ನೈಟ್‌ ಕರ್ಫ್ಯೂ ಎಂಡ್.. ಸಂಡೇ ಲಾಕ್‌ಡೌನ್‌ಗೆ ಬ್ರೇಕ್, ಎಂದಿನಂತೆ ಎಲ್ಲಾ ಆರಂಭ

ಬೆಂಗಳೂರು: ಕಿಲ್ಲರ್‌ ಕೊರೊನಾ ದಿನೇದಿನೆ ಏಟಿನ ಮೇಲೆ ಏಟು ಕೊಡುತ್ತಾ ತನ್ನ ಆರ್ಭಟವನ್ನ ಹೆಚ್ಚಿಸಿಕೊಳ್ಳುತ್ತಲೇ ಸಾಗ್ತಿದೆ. ಕರುನಾಡಿನಲ್ಲೇ 1,29,287 ಮಂದಿಗೆ ಸೋಂಕು ವಕ್ಕರಿಸಿದೆ. ನಿನ್ನೆ ಒಂದೇ ದಿನ 5172 ಮಂದಿಗೆ ಕೊರೊನಾ ದಾಳಿ ಮಾಡಿದ್ದು, 98 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಕೊರೊನಾ ಅನ್ನೋ ಹೆಮ್ಮಾರಿ ದೇಶಕ್ಕೆ ಕಾಲಿಡುತ್ತಿದ್ದಂತೆ ದೇಶದಲ್ಲಿ ಲಾಕ್‌ಡೌನ್ ಜಾರಿಯಾಯ್ತು. ಸೋಂಕು ಹೆಚ್ಚಿರೋ ಕಡೆ ಸೀಲ್‌ಡೌನ್ ಮಾಡಲಾಯ್ತು. ಕೊರೊನಾ ಸೋಂಕು ಕಂಟ್ರೋಲ್‌ಗೆ ಬರುತ್ತೆ ಅನ್ನೋ ನಂಬಿಕೆಯಿಂದ ಫ್ರೀಡೌನ್‌ ಮಾಡಿದ್ರು. ಇದ್ರ ಬೆನ್ನಲ್ಲೇ ಇದೀಗ ನಿನ್ನೆಯಿಂದಲೇ ಅನ್‌ಲಾಕ್‌ 3.0 ಜಾರಿಯಾಗಿದೆ. ಈ ಮೂಲಕ ಜನಜೀವನ ನಾರ್ಮಲ್ ಮೋಡ್‌ಗೆ ಬಂದಿದೆ.

ಇಂದಿನಿಂದ ಕರುನಾಡಿನಲ್ಲಿ ಇರೋದಿಲ್ಲ ಸಂಡೇ ಲಾಕ್!
ಹೌದು.. ನಿನ್ನೆಯಿಂದ ಅನ್‌ಲಾಕ್‌ 3.0 ದೇಶದಲ್ಲಿ ಜಾರಿಗೆ ಬಂದಿದೆ. ಅದರಂತೆ ರಾಜ್ಯದಲ್ಲೂ ಕೂಡ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನ ಯಥಾವತ್ತಾಗಿ ಫಾಲೋ ಮಾಡಿದ್ದಾರೆ. ರಾಜ್ಯದಲ್ಲಿ ಹೇರಲಾಗಿದ್ದ ನೈಟ್‌ ಕರ್ಫ್ಯೂ.. ಸಂಡೇ ಲಾಕ್‌ಡೌನ್‌ ಗೂ ಬ್ರೇಕ್ ಹಾಕಲಾಗಿದೆ. ಹೀಗಾಗಿ ಇಂದಿನಿಂದ ರಾಜ್ಯದಲ್ಲಿ ಸಂಡೇ ಲಾಕ್‌ಡೌನ್ ಇರೋದಿಲ್ಲ.

ರಾತ್ರಿ ಸಂಚಾರಕ್ಕೆ ಅಡೆತಡೆ ಇಲ್ಲ.. ಕಂಪ್ಲೀಟ್‌ ಫ್ರೀಡೌನ್!
ಹೌದು.. ಇಷ್ಟು ದಿನ ಬೆಂಗಳೂರು ಸೇರಿದಂತೆ ರಾಜ್ಯಾದಂತ ನೈಟ್‌ ಕರ್ಫ್ಯೂ ಜತೆಗೆ ಸಂಡೇ ಮಾತ್ರ ಕಂಪ್ಲೀಟ್ ಲಾಕ್‌ಡೌನ್ ಮಾಡಿ ಅಗತ್ಯ ಸೇವೆಗಳಿಗೆ ಮಾತ್ರವೇ ಅವಕಾಶವನ್ನ ನೀಡಲಾಗಿತ್ತು.. ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ನೈಟ್ ಕರ್ಫ್ಯೂ ಜಾರಿ ಮಾಡಲಾಗಿತ್ತು. ಇದ್ರ ಜತೆಗೆ ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್ ಮಾಡಿ ಮನೆಯಿಂದ ಯಾರೂ ಹೊರಗೆ ಹೆಜ್ಜೆ ಇಡೋದಕ್ಕೂ ಅವಕಾಶ ನಿರ್ಬಂಧಿಸಲಾಗಿತ್ತು. ಆದ್ರೀಗ ನಿನ್ನೆಯಿಂದ ನೈಟ್‌ ಕರ್ಫ್ಯೂಗೂ ಬ್ರೇಕ್ ಬಿದ್ದಿದೆ. ಅಷ್ಟೇ ಅಲ್ಲ ಇಂದಿನಿಂದ ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಎಲ್ಲಿಯೂ ಸಂಡೇ ಲಾಕ್‌ ಇರೋದಿಲ್ಲ. ಉಳಿದೆಡೆ ಎಲ್ಲಿ ಬೇಕಾದ್ರೂ ಓಡಾಡಬಹುದು.. ರಾತ್ರಿ ಸಂಚಾರಕ್ಕೂ ಯಾವುದೇ ನಿರ್ಬಂಧ ಇಲ್ಲ. ಆದ್ರೆ ದೈಹಿಕ ಅಂತರ ಕಾಪಾಡೋದ್ರ ಜತೆಗೆ ಎಲ್ಲರೂ ಮಾಸ್ಕ್ ಧರಿಸೋದು ಕಡ್ಡಾಯವಾಗಿದೆ.

ಇನ್ನು ಕಟೇನ್ಮೆಂಟ್‌ ಜೋನ್‌ಗಳಲ್ಲಿ ಮಾತ್ರವೇ ಲಾಕ್‌ಡೌನ್ ನಿಯಮ ಜಾರಿಯಲ್ಲಿರುತ್ತವೆ.. ಹಾಗಾದ್ರೆ ಅನ್‌ಲಾಕ್‌ 3.0ನಲ್ಲಿ ಯಾವುದಕ್ಕೆಲ್ಲಾ ವಿನಾಯಿತಿ ನೀಡಲಾಗಿದೆ.. ಯಾವುದಕ್ಕೆ ನಿರ್ಬಂಧ ಮುಂದುವರಿಯಲಿದೆ ಅನ್ನೋದನ್ನ ನೋಡೋದಾದ್ರೆ.

ಅನ್​ಲಾಕ್​ 3.0 ರೂಲ್ಸ್!
ರಾಜ್ಯ ಸರ್ಕಾರದ ರೂಲ್ಸ್ ಪ್ರಕಾರ ನಿನ್ನೆಯಿಂದ ನೈಟ್ ಕರ್ಫ್ಯೂಗೆ ಕಂಪ್ಲೀಟ್ ಗುಡ್ ಬೈ ಹೇಳಲಾಗಿದೆ. ಹೀಗಾಗಿ ರಾತ್ರಿ ವೇಳೆ ಜನ, ವಾಹನ ಸಂಚಾರಕ್ಕೆ ಇನ್ಮುಂದೆ ಯಾವುದೇ ಅಡೆತಡೆ ಇರಲ್ಲ. ಆಗಸ್ಟ್ 5ರಿಂದ ಯೋಗ ಸೆಂಟರ್, ಜಿಮ್ ಓಪನ್​ಗೆ ಅನುಮತಿ ನೀಡಿದೆ, ಜೊತೆಗೆ ದೈಹಿಕ ಅಂತರ ಪಾಲಿಸಿ ಸ್ವಾತಂತ್ರ್ಯೋತ್ಸವ ಆಚರಣೆಗೆ ಅನುಮತಿ ನೀಡಲಾಗಿದೆ. ಸೋಂಕು ಹೆಚ್ಚಿರೋದ್ರಿಂದ, ಶಾಲಾ-ಕಾಲೇಜು, ಕೋಚಿಂಗ್ ಸೆಂಟರ್​ ಆಗಸ್ಟ್​ 31ರವರೆಗೆ ಕ್ಲೋಸ್ ಆಗಿರಲಿವೆ.

ಇದೇ ರೀತಿ ಮೆಟ್ರೋ ಸಂಚಾರಕ್ಕೂ ನಿರ್ಬಂಧ ಮುಂದುವರಿದಿದ್ದು, ಥಿಯೇಟರ್​ಗಳು, ಸ್ವಿಮ್ಮಿಂಗ್ ಪೂಲ್ಸ್ ಬಂದ್ ಆಗಿರಲಿವೆ. ಮನರಂಜನಾ ಪಾರ್ಕ್​ಗಳು, ಬಾರ್​ಗಳು, ಆಡಿಟೋರಿಯಂಗಳು, ರಂಗ ಮಂದಿರಗಳು, ಕಲ್ಯಾಣ ಮಂಟಪಗಳ ರೀತಿಯ ಕೇಂದ್ರಗಳನ್ನ ಕೂಡ ಆಗಸ್ಟ್​ 31ರವರೆಗೆ ಓಪನ್ ಮಾಡುವಂತಿಲ್ಲ. ಯಾವುದೇ ಧಾರ್ಮಿಕ, ರಾಜಕೀಯ, ಕ್ರೀಡೆ, ಶೈಕ್ಷಣಿಕ, ಮನರಂಜನೆ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ ಅಂತಾ ಸರ್ಕಾರ ಹೇಳಿದೆ. ಇನ್ನು ಮದುವೆ ಮತ್ತು ಅಂತ್ಯಕ್ರಿಯೆಗೆ ಹಿಂದಿನ ನಿಯಮವೇ ಮುಂದುವರಿದಿದ್ದು, ಮದುವೆಯಲ್ಲಿ 50 ಜನ ಮತ್ತು ಅಂತ್ಯಕ್ರಿಯೆಯಲ್ಲಿ 20 ಜನರು ಮಾತ್ರ ಪಾಲ್ಗೊಳ್ಳಲು ಅವಕಾಶ ಇರಲಿದೆ.

ಈ ಮೂಲಕ ಲಾಕ್​ಡೌನ್ ಸೀಲ್​ಡೌನ್​ನಲ್ಲಿ ಜೀವನ ಸಾಗಿಸಿದ್ದ ಜನ, ಫ್ರೀಡೌನ್ ಜೀವನ ಆರಂಭಬಹುದಾಗಿದೆ. ಪ್ರತಿ ಬಾರಿಯೂ ವೀಕೆಂಡ್‌ ಲಾಕ್‌ ಮಾಡ್ತಿದ್ದರಿಂದ ಜನ ಮನೆಯಲ್ಲೇ ಲಾಕ್‌ ಆಗ್ತಿದ್ರು. ಆದ್ರೀಗ ಸಂಡೇ ಮಸ್ತಿಗೆ ಯಾವುದೇ ಅಡ್ಡಿಯಿಲ್ಲ.. ಸರ್ಕಾರ ಫ್ರೀ ಬಿಟ್ಟಿದೆ ಅಂತ ನಿರ್ಲಕ್ಷ್ಯ ವಹಿಸದೆ ಜನ ತಮ್ಮ ಹುಷಾರ್‌ನಲ್ಲಿ ಇರಬೇಕು.. ದೈಹಿಕ ಅಂತರದ ಜತೆ ಮಾಸ್ಕ್ ಧರಿಸಿ ಕೊರೊನಾ ವಿರುದ್ಧ ಹೋರಾಟ ನಡೆಸಬೇಕಿರೋದು ಇಂಪಾರ್ಟೆಂಟ್.

Related Tags:

Related Posts :

Category:

error: Content is protected !!