ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹೀಗಿರುತ್ತದೆ

34 ವರ್ಷಗಳ ಅವಧಿಯ ನಂತರ ಕೇಂದ್ರ ಸರಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಿದ್ದು ಎಲ್ಲೆಡೆ ಅದರ ಬಗ್ಗೆ ಚರ್ಚೆ ನಡೆದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, 5ನೇ ತರಗತಿಯವರೆಗೆ ಮಕ್ಕಳ ವಿದ್ಯಾಭ್ಯಾಸ ಅವರವರ ಮಾತೃಭಾಷೆಯಲ್ಲಿ ಆಗಬೇಕೆನ್ನುವ ಅಂಶಕ್ಕೆ ಒತ್ತು ಕೊಟ್ಟಿದ್ದಾರೆ.

ಇನ್ನು 5+3+3+4 ಶಿಕ್ಷಣ ಪದ್ಧತಿ

ಹೊಸ ಶಿಕ್ಷಣ ನೀತಿಯಲ್ಲಿ ಇದುವರೆಗೆ ಚಾಲ್ತಿಯಲ್ಲಿದ್ದ 10+2 ಪದ್ಧತಿಯನ್ನು ಬೈಪಾಸ್ ಮಾಡಲಾಗಿದೆ. ಅದರ ಸ್ಥಾನದಲ್ಲಿ 5+3+3+4 ಪದ್ಧತಿಯನ್ನು ಪ್ರಸ್ತಾಪಿಸಲಾಗಿದೆ. ಮೊದಲ 5 ವರ್ಷಗಳ ಆರಂಭಿಕ ಶಿಕ್ಷಣವನ್ನು ಅಡಿಪಾಯ ಹಂತ ಎಂದು ಕರೆಯಲಾಗಿದೆ. ಮಗುವು ನಾಲ್ಕನೇ ವಯಸ್ಸಿಗೆ ನರ್ಸರಿಗೆ ಸೇರಿ, 5ನೇ ವಯಸ್ಸಿನಲ್ಲಿ ಜ್ಯೂನಿಯರ್ ಕೆಜಿ, 6ನೇ ವಯಸ್ಸಿನಲ್ಲಿ ಸೀನಿಯರ್ ಕೆಜಿ, 7ನೇ ವಯಸ್ಸಿಗೆ ಮೊದಲ ತರಗತಿ ಹಾಗು 8ನೇ ವಯಸ್ಸಿಗೆ ಎರಡನೇ ತರಗತಿಯ ಅಭ್ಯಾಸಗಳನ್ನು ಪೂರೈಸುತ್ತದೆ. ಈ ಅಡಿಪಾಯ ಹಂತದ ಶಿಕ್ಷಣ ಎಲ್ಲಾ ಮಕ್ಕಳಿಗೂ ಕಡ್ಡಾಯ.

6-8 ನೇ ತರಗತಿವರೆಗೆ ಮಾಧ್ಯಮಿಕ ಶಿಕ್ಷಣ ಹಂತ

ನಂತರದ ಮೂರು ವರ್ಷಗಳ ಹಂತವನ್ನು ಪೂರ್ವಭಾವಿ ಶಿಕ್ಷಣವೆಂದು ಪರಿಗಣಿಸಲಾಗಿದ್ದು ಇಲ್ಲಿ ಮಕ್ಕಳು 3ರಿಂದ 5ನೇ ತರಗತಿಯವರೆಗೆ ಶಿಕ್ಷಣ ಪಡೆಯಲಿದ್ದಾರೆ. ಅವರ 11ನೇ ವಯಸ್ಸಿಗೆ ಈ ಹಂತ ಮುಗಿಯುತ್ತದೆ.
ಆದಾದ ನಂತರದ್ದು ಮಾಧ್ಯಮಿಕ ಶಿಕ್ಷಣ ಹಂತ. ಮಕ್ಕಳು 6ನೇ ತರಗತಿಯಿಂದ 8ನೇ ತರಗತಿಯವರೆಗೆ ಅಭ್ಯಾಸ ಮಾಡುತ್ತಾರೆ.

ಪ್ರೌಢಶಿಕ್ಷಣ 4ವರ್ಷ ಅವಧಿಯದ್ದು!

3 ವರ್ಷಗಳ ಮಾಧ್ಯಮಿಕ ಹಂತದ ನಂತರ ಮಕ್ಕಳು 4ವರ್ಷ ಅವಧಿಯ ಪ್ರೌಢಶಿಕ್ಷಣ ಹಂತವನ್ನು ತಲಪುತ್ತಾರೆ.

ಪಸ್ತುತ ಶಿಕ್ಷಣ ವ್ವವಸ್ಥೆಯಲ್ಲಿ ವಿದ್ಯಾರ್ಥಿಯೊಬ್ಬ ಪ್ರೌಢಶಿಕ್ಷಣ ಪಡೆದ ನಂತರ ಎರಡು ವರ್ಷ ಅವಧಿ ಪದವಿ ಪೂರ್ವ ಶಿಕ್ಷಣಕ್ಕೆ ಸೇರಿ ಆಮೇಲೆ ಪದವಿ ವ್ಯಾಸಂಗ ಪೂರೈಸುತ್ತಾನೆ. ಹೊಸ ಶಿಕ್ಷಣ ಪದ್ಧತಿಯಲ್ಲಿ ಪಿಯುಸಿ ವ್ಯಾಸಂಗವನ್ನು ಪ್ರತ್ಯೇಕವಾಗಿರಿಸಿಲ್ಲ ಹಾಗೂ ಪದವಿ ವ್ಯಾಸಂಗ ಮೂರು ಅಥವಾ ನಾಲ್ಕು ವರ್ಷ ಅವಧಿಯದಾಗಿರುತ್ತದೆ.

ಪದವಿ ಶಿಕ್ಷಣದ ಸ್ವರೂಪ ಬದಲು

ಕಾಲೇಜು ಶಿಕ್ಷಣದ ಮೊದಲ ವರ್ಷದ ನಂತರ ಒಂದು ಸರ್ಟಿಫಿಕೇಟ್ ನೀಡಲಾಗುತ್ತದೆ, ಎರಡನೇ ವರ್ಷ ಪೂರ್ತಿಗೊಂಡ ನಂತರ, ಡಿಪ್ಲೋಮ ಮತ್ತು ಮೂರನೇ ವರ್ಷದ ವ್ಯಾಸಂಗ ಮುಗಿದ ಮೇಲೆ ಪದವಿ ಪ್ರಮಾಣ ಪತ್ರ ನೀಡಲಾಗುತ್ತದೆ. ಉನ್ನತ ವ್ಯಾಸಂಗಕ್ಕೆ ಹೋಗಲಿಚ್ಛಿಸದ ವಿದ್ಯಾರ್ಥಿಗಳು ಮೂರು ವರ್ಷದ ಡಿಗ್ರಿ ಕೋರ್ಸು ಮಾಡಬಹುದು. ಮುಂದೆ ಓದಲಿಚ್ಛಿಸುವವರು ಪದವಿಯನ್ನು ನಾಲ್ಕು ವರ್ಷ ಮಾಡಬೇಕು. ಅಂಥವರಿಗೆ ಎಮ್ ಎ ಸ್ನಾತಕೋತ್ತರ ಪದವಿ ಕೇವಲ ಒಂದು ವರ್ಷದ್ದಾಗಿರುತ್ತದೆ.

7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಇಲ್ಲ

ಹೊಸ ಶಿಕ್ಷಣ ನೀತಿಯ ಪ್ರಕಾರ, 7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಎಂಬುದು ಇರುವುದಿಲ್ಲ. 3, 5 ಹಾಗೂ 8ನೇ ತರಗತಿಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ಪರೀಕ್ಷೆ ನಡೆಸುತ್ತವೆ. ಆದರೆ, 10 ಮತ್ತು 12ನೇ ತರಗತಿಗೆ ಸಂಬಂಧಿಸಿದ ಮಂಡಳಿಗಳಿಂದಲೇ ಪರೀಕ್ಷೆಗಳು ಈಗಿರುವಂತೆಯೇ ಮುಂದುವರಿಯುತ್ತವೆ. 9ನೇ ತರಗತಿಯಿಂದ 12ನೇ ತರಗತಿಯವರೆ ಸಿಮೆಸ್ಟರ್​ಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಎಮ್. ಫಿಲ್​ಗೆ ಇನ್ನು ಬೈಬೈ

ಪ್ರತಿಷ್ಠಿತ ಜೆಎನ್​ಯುನಂಥ ವಿಶ್ವವಿದ್ಯಾಲಯಗಳಲ್ಲಿ ಕೆಲವು ವಿದ್ಯಾರ್ಥಿಗಳು 45-50 ನೇ ವಯಸ್ಸಿನವರೆಗೆ ಎಮ್. ಫಿಲ್ ವ್ಯಾಸಂಗ ಮಾಡುವ ನೆಪದಲ್ಲಿ ವಿವಿ ಕ್ಯಾಂಪಸ್​ನಲ್ಲೇ ಬೀಡು ಬಿಡುತ್ತಿರುವದರಿಂದ ಆ ಕೋರ್ಸನ್ನು ರದ್ದು ಮಾಡಲಾಗಿದೆ. ಹಾಗಾಗಿ, ವಿದ್ಯಾರ್ಥಿಗಳು ಎಮ್ ಎ ಪಾಸು ಮಾಡಿದ ಮೇಲೆ ನೇರವಾಗಿ ಪಿ ಹೆಚ್ ಡಿ ಅಭ್ಯಾಸ ಮಾಡಬಹುದಾಗಿದೆ.

ಪದವಿ ವ್ಯಾಸಂಗದಲ್ಲಿ ಬ್ರೇಕ್ ತೆಗೆದುಕೊಂಡು ಮತ್ತೊಂದು ಕೋರ್ಸ್ ಮಾಡಲು ಅವಕಾಶ!

ಹೊಸ ಶಿಕ್ಷಣ ಪದ್ಧತಿಯಲ್ಲಿ ಒಬ್ಬ ವಿದ್ಯಾರ್ಥಿಯು, ಒಂದು ಕೋರ್ಸಿನ ಮಧ್ಯಭಾಗದಲ್ಲಿ ಬ್ರೇಕ್ ತೆಗೆದುಕೊಂಡು ಮತ್ತೊಂದು ವ್ಯಾಸಂಗಕ್ಕೆ ಸೇರಿಕೊಳ್ಳಬಹುದಾಗಿದೆ. ಹೊಸ ಶಿಕ್ಷಣ ಪದ್ಧತಿಉಲ್ಲಿ ಹಲವಾರು ಸುಧಾರಣೆಗಳನ್ನು ತರಲಾಗಿದೆ. ಇದರಲ್ಲಿ ಶ್ರೇಣೀಕೃತ ಶೈಕ್ಷಣಿಕ ವ್ಯವಸ್ಥೆ, ಶಿಕ್ಷಣ ಸಂಸ್ಥೆಗಳ ಆಡಳಿತಾತ್ಮಕ ಮತ್ತು ಆರ್ಥಿಕ ಸ್ವಾಯತ್ತತೆ ಮತ್ತು ಸರ್ವ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಒಂದೇ ನಿಯಂತ್ರಣ ಸಂಸ್ಥೆಯಿರಲಿದೆ. ಹಾಗೆಯೇ, ಕೋರ್ಸುಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಬೋಧಿಸುವ ಏರ್ಪಾಟು ಮಾಡಲಾಗುತ್ತದೆ. ಒಂದು ರಾಷ್ಟೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆಯನ್ನು ಸಹ ಪ್ರಾರಂಭಿಸಲಾಗುವುದು. ಭಾರತದಲ್ಲಿ 45,000 ಕ್ಕಿಂತ ಜಾಸ್ತಿ ಕಾಲೇಜುಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

Related Tags:

Related Posts :

Category: