ಜಸ್ಟ್ ಟೆಸ್ಟ್ ಮಾಡಿ ವಾಪಸ್ ಕಳಿಸಿದ್ರು, ದಾರಿಯಲ್ಲೇ ಹೋಯ್ತು ಸೋಂಕಿತನ ಜೀವ

ಬೆಂಗಳೂರು: ಕೊರೊನಾ ಬೆಂಗಳೂರಿಗೆ ಎಂಟ್ರಿಯಾಗಿದ್ದೇ ಬಂತು, ಏನಾಗ್ತಿದಿಯೇ ಒಂದೂ ಗೊತ್ತಾಗ್ತಿಲ್ಲ ಅನ್ನೋ ಹಾಗಾಗಿದೆ. ಕೆಲ ಖಾಸಗಿ ಆಸ್ಪತ್ರೆ ವೈದ್ಯರಂತೂ ಕೊರೊನಾಗಿಂತ ಕ್ರೂರಿಯಾಗಿದ್ದಾರೆ. ಪರಿಣಾಮ ಸಕಾಲದಲ್ಲಿ ಚಿಕಿತ್ಸೆ ಸಿಗದೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ಮತ್ತೆ ಸಂಭವಿಸಿದೆ.

ಹೌದು ಅರಕೆರೆಯ ನಿವಾಸಿಯೊಬ್ಬರು ಉಸಿರಾಟದ ತೊಂದರೆಯಿಂದ ಚಿಕಿತ್ಸೆಗಾಗಿ ಪೋರ್ಟಿಸ್ ಆಸ್ಪತ್ರೆಗೆ ಹೋಗಿದ್ದಾರೆ. ಆದ್ರೆ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದ 78 ವರ್ಷದ ವೃದ್ಧನನ್ನ ದಾಖಲಿಸಿಕೊಳ್ಳದೇ ವೈದ್ಯರು ಕೇವಲ ಸ್ವಾಬ್ ಟೆಸ್ಟ್ ಪಡೆದು ವಾಪಸ್ ಕಳಿಸಿದ್ದಾರೆ. ಆದ್ರೆ ಆ ವ್ಯಕ್ತಿ ಆಸ್ಪತ್ರೆಯಿಂದ ಮನೆಗೆ ಹಿಂದಿರುಗುವಾಗ ದಾರಿಯಲ್ಲಿಯೇ ಮೃತಪಟ್ಟಿದ್ದಾರೆ.

ಆ ವೃದ್ಧ ಮೃತ ಪಟ್ಟ ನಂತರ ಅವರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಹೀಗಾಗಿ ಬಿಬಿಎಂಪಿ ಸಿಬ್ಬಂದಿ ಮೃತ ವೃದ್ಧನ ಮನೆಯನ್ನ ಸ್ಯಾನಿಟೈಸ್ ಮಾಡಿ ಸೀಲ್ಡೌನ್ ಮಾಡಿದ್ದಾರೆ.

Related Tags:

Related Posts :

Category:

error: Content is protected !!