ಉಸಿರಾಟದ ಸಮಸ್ಯೆಯಿಂದ ಸಾವು-ಬದುಕಿನ ಮಧ್ಯೆ ವೃದ್ಧೆ ಹೋರಾಡುತ್ತಿದ್ರು ಬೆಡ್ ಸಿಗ್ತಿಲ್ಲ..

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇನ್ನೂ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ತಪ್ಪಿಲ್ಲ. ಬೆಂಗಳೂರಲ್ಲಿ ಮತ್ತೊಂದು ಕರುಣಾಜನಕ ದೃಶ್ಯ ಕಂಡು ಬಂದಿದೆ. ವೃದ್ಧೆ ಆಸ್ಪತ್ರೆಯ ಬಾಗಿಲಲ್ಲೇ ಕಾಯುತ್ತಾ ಇದ್ರೂ ಅವರಿಗೆ ಬೆಡ್ ಸಿಗುತ್ತಿಲ್ಲ. ಆಸ್ಪತ್ರೆ ಎದುರೇ ಪ್ರಾಣ ಹೋಗುತ್ತಿದೆ ಅಂದ್ರೂ ಆಸ್ಪತ್ರೆ ಸಿಬ್ಬಂದಿ ಸುಮ್ಮನಿದ್ದಾರೆ. ದಯಮಾಡಿ ಜೀವ ಉಳಿಸಿ ಅಂದ್ರೂ ಕರುಣೆ ತೋರದೆ ಅಮಾನವೀಯವಾಗಿ ವರ್ತಿಸುತ್ತಿರುವಂತ ದೃಶ್ಯ ಕಂಡು ಬಂದಿದೆ.

ರಾಜಾಜಿನಗರದ ಇಎಸ್​ಐ ಆಸ್ಪತ್ರೆ ಬಾಗಿಲಲ್ಲಿ ತೀವ್ರ ಉಸಿರಾಟ ಸಮಸ್ಯೆಯಿಂದ ವೃದ್ಧೆಯೊಬ್ಬರು ಬೆಡ್ ಇಲ್ಲದೇ ಪರದಾಡ್ತಿದ್ದಾರೆ. ಬಾಗಿಲ ಮುಂದೆಯೇ ವೃದ್ಧೆ ಕುಟುಂಬಸ್ಥರು ಕಾಯ್ತಿದ್ದಾರೆ. ಆಸ್ಪತ್ರೆ ಎದುರೇ ಪ್ರಾಣ ಹೋಗಬಹುದು ಉಳಿಸಿಕೊಡಿ ಎಂದು ಕುಟುಂಬಸ್ಥರು ಗೋಳಾಡುತ್ತಿದ್ದಾರೆ.

ವೃದ್ಧೆಗೆ ಶನಿವಾರವೇ ಕೊವಿಡ್ ಟೆಸ್ಟ್ ಮಾಡಲಾಗಿತ್ತು. ಆದರೆ ಈವರೆಗೂ ಕೊವಿಡ್ ಟೆಸ್ಟ್ ವರದಿ ಬಂದಿಲ್ಲ. ಈಗ ಚಿಕಿತ್ಸೆಯಾದ್ರೂ ನೀಡಿ ಎಂದರೂ ನಿರ್ಲಕ್ಷ್ಯವಹಿಸಲಾಗುತ್ತಿದೆ. ಮತ್ತೊಮ್ಮೆ ಕೊವಿಡ್ ಟೆಸ್ಟ್ ಮಾಡಿಸುವಂತೆ ಸೂಚಿಸಲಾಗಿದೆ. ಆದ್ರೆ ತೀವ್ರ ಉಸಿರಾಟದ ಸಮಸ್ಯೆಯಿಂದ ವೃದ್ಧೆ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ವೃದ್ಧೆಯ ನರಳಾಟ ನೋಡಿದರೂ ವೈದ್ಯರಿಗೆ ಕನಿಕರವೇ ಹುಟ್ಟಿಲ್ಲ.

Related Tags:

Related Posts :

Category:

error: Content is protected !!