ರಾಜ್ಯದಲ್ಲಿ 1-5ನೇ ತರಗತಿ ಮಕ್ಕಳ ಆನ್​​ಲೈನ್ ಕ್ಲಾಸ್​​ಗೆ ಮತ್ತೆ ಸಿಕ್ತು ಗ್ರೀನ್​ಸಿಗ್ನಲ್!

ಬೆಂಗಳೂರು: ಆನ್​ಲೈನ್ ಶಿಕ್ಷಣ.. ಕಳೆದ ಕೆಲ ದಿನಗಳಿಂದ ಆನ್​ಲೈನ್ ಕ್ಲಾಸ್ ವಿಚಾರ ರಾಜ್ಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಆನ್​ಲೈನ್ ಶಿಕ್ಷಣ ಬೇಕಾ ಬೇಡ್ವಾ..? ಆನ್​ಲೈನ್ ಎಜ್ಯುಕೇಶನ್​​ನಿಂದ ಮಕ್ಕಳ ಭವಿಷ್ಯಕ್ಕೆ ಆಪತ್ತು ಎದುರಾಗಲಿದ್ಯಾ..? ಹೀಗೆ ಹತ್ತಾರು ವಿಚಾರಗಳ ಬಗ್ಗೆ ಇನ್ನಿಲ್ಲದ ಚರ್ಚೆಯಾಗ್ತಿರೋವಾಗ್ಲೇ ಸರ್ಕಾರ ಆನ್​​​ಲೈನ್ ಶಿಕ್ಷಣಕ್ಕೆ ದಿಢೀರ್​ ಬ್ರೇಕ್ ಹಾಕಿತ್ತು. ಆದ್ರೆ ಅದ್ಯಾವಾಗ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸ್ತೋ ರಾಜ್ಯದಲ್ಲಿ ಮತ್ತೆ ಆನ್​​ಲೈನ್ ಶಿಕ್ಷಣಕ್ಕೆ ಸರ್ಕಾರ ಅಸ್ತು ಎಂದಿದೆ.

1-5ನೇ ತರಗತಿ ಮಕ್ಕಳಿಗೆ ನಡೆಯಲಿದೆ ಆನ್​​​ಲೈನ್ ಶಿಕ್ಷಣ!
ಲಾಕ್​​ಡೌನ್​​ ವೇಳೆ ರಾಜ್ಯದಲ್ಲಿ ಖಾಸಗಿ ಶಾಲೆಗಳು ಆನ್​ಲೈನ್ ಕ್ಲಾಸ್​ ಮೊರೆ‌ ಹೋಗಿದ್ದವು. ಎಲ್​ಕೆಜಿ, ಯುಕೆಜಿ ಮಕ್ಕಳಿಗೂ ಆನ್‌ಲೈನ್ ಕ್ಲಾಸ್ ಹೆಸರಲ್ಲಿ ಬಹುತೇಕ ಖಾಸಗಿ ಶಾಲೆಗಳು ಫೀಸ್​​ ಪಡೆಯುತ್ತಿದ್ದಾರೆ ಅಂತ ಪೋಷಕರು ಆರೋಪಗಳ ಸುರಿಮಳೆಗೈದಿದ್ರು.‌ ಹೀಗಾಗಿ ಆನ್​ಲೈನ್ ಶಿಕ್ಷಣದ ಸಾಧಕ-ಬಾಧಕ ಕುರಿತು ತಜ್ಞರ ಸಮಿತಿ ರಚಿಸಿದ್ದ ರಾಜ್ಯ ಸರ್ಕಾರ ವರದಿ ಸಲ್ಲಿಕೆಯಾಗೋವರೆಗೂ ಆನ್​ಲೈನ್ ಕ್ಲಾಸ್ ನಡೆಸದಂತೆ ಆದೇಶಿಸಿತ್ತು.

ಆದ್ರೆ, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಮಾರ್ಗದರ್ಶನದ ಪ್ರಕಾರ ಆನ್​ಲೈನ್​ ಕ್ಲಾಸ್ ನಡೆಸಬಹುದು. ರಾಜ್ಯ ಸರ್ಕಾರ ರಚಿಸಿರುವ ತಜ್ಞರ ಸಮಿತಿ ವರದಿ ಬರೋವರೆಗೂ ಸೀಮಿತ ಅವಧಿಯಲ್ಲಿ ಆನ್​ಲೈನ್ ಶಿಕ್ಷಣ ನಡೆಸ್ಬೋದು ಅಂತ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು. ಹೀಗಾಗಿ ಮತ್ತೆ ರಾಜ್ಯದಲ್ಲಿ ಆನ್​​ಲೈನ್ ಕ್ಲಾಸ್​​ ನಡೆಸಲು ಶಿಕ್ಷಣ ಇಲಾಖೆ ಗ್ರೀನ್​ ಸಿಗ್ನಲ್ ನೀಡಿದೆ. ಈ ಮೂಲಕ 1ರಿಂದ 5ನೇ ತರಗತಿ ಮಕ್ಕಳಿಗೆ ಆನ್​ಲೈನ್ ಶಿಕ್ಷಣ ಮತ್ತೆ ಸ್ಟಾರ್ಟ್ ಆಗಲಿದೆ.

ಆನ್​​​ಲೈನ್​​​ ಪಾಠಕ್ಕೆ ರೂಲ್ಸ್
ಇನ್ನು, 1 ರಿಂದ 5 ನೇ ತರಗತಿವರೆಗಿನ ಮಕ್ಕಳಿಗೆ ಆನ್​ಲೈನ್ ಶಿಕ್ಷಣ ನೀಡಲು ತಾತ್ಕಾಲಿಕ ಅನುಮತಿ ನೀಡಲಾಗಿದೆ. 1 ರಿಂದ 5 ನೇ ತರಗತಿ ಮಕ್ಕಳಿಗೆ 30ರಿಂದ 40 ನಿಮಿಷ ಕ್ಲಾಸ್ ನಡೆಸಬೇಕು ಅಂತ ನಿಯಮ ಜಾರಿಗೆ ತರಲಾಗಿದೆ. ಒಂದು ವಾರದಲ್ಲಿ ಗರಿಷ್ಟ 3 ಆನ್​​ಲೈನ್ ಕ್ಲಾಸ್​ಗಳನ್ನು ನಡೆಸಬೋದು ಎನ್ನಲಾಗಿದೆ.

ಇಷ್ಟೇ ಅಲ್ಲ ಪೂರ್ವ ಪ್ರಾಥಮಿಕ ಮಕ್ಕಳಿಗೂ ಪಾಲಕರ ಉಪಸ್ಥಿತಿಯಲ್ಲಿ 30 ನಿಮಿಷಗಳ ಕಾಲ ಕ್ಲಾಸ್ ನಡೆಸಲು ಅವಕಾಶ ನೀಡಲಾಗಿದೆ. ಸದ್ಯ ಆನ್​ಲೈನ್ ತರಗತಿ ಕುರಿತು ತಜ್ಞರ ಸಮಿತಿ ವರದಿ ನೀಡಬೇಕಿದೆ. ವರದಿ ಬರುವ ತನಕ 1-5ನೇ ತರಗತಿ ಮಕ್ಕಳಿಗೂ ಆನ್​ಲೈನ್ ಶಿಕ್ಷಣ ನಡೆಸಲು ಒಪ್ಪಿಗೆ ಸಿಕ್ಕಿದೆ. ಆದ್ರೆ ಆನ್​ಲೈನ್ ಕ್ಲಾಸ್​ಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡುವಂತಿಲ್ಲ ಅಂತ ಶಿಕ್ಷಣ ಇಲಾಖೆ ಖಡಕ್ ಸಂದೇಶ ರವಾನಿಸಿದೆ.

ತಜ್ಞರ ವರದಿ ಬರೋವರೆಗೂ ಆನ್​ಲೈನ್ ಶಿಕ್ಷಣ!
ಸದ್ಯ ಆನ್​ಲೈನ್ ತರಗತಿ ಕುರಿತು ತಜ್ಞರ ಸಮಿತಿ ವರದಿ ನೀಡಬೇಕಿದೆ. ತಜ್ಞರ ಸಮಿತಿ ರಿಪೋರ್ಟ್ ಬರೋವರೆಗೂ 1 ರಿಂದ 5ನೇ ತರಗತಿ ಮಕ್ಕಳಿಗೂ ಆನ್​ಲೈನ್ ಶಿಕ್ಷಣ ನಡೆಸಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಇದ್ರ ಜೊತೆಗೆ ಆನ್​​ಲೈನ್ ಶಿಕ್ಷಣಕ್ಕೆ ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ.

ಇದಕ್ಕೆ ತಗುಲುವ ವೆಚ್ಚ ವಾರ್ಷಿಕ ಬೋಧನಾ ಶುಲ್ಕದಿಂದಲೇ ಭರಿಸಬೇಕು. ಹೆಚ್ಚುವರಿ ಫೀಸ್​ ನೀಡುವಂತೆ ಯಾವುದೇ ಕಾರಣಕ್ಕೂ ಶಿಕ್ಷಣ ಸಂಸ್ಥೆಗಳು ಪೋಷಕರಿಗೆ ಒತ್ತಾಯ ಮಾಡುವಂತಿಲ್ಲ. ಒಂದು ವೇಳೆ ಒತ್ತಾಯ ಮಾಡಿದ್ದೇ ಆದಲ್ಲಿ ಅಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತ ಶಿಕ್ಷಣ ಇಲಾಖೆ ಖಡಕ್ ವಾರ್ನಿಂಗ್ ಕೂಡ ಮಾಡಿದೆ.

ಒಟ್ನಲ್ಲಿ ಆನ್​​ಲೈನ್ ಶಿಕ್ಷಣ ಇಲ್ಲ ಅಂತ ಖುಷ್ ಆಗಿದ್ದ ಮಕ್ಕಳಿಗೆ ಮತ್ತೆ ಆನ್​​ಲೈನ್ ಕ್ಲಾಸ್​​​​​ ಕಾಟ ಬೆನ್ನು ಬಿದ್ದಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more