ಭಾವನ ಮೇಲಿನ ಹಲ್ಲೆ ಪ್ರಶ್ನಿಸಿದ್ದಕ್ಕೆ ಸೋದರರ ಮೇಲೆ ಅಟ್ಯಾಕ್, ಓರ್ವ ಸಾವು

ಮೈಸೂರು: ಭಾವನ ಮೇಲೆ ಹಲ್ಲೆ ಮಾಡಿದನ್ನು ಪ್ರಶ್ನಿಸಿದ್ದಕ್ಕೆ ಸಹೋದರರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಒಬ್ಬ ಸಹೋದರ ಸಾವಿಗೀಡಾಗಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.

ಕೆಲ ದಿನಗಳ ಹಿಂದೆ ಧರ್ಮಪಾಲ ಎಂಬುವರ ಮೇಲೆ ಹಲ್ಲೆ ರಾಜು ಎಂಬುವರು ಹಲ್ಲೆ ನಡೆಸಿದ್ದರು. ಹಲ್ಲೆ ಮಾಡಿರುವ ಬಗ್ಗೆ ಕಾಂತರಾಜು ಮತ್ತು ನಾರಾಯಣ್ ಎಂಬುವರು ರಾಜು ಬಳಿ ಕೇಳಿದ್ದಾರೆ. ಹಲ್ಲೆ ವಿಚಾರವಾಗಿ ಗಲಾಟೆಯಾಗಿ ರಾಜು ಮತ್ತು ಆತನ ಸಹೋದರ ಸಂತೋಷ್ ಇಬ್ಬರೂ ಸೇರಿಕೊಂಡು ಕಾಂತರಾಜು ಮತ್ತು ನಾರಾಯಣ್ ಮೇಲೆ ಕಬ್ಬಿಣದ ರಾಡುಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಕಾಂತರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಾಯಾಳು ನಾರಾಯಣ್ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಸಂತೋಷ್ ಮತ್ತು ರಾಜುರನ್ನು ಬಂಧಿಸಿದ್ದಾರೆ.

Related Tags:

Related Posts :

Category: