ಕೊರೊನಾ ಸೋಂಕಿತನ ಶವವನ್ನ ಸೈಕಲ್‌ನಲ್ಲಿ ಸಾಗಿಸಿದ ಸಿಬ್ಬಂದಿ

ಬಳ್ಳಾರಿ: ಕೊರೊನಾ ಭಯ ಈಗ ಅದ್ಯಾವ ಪರಿ ಕಾಡುತ್ತಿದೆಯಂದ್ರೆ ಸತ್ತ ಶವವನ್ನ ಹೂಳಲು ಕೂಡಾ ಸ್ಥಳೀಯರು ಮಾನವೀಯತೆ ಮರೆತು ವಿರೋಧ ಮಾಡುತ್ತಿದ್ದಾರೆ. ಗಾಯದ ಮೇಲೆ ಬರೆ ಎಂಬಂತೆ ಪೊಲೀಸರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಶವವನ್ನ ಸೈಕಲ್‌ ಮೇಲೆ ಸಾಗಿಸಿ ಅಮಾನವೀಯತೆ ಮೆರೆದ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

ಕೊರೊನಾ ಸೋಂಕಿನಿಂದಾಗಿ ಮೃತನಾದ ವ್ಯಕ್ತಿಯ ಶವವನ್ನ ಹೂಳಲು ಸಿಬ್ಬಂದಿ ಹೊಸಪೇಟೆಯ ನಗರ ಬಸ್‌ ಡಿಪೋ ಬಳೆಯ ಕಬರ‌ಸ್ತಾನಕ್ಕೆ  ತಂದಿದ್ದರು. ಆದ್ರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಸ್ಥಳೀಯರು, ಅಲ್ಲಿ ಅಂತ್ಯಕ್ರಿಯೆ ಮಾಡದಂತೆ ಗಲಾಟೆ ಮಾಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನ ಸೈಕಲ್‌ ಮೇಲೆ ಬೇರೆಡೆ ಸಾಗಿಸಿದ್ದಾರೆ. ನಂತರ ಆರೋಗ್ಯ ಇಲಾಖೆ ಸಿಬ್ಬಂದಿ ಶವದ ಅಂತ್ಯಕ್ರಿಯೆಯನ್ನ ಮಾಡಿದ್ದಾರೆ. ಆದ್ರೆ ಶವವನ್ನ ಆ್ಯಂಬುಲೆನ್ಸ್‌ನಲ್ಲಿ ಸಾಗಿಸಿದೇ, ಸೈಕಲ್‌ ಮೇಲೆ ಸಾಗಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

Related Tags:

Related Posts :

Category:

error: Content is protected !!