ಮಹಾಮಳೆ ಹೊಡೆತಕ್ಕೆ ಈರುಳ್ಳಿ ರೇಟ್ ದಿಢೀರ್ ಏರಿಕೆ

ಬೆಂಗಳೂರು: ಉತ್ತರ ಕರ್ನಾಟಕದಲ್ಲಾಗುತ್ತಿರುವ ಮಹಾಮಳೆಯಿಂದ ಈರುಳ್ಳಿ ಬೆಲೆ ದಿಢೀರ್​ ಏರಿಕೆಯಾಗಿದೆ. 1 ಕೆಜಿ ಈರುಳ್ಳಿಗೆ ₹20-25 ರೂಪಾಯಿ ಇತ್ತು. ಆದರೆ ಈಗ ಅದರ ಬೆಲೆ ₹50-60ಕ್ಕೆ ಏರಿಕೆಯಾಗಿದೆ. ಯಶವಂತಪುರ ಮಂಡಿಯಲ್ಲಿ ಉತ್ತಮ ಈರುಳ್ಳಿ ಬೆಲೆ ಏರಿಕೆ ಕಂಡಿದೆ.

ಮಳೆಯಿಂದ ಬೆಳೆ ಹಾನಿಯಾದ ಕಾರಣಕ್ಕೆ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ದರ ಹೆಚ್ಚಾಗಿದೆ. ಹಿಂದೆ ಪ್ರತಿದಿನ 1 ಸಾವಿರ ಲಾರಿ ಲೋಡ್​ ಈರುಳ್ಳಿ ಪೂರೈಕೆಯಾಗುತ್ತಿತ್ತು. ಆದರೆ ಈಗ ಪ್ರತಿದಿನ 150 ಲಾರಿ ಲೋಡ್​ ಮಾತ್ರ ಪೂರೈಕೆಯಾಗ್ತಿದೆ. ಜೊತೆಗೆ ಮಹಾರಾಷ್ಟ್ರದಿಂದ ಪೂರೈಕೆಯಾಗ್ತಿದ್ದ ಈರುಳ್ಳಿ ಸಹ ಬರುತ್ತಿಲ್ಲ.

ಮುಂದಿನ ದಿನಗಳಲ್ಲಿ ಈರುಳ್ಳಿ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಇದರಿಂದ ಈರುಳ್ಳಿ ಬೆಳೆ ಹನಿಯಾಗಿದೆ. ಹಾಗೂ ಕೆಲ ಕಡೆ ರೈತರು ಬೆಳೆದ ಈರುಳ್ಳಿ ಕೊಳೆತು ಹೋಗಿವೆ. ಬೆಳೆ ಕಳೆದು ಕೊಂಡು ರೈತ ಕಂಗಾಲಾದರೆ, ಈರುಳ್ಳಿ ಖರೀದಿಸಲು ಜನ ಕಣ್ಣೀರಾಕುವ ದಿನಗಳು ಬರಲಿದೆ.

Related Tags:

Related Posts :

Category:

error: Content is protected !!