ಕೊಡಗಿನ ಹಣ್ಣಿನ ವ್ಯಾಪಾರಿ ಟ್ರಾವೆಲ್ ಹಿಸ್ಟರಿ ನೋಡಿ ಅಧಿಕಾರಿಗಳಿಗೆ ಶಾಕ್

ಕೊಡಗು: ಜಿಲ್ಲೆಯಲ್ಲಿ ಹಣ್ಣಿನ ವ್ಯಾಪಾರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆತನ ಟ್ರಾವೆಲ್ ಹಿಸ್ಟರಿಯಿಂದ ಭಾರಿ ಆತಂಕ ಉಂಟಾಗಿದೆ. P-9215 ಜೂ.10ರಿಂದ 22ರವರೆಗೆ ಗದಗ ಜಿಲ್ಲೆ ಮುಂಡರಗಿ, ಮೈಸೂರು ಜಿಲ್ಲೆಯ ಹುಣಸೂರು, ಚಿತ್ರದುರ್ಗ, ತುಮಕೂರು, ಬೆಂಗಳೂರು ಸೇರಿದಂತೆ ಅನೇಕ ಕಡೆ ಸುತ್ತಾಡಿದ್ದಾನೆ.

ಕೊರೊನಾ ದೃಢಕ್ಕೂ ಮುನ್ನ ಮೈಸೂರು ಜಿಲ್ಲೆ ಹುಣಸೂರಿನ ಸಂಬಂಧಿಕರ ಮನೆಗೆ ತೆರಳಿ ವಾಸ್ತವ್ಯ ಹೂಡಿದ್ದ. ಸೋಂಕಿತ ವಾಸವಿದ್ದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶಿರಂಗಾಲ ಗ್ರಾಮ ಸೀಲ್​ಡೌನ್ ಮಾಡಲಾಗಿದೆ. ಕುಶಾಲನಗರ ಬಸ್ ನಿಲ್ದಾಣ ಸ್ಯಾನಿಟೈಸ್​ ಮಾಡಲಾಗಿದೆ.

ಸೋಂಕಿತನ ಕುಟುಂಬಸ್ಥರಿಗೆ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಿದ್ದಾರೆ. ಅಲ್ಲದೆ ಶನಿವಾರಸಂತೆಯಲ್ಲಿ ವ್ಯಾಪಾರ ಮಾಡಿದ್ದವರಲ್ಲಿಯೂ ಆತಂಕ ಉಂಟಾಗಿದೆ. ಹಣ್ಣಿನ ವ್ಯಾಪಾರಿಯ ಟ್ರಾವೆಲ್ ಹಿಸ್ಟರಿ ನೋಡಿ ಅಧಿಕಾರಿಗಳು ದಂಗಾಗಿದ್ದಾರೆ. ಸೋಂಕಿತನ ಜೊತೆ ಸಂಪರ್ಕ ಹೊಂದಿರುವವರನ್ನು ಪತ್ತೆ ಹಚ್ಚುವುದು ಡೊಡ್ಡ ತಲೆ ನೋವಾಗಿದೆ.

Related Tags:

Related Posts :

Category:

error: Content is protected !!