ಡಿಸೆಂಬರ್ 6ರಂದು ಆಚರಿಸುತ್ತಿದ್ದ ‘ಶೌರ್ಯ ದಿವಸ್’ ‘ಕರಾಳ ದಿನ’ ಕ್ಕೆ ಬಿತ್ತು ಬ್ರೇಕ್

ದೆಹಲಿ: ಅಯೋಧ್ಯೆಯಲ್ಲೇ ರಾಮಮಂದಿರ ನಿರ್ಮಾಣವಾಗಬೇಕು.. ವಿವಾದಿತ ಪ್ರದೇಶ ರಾಮಲಲ್ಲಾಗೆ ಸೇರಿದ್ದು ಅಂತ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿ ದಿನಗಳೇ ಉರುಳಿವೆ. ದೇಶದ ಜನ ಕೂಡ ಯಾವುದೇ ಕೋಮು ಪ್ರಚೋದನೆಗೆ ಒಳಗಾಗದೆ ಶಾಂತ ರೀತಿಯಲ್ಲೇ ತೀರ್ಪನ್ನ ಸ್ವಾಗತಿಸಿದ್ದಾರೆ. ಇಡೀ ದೇಶವೇ ಸುಪ್ರೀಂ ತೀರ್ಪಿಗೆ ತಲೆಬಾಗಿದೆ. ಇದೀಗ ಅಯೋಧ್ಯೆ ವಿಚಾರವಾಗಿ ಮತ್ತೊಮ್ಮೆ ಶಾಂತಿ ಮಂತ್ರ ಸಾರಲು ಧಾರ್ಮಿಕ ಮುಖಂಡರು ಮುಂದಾಗಿದ್ದಾರೆ.

‘ಶೌರ್ಯ ದಿವಸ್’ ‘ಕರಾಳ ದಿನ’ ಆಚರಿಸದಿರಲು ಧರ್ಮಗುರುಗಳ ಕರೆ
ಡಿಸೆಂಬರ್ 6 1992ರ ಡಿಸೆಂಬರ್ 6ರಂದು ಹಿಂದೂ ಕರಸೇವಕರು ಬಾಬ್ರಿ ಮಸೀದಿಯನ್ನ ಧ್ವಂಸ ಮಾಡಿದ್ರು. ಅಂದಿನಿಂದ ಆ ದಿನವನ್ನ ಶೌರ್ಯ ದಿನವಾಗಿ ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂ ಸಂಘಟನೆಗಳು ಆಚರಣೆ ಮಾಡಿಕೊಂಡು ಬರ್ತಿದ್ವು. ಪ್ರತಿವರ್ಷ ದೇಶಾದ್ಯಂತ ಶೌರ್ಯ ದಿವಸ್ ಆಚರಿಸಿ ರಾಮಮಂದಿರ ನಿರ್ಮಾಣದ ಸಂಕಲ್ಪ ಮಾಡ್ತಿದ್ರು. ಇದ್ರ ಜೊತೆ ಜೊತೆಗೆ ಮುಸ್ಲಿಂ ಸಂಘಟನೆಗಳು ಇದೇ ದಿನವನ್ನ ಕರಾಳ ದಿನವನ್ನಾಗಿ ಆಚರಿಸುತ್ತಿದ್ರು. ಆದ್ರೆ ಈ ಬಾರಿ ಆ ಎರಡೂ ದಿನಗಳಿಗೂ ಬ್ರೇಕ್ ಬಿದ್ದಿದೆ.

ಈ ಸಬಂಧ ಸಭೆ ಸೇರಿದ ಹಿಂದೂ ಸಂಘಟನೆಗಳು ಇನ್ಮುಂದೆ ರಾಮಜನ್ಮಭೂಮಿ ವಿಚಾರವಾಗಿ ಶೌರ್ಯ ದಿನ ಆಚರಿಸಿಕೊಂಡು ಹೋಗೋದು ಬೇಡ ಅನ್ನೋ ನಿರ್ಧಾರಕ್ಕೆ ಬಂದಿವೆ. ಮುಖ್ಯವಾಗಿ ರಾಮಜನ್ಮಭೂಮಿ ನ್ಯಾಸ್ ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆಗಳು ಈ ಮಹತ್ವದ ನಿರ್ಧಾರವನ್ನ ಕೈಗೊಂಡಿವೆ. ಮುಸ್ಲಿಂ ಸಂಘಟನೆಗಳು ಕೂಡ ಕರಾಳ ದಿನ ಆಚರಿಸಬಾರದು ಅಂತ ಡಿಸೈಡ್ ಮಾಡಿವೆ. ಸೋ ಶಾಂತಿ ಮಂತ್ರ ಜಪಿಸಿರೋ ಎರಡೂ ಕಡೆಯವರು ಸುಪ್ರೀಂ ಆದೇಶಕ್ಕೆ ತಲೆಬಾಗಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more