ರಕ್ಷಾ ಬಂಧನ: ಸೋಂಕಿತ ಸಿಎಂಗೆ ರಾಖಿ ಕಟ್ಟಿದ Nurse ಸರೋಜ್!

ಭೋಪಾಲ್​: ಇಂದು ದೇಶದೆಲ್ಲೆಡೆ ರಕ್ಷಾ ಬಂಧನದ ಸಂಭ್ರಮ. ಯುವತಿಯರು ಹಾಗೂ ಮಹಿಳೆಯರು ತಮ್ಮ ಅಣ್ಣತಮ್ಮಂದಿರನ್ನ ಭೇಟಿಯಾಗಿ ರಾಖಿ ಕಟ್ಟುತ್ತಾ ಸೋದರನ ದೀರ್ಘಾಯಸ್ಸಿಗಾಗಿ ಪ್ರಾರ್ಥಿಸುತ್ತಿದ್ದಾರೆ.

ಇತ್ತ ಸೋಂಕಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದ ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ರಿಗೂ ಹಬ್ಬದ ಪ್ರಯುಕ್ತ ಸ್ಪೆಷಲ್​ ಗಿಫ್ಟ್​ ಸಿಕ್ತು. ಭೋಪಾಲದ ಕೊವಿಡ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಎಂಗೆ ಇಂದು ಅದೇ ವಾರ್ಡ್​ನಲ್ಲಿ ಕೆಲಸ ಮಾಡುತ್ತಿರುವ ನರ್ಸ್​ ಸರೋಜ್​ ರಾಖಿ ಕಟ್ಟಿದರು.

ತನ್ನ ನೂತನ ತಂಗಿಯಿಂದ ರಾಖಿ ಕಟ್ಟಿಸಿಕೊಂಡ ಸಿಎಂ ಚೌಹಾಣ್,​ ನರ್ಸ್​ ಸರೋಜ್​ರನ್ನ ಆಶೀರ್ವದಿಸಿದರು. ಮುಖ್ಯಮಂತ್ರಿ ಚೌಹಾಣ್​ ಜುಲೈ 25ರಿಂದ ಕೊವಿಡ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Related Tags:

Related Posts :

Category: