ಈ ಶಾಲೆಯಲ್ಲಿ ಊಟ-ಪಾಠ ಎರಡೂ ಒಂದೇ ಕೋಣೆಯಲ್ಲಿ!

ಯಾದಗಿರಿ: ಸ್ಕೂಲ್ ಲೈಫ್ ಅಂದ್ರೆ ಒಂಥರಾ ಖುಷಿ. ಇಲ್ಲೂ ಅಷ್ಟೇ ಮಕ್ಕಳು ನಲಿದಾಡಿಕೊಂಡೇ ಶಾಲೆಗೆ ಹೋಗ್ತಾರೆ. ಆದ್ರೆ ಕ್ಲಾಸ್​ರೂಮ್ ಒಂಥರಾ ಕುರಿದೊಡ್ಡಿಯಂತಾಗಿದೆ. ಅದಕ್ಕಿಂತ ಡೇಂಜರಸ್ ಅಂದ್ರೆ ಮಕ್ಕಳ ಪಕ್ಕದಲ್ಲೇ ಬಿಸಿಯೂಟ ತಯಾರು ಕೂಡ ಆಗುತ್ತೆ. ಮಕ್ಕಳ ಪಕ್ಕದಲ್ಲೇ ಸಿಲಿಂಡರ್ ಕೂಡ ಇದೆ. ಇಂಥಾ ಸ್ಥಿತಿಯಲ್ಲಿ ಮೇಷ್ಟ್ರು ಮಕ್ಕಳಿಗೆ ಪಾಠ ಮಾಡ್ಬೇಕು. ಹಂಗಂತ ಇದೇನು ಒಂದು ತರಗತಿಯಲ್ಲ. ಒಂದರಿಂದ ಐದನೇ ತರಗತಿ ಮಕ್ಕಳು ಒಂದೇ ಕೋಣೆಯಲ್ಲೇ ಪಾಠ ಕೇಳ್ಬೇಕಾಗಿದೆ.

ಒಂದೇ ಕೋಣೆಯಲ್ಲಿ ಪಾಠ: 
ಯಾದಗಿರಿ ತಾಲೂಕಿನ ಆರ್.ಹೊಸಹಳ್ಳಿ ತಾಂಡಾ ಸರ್ಕಾರಿ ಶಾಲೆಯ ದುಸ್ಥಿತಿ ಇದು. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಐದನೇ ಕ್ಲಾಸ್​ವರೆಗೆ ತರಗತಿ ನಡೆಯುತ್ತೆ. ವಿಪರ್ಯಾಸ ಅಂದ್ರೆ 72 ಮಕ್ಕಳು ಕೂಡ ಒಂದೇ ಕೋಣೆಯಲ್ಲಿ ಪಾಠ ಕೇಳ್ಬೇಕಾಗಿದೆ. ಅದು ಸಹ 12/15 ಇದೇ ಕೋಣೆಯಲ್ಲಿ. ಇನ್ನು ಈ ಶಾಲೆಯಲ್ಲಿ ಇಬ್ಬರು ಶಿಕ್ಷಕರಿದ್ದು ಒಬ್ಬರು ಮುಖ್ಯ ಶಿಕ್ಷಕರು, ಇನ್ನೊಬ್ಬರು ಸಹಾಯಕ ಶಿಕ್ಷಕರು.

ಮುಖ್ಯ ಶಿಕ್ಷಕರ ಕಚೇರಿ ಇದೇ ಚಿಕ್ಕದಾದ ಕೋಣೆಯಲ್ಲೇ ಇದೆ. ಮುಖ್ಯ ಶಿಕ್ಷಕರು ಕುತ್ಕೊಂಡ್ರೆ ಸಹಾಯಕ ಶಿಕ್ಷಕ ಪಾಠ ಮಾಡಬೇಕು. ಶಿಕ್ಷಕರು 5ನೇ ತರಗತಿಯ ಮಕ್ಕಳಿಗೆ ಪಾಠ ಮಾಡಿದ್ರೆ ಉಳಿದ ನಾಲ್ಕು ತರಗತಿಯ ಮಕ್ಕಳು ಇದೆ ಪಾಠವನ್ನ ಕೇಳಬೇಕು. ಈ ಬಗ್ಗೆ ಸಾಕಷ್ಟು ಬಾರಿ ಶಾಸಕರಿಗೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ರೆ, ಸರ್ಕಾರಿ ಜಮೀನು ಇಲ್ಲ ಅಂತಾ ಹೊಸ ಶಾಲಾ ಕಟ್ಟಡವನ್ನ ಕಟ್ಟಿಸಿಕೊಡದೆ ನೆಪ ಹೇಳ್ತಿದ್ದಾರಂತೆ.

1ರಿಂದ 5ನೇ ತರಗತಿ ಸ್ಟೂಡೆಂಟ್ಸ್​ಗೆ ಅಲ್ಲೇ ಊಟ:
ಇನ್ನು ಮೊದಲ ಸಾಲಿನಲ್ಲಿ 5ನೇ ತರಗತಿ ಮಕ್ಕಳು ಕುತ್ಕೊಂಡ್ರೆ ಎರಡನೇ ಸಾಲಿನಲ್ಲಿ 4ನೇ ತರಗತಿ ಮಕ್ಕಳು ಕುತ್ಕೊಳ್ಳಬೇಕು. ಇನ್ನೊಂದು ಡೇಂಜರಸ್ ಸಂಗತಿಯಂದ್ರೆ ಇದೇ ರೂಮ್​ನಲ್ಲೇ ಬಿಸಿಯೂಟ ಕೂಡ ತಯಾರಾಗುತ್ತೆ. ಇಬ್ಬರು ಬಿಸಿಯೂಟ ಸಹಾಯಕಿಯರು ಇದೇ ಕೋಣೆಯಲ್ಲಿ ಮಕ್ಕಳ ಮದ್ಯ ಕುತ್ಕೊಂಡು ಅಡುಗೆ ಮಾಡ್ತಾರೆ. ಸಿಲಿಂಡರ್ ಪಕ್ಕದಲ್ಲೇ ಇದ್ದು, ಅಲ್ಲೇ ಈರುಳ್ಳಿ ಕೂಡ ಹಚ್ತಾರೆ. ಹೀಗಾಗಿ ಸ್ವಲ್ಪ ಹೆಚ್ಚುಕಮ್ಮಿ ಆದ್ರೂ ದೊಡ್ಡ ಅನಾಹುತವೇ ನಡೆಯುತ್ತೆ. ಈ ಬಗ್ಗೆ ಡಿಡಿಪಿಐನ ಕೇಳಿದ್ರೆ ಸರ್ಕಾರಿ ಜಾಗ ಇಲ್ದೇ ಇರೋದ್ರಿಂದ ಡಿಲೇ ಆಗ್ತಿದೆ ಅಂತಿದ್ದಾರೆ.


Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!