೇಹಿ ವಾಹನಗಳಲ್ಲಿ ಬೆಟ್ಟಕ್ಕೆ ತೆರಳಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಕಾಲ್ನಡಿಗೆ ಮೂಲಕವೂ ತೆರಳಬಹುದು. ಆದ್ರೆ, ಇದಕ್ಕೆ, ಪ್ರವಾಸಿಗರು ಆಕ್ಷೇಪ ಎತ್ತಿದ್ದಾರೆ. ಇದ್ರಿಂದ ಮಕ್ಕಳು, ವಯೋವೃದ್ಧರಿಗೆ ತೊಂದರೆ ಉಂಟಾಗಲಿದೆ ಅನ್ನುತ್ತಿದ್ದಾರೆ.

ಒಟ್ನಲ್ಲಿ, ಗಿರಿಧಾಮದ ಪರಿಸರ ಕಾಪಾಡಲು ಜಿಲ್ಲಾಡಳಿತ, ವಾಹನಗಳಿಗೆ ಬ್ರೇಕ್​​ ಹಾಕಿದೆ. ಆದ್ರೆ, ಇದಕ್ಕೆ ಪ್ರವಾಸಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!