ಸಾಮಾಜಿಕ ಜಾಲತಾಣಕ್ಕೆ ಆಧಾರ್ ಲಿಂಕ್ ಇಲ್ಲ: ರವಿಶಂಕರ್ ಪ್ರಸಾದ್

ಸಾಮಾಜಿಕ ಜಾಲತಾಣಗಳನ್ನು ಆಧಾರ್ ಜತೆ ಲಿಂಕ್ ಮಾಡುವ ಪ್ರಸ್ತಾಪ ಇಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಲೋಕಸಭೆಯಲ್ಲಿ ಹೇಳಿದ್ದಾರೆ. ವೈಯಕ್ತಿಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಆಧಾರ್ ಜತೆ ಲಿಂಕ್ ಮಾಡುವ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾಪ ಇಲ್ಲ ಎಂದಿದ್ದಾರೆ.

ಮಾಧ್ಯಮಗಳ ವಿರುದ್ಧ ರಾಹುಲ್ ಕಿಡಿ:
ಜಾರ್ಖಂಡ್​ನಲ್ಲಿ 10,000ಆದಿವಾಸಿಗಳ ವಿರುದ್ಧ ಕಠಿಣ ದೇಶದ್ರೋಹದ ಕಾನೂನನಡಿ ಪ್ರಕರಣ ದಾಖಲಿಸಿರುವುದು ವರದಿಯಾದ ನಂತರ ರಾಹುಲ್ ಗಾಂಧಿ ಮಾಧ್ಯಮಗಳ ವಿರುದ್ಧ ಕಿಡಿಕಾರಿಕಾರಿದ್ದಾರೆ. ಇಂಥ ಆತಂಕಕಾರಿ ವಿಷಯದ ಬಗ್ಗೆ ಮಾಧ್ಯಮಗಳು ಸೊಲ್ಲೆತ್ತದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ರಾಹುಲ್ ಈ ವಿಷಯದಲ್ಲಿ ನಾಗರಿಕ ಸಮಾಜ ಧ್ವನಿ ಎತ್ತಬೇಕೆಂದು ಒತ್ತಾಯಿಸಿದ್ದಾರೆ.

ಎನ್‌ಸಿಪಿ-ಶಿವಸೇನೆ-ಕಾಂಗ್ರೆಸ್‌ ಸರ್ಕಾರ..?
ಶಿವಸೇನೆಯನ್ನ ತಮ್ಮೊಟ್ಟಿಗೆ ಸೇರಿಸಿಕೊಳ್ಳುವ ಬಗ್ಗೆ ಅಸಮಾಧಾನ ಹೊಂದಿದ್ದ ಸೋನಿಯಾ ಗಾಂಧಿ ಕೊನೆಗೂ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಸಂಧಾನಕ್ಕೆ ಮಣಿದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಎನ್‌ಸಿಪಿ-ಶಿವಸೇನೆ-ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚನೆ ಬಹುತೇಕ ಖಚಿತವಾಗಿದೆ.

‘ಎನ್​ಆರ್​ಸಿ ಜಾರಿ ಮಾಡಲು ಬಿಡುವುದಿಲ್ಲ’:
ಬಂಗಾಳದಲ್ಲಿ ಎನ್​ಆರ್​ಸಿ ಜಾರಿ ಮಾಡಲು ನಾವು ಯಾವತ್ತೂ ಬಿಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕೆಲವರು ಎನ್​ಆರ್​ಸಿ ಜಾರಿ ಮಾಡುವ ಮೂಲಕ ರಾಜ್ಯದಲ್ಲಿ ಸಂಘರ್ಷವನ್ನು ಉಂಟುಮಾಡಲು ಬಯಸುತ್ತಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಲಂಕಾದಲ್ಲಿ ‘ಅಣ್ತಮ್ಮ’ ಅಧಿಕಾರಕ್ಕೆ:
ಶ್ರೀಲಂಕಾ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಗೊಟಬಯ ರಾಜಪಕ್ಸ ತಮ್ಮ ಹಿರಿಯ ಸಹೋದರ ಹಾಗೂ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸ ಅವರನ್ನ ನೂತನ ಪ್ರಧಾನಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಲಂಕಾದಲ್ಲಿ ಅಣ್ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಂತಾಗಿದೆ.

Related Posts :

Category:

error: Content is protected !!