ಪುಲ್ವಾಮಾ ದಾಳಿ ಕರಾಳ ದಿನಕ್ಕೆ 1 ವರ್ಷ, ಅನಾವರಣಗೊಳ್ಳಲಿದೆ ಹುತಾತ್ಮ ಯೋಧರ ಸ್ಮಾರಕ

, ಪುಲ್ವಾಮಾ ದಾಳಿ ಕರಾಳ ದಿನಕ್ಕೆ 1 ವರ್ಷ, ಅನಾವರಣಗೊಳ್ಳಲಿದೆ ಹುತಾತ್ಮ ಯೋಧರ ಸ್ಮಾರಕ

ವ್ಯಾಲೆಂಟೈನ್ಸ್‌ ಡೇ.. ಲವರ್ಸ್​​ಗೆ ಪ್ರೇಮ ನಿವೇದನೆ ಹಂಚಿಕೊಳ್ಳೋ ತವಕ. ಆದ್ರೆ, ಇದೇ ಕಳೆದ ಒಂದು ವರ್ಷದ ಫ್ಲ್ಯಾಶ್​​ಬ್ಯಾಕ್​​ಗೆ ಹೋದ್ರೆ ಎದೆ ನಡುಗಿ ಹೋಗುತ್ತೆ. ದೇಶದಲ್ಲಿ ಸೂತಕದ ಛಾಯೆ ಆವರಿಸಿತ್ತು. ದೇಶಕ್ಕೆ ದೇಶವೇ ಕಣ್ಣೀರ ಸಾಗರದಲ್ಲಿ ಮುಳುಗಿತ್ತು. ಪುಲ್ವಾಮಾ ದಾಳಿಗೆ ಇಡೀ ಭಾರತಾಂಬೆ ನೆಲವೇ ಶೋಕ ಸಾಗರದಲ್ಲಿ ಮುಳುಗಿತ್ತು.

ಇವತ್ತು ಕರಾಳ ದಿನ. ಕಣ್ಣಿಗೆ ಕಗ್ಗತ್ತಲು ಆವರಿಸಿದ ದಿನ. ದೇಶಕ್ಕೆ ದೇಶವೇ ಕಣ್ಣೀರಿಟ್ಟು ಗೋಳಿಟ್ಟ ದಿನ. ಭಂಡ ಉಗ್ರರ ನೀಚ ಕೃತ್ಯದ ವಿರುದ್ಧ ಭಾರತಾಂಭೆ ಮಕ್ಕಳು ಒಗ್ಗಟ್ಟಾದ ದಿನ. ಪುಲ್ವಾಮದಲ್ಲಿ ದೇಶಕ್ಕಾಗಿ ಪ್ರಾಣತೆತ್ತ 40 ವೀರಯೋಧರ ಕಳೆದ್ಕೊಂಡು ಮಮ್ಮಲ ಮರುಗಿದ ದಿನ ಇದು.

ದಿನಾಂಕ : ಫೆಬ್ರವರಿ 14, 2019:
ಯಾರೂ ಊಹಿಸಿರಲಿಲ್ಲ. ಯಾರೂ ನಿರೀಕ್ಷೆ ಕೂಡ ಮಾಡಿರ್ಲಿಲ್ಲ. ಇಂಥದೊಂದು ದುರಂತ ನಡೆಯುತ್ತೆ ಅಂದ್ಕೊಂಡಿರ್ಲಿಲ್ಲ. ಕನಸು ಕೂಡ ಕಂಡಿರ್ಲಿಲ್ಲ. ಆದ್ರೆ, ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಕಳೆದ ಒಂದು ವರ್ಷದ ಹಿಂದೆ ಭೀಕರ ಘಟನೆ ನಡೆದೋಗಿತ್ತು. ಜೈಷ್ ಸಂಘಟನೆ ಭಯೋತ್ಪಾದಕನೋರ್ವ ನಡೆಸಿದ್ದ ಆ ದಾಳಿ ದೇಶವನ್ನೇ ಬೆಚ್ಚಿ ಬೀಳಿಸಿತ್ತು.

, ಪುಲ್ವಾಮಾ ದಾಳಿ ಕರಾಳ ದಿನಕ್ಕೆ 1 ವರ್ಷ, ಅನಾವರಣಗೊಳ್ಳಲಿದೆ ಹುತಾತ್ಮ ಯೋಧರ ಸ್ಮಾರಕಬರೋಬ್ಬರಿ 80 ಕೆ.ಜಿ. ಆರ್​​ಡಿಎಕ್ಸ್​​ ಇರೋ ಕಾರ್​ ಜೊತೆ ಎಂಟ್ರಿ ಕೊಟ್ಟಿದ್ದ ಜೈಷ್​ ಸಂಘಟನೆ ಉಗ್ರ ಸಿಆರ್​ಪಿಎ ಯೋಧರನ್ನು ಕರೆದೊಯ್ಯುತ್ತಿದ್ದ ವಾಹನವನ್ನೇ ಟಾರ್ಗೆಟ್ ಮಾಡಿದ್ದ. ಉಗ್ರನ ಹೀನಾಯ ಕೃತ್ಯಕ್ಕೆ 40 ವೀರಪುತ್ರರು ಹುತಾತ್ಮರಾಗಿದ್ರು. ಈ ಪಾಪಿಗಳ ಹೀನ ಕೃತ್ಯಕ್ಕೆ ಸೇನಾನಿಗಳು ತಮ್ಮ ನೆತ್ತರು ಹರಿಸಿದ್ರು.

ಇದೀಗ ಈ ಕರಾಳ ದಿನ ನಡೆದು ಇಂದಿಗೆ 1 ವರ್ಷ. ಕಣಿವೆ ರಾಜ್ಯದಲ್ಲಿ ಯಾವುದನ್ನೂ ಲೆಕ್ಕಿಸದೇ. ಕಣ್ಣಲ್ಲಿ ಕಣ್ಣಿಟ್ಟು ನಮ್ಮನ್ನ ಕಾಯ್ತಿರೋ ಯೋಧರನ್ನ ಕಳೆದ್ಕೊಂಡಿದ್ವಿ. ಆ ದಿನ ಕಣ್ಣೆದುರು ಬರ್ತಿದ್ದಂತೆ ಎಲ್ಲರ ಕಣ್ಣಾಲಿಗಳು ತುಂಬಿ ಬಂದಿದ್ವು. ಹಿಮದ ನಾಡಲ್ಲಿ ಹರಿದಿತ್ತ ನೆತ್ತರು ಕಂಡು ಪ್ರತಿಯೊಬ್ಬ ಪ್ರಜೆಯ ರಕ್ತ ಕೊತ ಕೊತ ಕುದಿತ್ತು.

ಇದೀಗ ಕರಾಳ ಅಧ್ಯಾಯಕ್ಕೆ ಒಂದು ವರ್ಷ ಸಂದಿರೋದೆ. ಜಮ್ಮು-ಕಾಶ್ಮೀರದ ಲೆತ್​​​ಪೋರಾದಲ್ಲಿ ಇಂದು ಹುತಾತ್ಮರ ಸ್ಮಾರಕ ಅನಾವರಣ ಮಾಡಲಿದ್ದಾರೆ. ನಮ್ಮನ್ನ ಬಿಟ್ಟು ಹುತಾತ್ಮರಾದ ದೇಶಕಾಯೋ ಸೇನಾನಿಗಳಿಗೆ ನಮನ ಸಲ್ಲಿಸಲಿದ್ದಾರೆ. ಅಮರ್​ ರಹೇ ಜವಾನ್ ಅಮರ್​ ರಹೇ ಅನ್ನೋ ಘೋಷ ಎಲ್ಲೆಲ್ಲೂ ಮೊಳಗಲಿದೆ.

ಇಷ್ಟೇ ಅಲ್ಲ, ಪುಲ್ವಾಮ ದಾಳಿಯಲ್ಲಿ ಹುತಾತ್ಮನಾದ 40ಯೋಧರಲ್ಲಿ ಕನ್ನಡದ ಯೋಧ ಗುರು ಕೂಡ ವೀರಮರಣವನ್ನಿಪ್ಪಿದ್ರು. ಮಂಡ್ಯ ಜಿಲ್ಲೆ ಗುಡಿಗೆರೆ ಗ್ರಾಮದ ಗುರು ಅವರನ್ನ ಕಳೆದ್ಕೊಂಡು ಕರುನಾಡಿಗೆ ಕರುನಾಡೇ ಕಂಬನಿ ಮಿಡಿದಿತ್ತು. ಕರುನಾಡ ಹೆಮ್ಮೆಯ ಕುವರನ ಕಳೆದ್ಕೊಂಡು ಎಲ್ಲರ ಕರುಳು ಹಿಂಡಿತ್ತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಬಿಸಿಲು.. ಚಳಿ.. ಗಾಳಿ ಲೆಕ್ಕಿಸದೇ ಗಡಿಕಾಯೋ ಭಾರತಾಂಬೆಯ ಮಕ್ಕಳು ನೀವು.. ಗಡಿಯಲ್ಲಿ ಕಣ್ಣಲ್ಲಿ ಕಣ್ಣಿಟ್ಟು ನಮ್ಮನ್ನ ಕಾಯೋ ನಿಮಗೊಂದು ಸೆಲ್ಯೂಟ್​. ನಿಮ್ಮ ನೆನಪು ಅಜರಾಮರ. ನಮ್ಮ ಹೃದಯದಲ್ಲಿ ಎಂದಿಗೂ ನಿಮ್ಮ ನೆನಪು ಅಜರಾಮರ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!