ಮತದಾನ-ಮದ್ಯಪಾನ-ವಾಹನ ಚಲಾಯಿಸಲು, ಮದುವೆಯಾಗಲು ಮತ್ತು ‘ಅದನ್ನು’ ವೀಕ್ಷಿಸಲು ವಯಸ್ಸಿನ ಮಿತಿ ಇದೆ, ಏಕೆ ಗೊತ್ತಾ?

ಮತದಾನ-ಮದ್ಯಪಾನ-ವಾಹನ ಚಲಾಯಿಸಲು, ಮದುವೆಯಾಗಲು ಮತ್ತು 'ಅದನ್ನು' ವೀಕ್ಷಿಸಲು ವಯಸ್ಸಿನ ಮಿತಿ ಇದೆ. ಇದು ಮೈನರ್​ ವಿಷಯ ಅಲ್ಲ; ಮೇಜರ್​ ವಿಷಯವಾಗಿದೆ! 'ಅದಕ್ಕೆಲ್ಲ' ವಯಸ್ಸಿನ ಮಿತಿ ಇದೆ, ಏಕೆ ಗೊತ್ತಾ?

ಮತದಾನ-ಮದ್ಯಪಾನ-ವಾಹನ ಚಲಾಯಿಸಲು, ಮದುವೆಯಾಗಲು ಮತ್ತು 'ಅದನ್ನು' ವೀಕ್ಷಿಸಲು ವಯಸ್ಸಿನ ಮಿತಿ ಇದೆ, ಏಕೆ ಗೊತ್ತಾ?
ಇದು ಮೈನರ್​ ವಿಷಯ ಅಲ್ಲ; ಮೇಜರ್​ ವಿಷಯ! 'ಅದಕ್ಕೆಲ್ಲ' ವಯಸ್ಸಿನ ಮಿತಿ ಏಕೆ?
Follow us
ಸಾಧು ಶ್ರೀನಾಥ್​
|

Updated on: May 27, 2024 | 6:07 PM

ನಿಮ್ಮ ದೇಹದ ಬೆಳವಣಿಗೆಯು 18-20 ವರ್ಷಗಳ ನಡುವೆ ನಿಲ್ಲುತ್ತದೆ. ಅಂದರೆ ನಿಮ್ಮ ಎಲ್ಲಾ ಅಂಗಗಳು ಈ ವಯಸ್ಸಿನಲ್ಲಿ ಅಭಿವೃದ್ಧಿ ಹೊಂದುತ್ತವೆ. ಯಾವುದೇ ವಯಸ್ಸಿಗೆ ಸಂಬಂಧಿಸಿದ ನಿರ್ಬಂಧವನ್ನು ಹೊಂದಿಸಲು ಈ ವಯಸ್ಸಿನ ಕಡಿವಾಣ ಆಧಾರವಾಗುತ್ತದೆ. ದೆಹಲಿಯ ಅಪೋಲೋ ಆಸ್ಪತ್ರೆಗಳ ಆಂತರಿಕ ಔಷಧ ತಜ್ಞರಾದ ಡಾ ಸುರಂಜಿತ್ ಚಟರ್ಜಿ, ಇಂತಹ ಮಹತ್ವದ ದೀಕ್ಷೆಗೆ (ಆರಂಭಕ್ಕೆ) ವಯಸ್ಸಿನ ಅಗತ್ಯ ಏಕೆ ಎಂದು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಮುಂದೆ ಓದಿ.

ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆ – ಹೀಗೆ ಜನ ಹೇಳುವುದು ಕೇಳಿ ಕೇಳಿ ಕ್ಲೀಷೆಯಾಗಿತ್ತು. ಆದರೆ ಇನ್ನು ಮುಂದೆ ಅದು ಹಾಗಲ್ಲ. ಇಂದಿನ ಲೇಟೆಸ್ಟ್​ ಜನರೇಶನ್​​ GenZ ಗೆ ಇದು ಕೇವಲವಾಗಿದೆ. ಅದರಲ್ಲೂ ಕ್ಲಿಷ್ಟ/ ಸಂಕೀರ್ಣ ಪರಿಸ್ಥಿತಿಯಿಂದ ಹೊರಬರಲು ಆಯುಧವಾಗಿದೆ. ವಾದಗಳ ಸಲುವಾಗಿ, ಈ ರೀತಿಯ ಪೌರುಷಗಳನ್ನು ಸಂಪೂರ್ಣವಾಗಿ ಕಸದಬುಟ್ಟಿಗೆ ಹಾಕಬೇಕಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಹಾಗೇಕೆ ಎಂದು ಕೇಳಿದರೆ… ಮೊದಲನೆಯದಾಗಿ, ವಯಸ್ಸು ಕೇವಲ ಒಂದು ಸಂಖ್ಯೆಯಾಗಿರುವುದರ ಹಿಂದೆ ವಿಜ್ಞಾನದ ಆಧಾರದಲ್ಲಿ ಸಕಾರಣವಿದೆ.

ಅದು ದೈನಂದಿನ ವ್ಯವಹಾರದಲ್ಲಿ ವಾಸ್ತವವೂ ಆಗಿದೆ. ಎರಡನೆಯದಾಗಿ, ಹೆಚ್ಚು ಆಳವಾದ ಕಾರಣವೆಂದರೆ ವಯಸ್ಸು ಎಂಬುದು ಸಂಖ್ಯೆಯಾಗಿರುವುದರಿಂದ ಸಮಾಜದಲ್ಲಿ ಅರ್ಹವಾದ ಗೌರವವನ್ನು ಕಂಡುಕೊಳ್ಳಲು ಅದನ್ನು ಬಳಸಬೇಕಿದೆ. ಇತ್ತೀಚೆಗೆ ಪುಣೆಯಲ್ಲಿ ಅಪ್ರಾಪ್ತ ವಯಸ್ಕ ಬಾಲಕ ಕುಡಿದು ವಾಹನ ಚಲಾಯಿಸಿ ಅನಾಹುತವೆಸಗಿರುವ ಪ್ರಕರಣದ ಸಮ್ಮುಖದಲ್ಲಿ ಇದು ಮತ್ತೆ ಚರ್ಚೆಗೆ ಬಂದಿದೆ – ಮನುಷ್ಯ ತನ್ನ ಜೀವನದಲ್ಲಿ ಕೆಲವೊಂದನ್ನು ಆರಂಭಿಸಲು ವಯಸ್ಸಿನ ನಿರ್ಬಂಧಗಳು ಇರಬೇಕೇ?

ಪೆಗ್ ಬೈ ಪೆಗ್​ ವೃತ್ತಾಂತ ಹೀಗಿದೆ: ವಾರದ ಹಿಂದೆ ನಡೆದ ಪುಣೆ ಪೋರ್ಷ್ (Porsche Taycan car)​​​ ಅಪಘಾತದ ತಾಜಾ ಬೆಳವಣಿಗೆಯಲ್ಲಿ, ಹದಿಹರೆಯದ ಬಾಲಕ ಚಲಾಯಿಸುತ್ತಿದ್ದ ಐಷಾರಾಮಿ ಕಾರಿನ ಚಕ್ರಗಳಡಿ ಸಿಕ್ಕಿಬಿದ್ದು ಇಬ್ಬರು ಯುವ ಟೆಕ್ಕಿಗಳು ಸಾವನ್ನಪ್ಪಿದರು. ಐಷಾರಾಮಿ ಸೆಡಾನ್‌ ಕಾರಿನ ಅಪ್ರಾಪ್ತ ವಯಸ್ಸಿನ ಚಾಲಕ ಪ್ರಮುಖ ಬಿಲ್ಡರ್‌ನ 17 ವರ್ಷದ ಮಗ ಎಂಬುದು ಆತಂಕಕಾರಿ ವಿಷಯವಾಗಿದೆ.

ಪೋರ್ಷ್ ಕಾರನ್ನು ಚಾಲನೆ ಮಾಡುವ ಮೊದಲು ಮದ್ಯ ಸೇವಿಸಿದ್ದಾನೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಪೊಲೀಸರು CCTV ಫೂಟೇಜ್ ಸೇರಿದಂತೆ ಇನ್ನೂ ಕೆಲ ಪುರಾವೆಗಳನ್ನು ಕಲೆಹಾಕಿದ್ದಾರೆ. ಗಮನಿಸಿ ಮಹಾರಾಷ್ಟ್ರದಲ್ಲಿ ಆಲ್ಕೋಹಾಲ್​ ಕುಡಿಯುವವರ ವಯೋಮಿತಿಯನ್ನು 25 ವರ್ಷಕ್ಕೆ ನಿಗದಿಪಡಿಸಲಾಗಿದೆ. ಹಾಗಾದರೆ ಅಪ್ರಾಪ್ತ ವಯಸ್ಕರಿಗೆ ಬಾರ್‌ನಲ್ಲಿ ಮದ್ಯವನ್ನು ಏಕೆ ನೀಡಲಾಯಿತು ಎಂಬುದು ಚರ್ಚೆಯ ವಿಷಯವಾಗಿದೆ.

ಮನುಷ್ಯ ಜೀವನದಲ್ಲಿ ಕೆಲವೊಂದು ಮಹತ್ವದ ಆಯಕಟ್ಟಿನ ಕೆಲಸಗಳನ್ನು ಪ್ರಾರಂಭಿಸಲು ವಯಸ್ಸಿನ ಮಾನದಂಡವನ್ನು ನಿಗದಿಪಡಿಸಲಾಗಿದೆ ಮತ್ತು ಅದನ್ನು ಜಾಗತಿಕವಾಗಿಯೂ ಅನುಸರಿಸಲಾಗುತ್ತದೆ, ಮದ್ಯಪಾನ, ವಾಹನ ಚಾಲನೆ, ಮತದಾನ, ಮದುವೆ ಮತ್ತು ವಿಡಿಯೋ ವೀಕ್ಷಣೆಗೆ ಇವೇ ಮುಂತಾದವುಗಳಿಗೆ ನಿರ್ದಿಷ್ಟ ವಯಸ್ಸನ್ನು ನಿಗದಿಪಡಿಸಲಾಗಿದೆ.

ಇದು ಯಾಕೆ ಹೀಗೆ? ಇದಕ್ಕೆಲ್ಲ ನಿಯಂತ್ರಣ/ಕಡಿವಾಣ ಇಲ್ಲದೆ, ಮುಕ್ತ ಸಮಾಜ ಇರಬೇಕಾ? ನೀತಿ ನಿರೂಪಕರು ಮತ್ತು ವೈದ್ಯಲೋಕದ ತಜ್ಞರು ಅಂತಹ ಸ್ವತಂತ್ರ ಸ್ವೇಚ್ಛಾಚಾರವನ್ನು ನಿರಾಕರಿಸಲು ಅನೇಕ ಉತ್ತಮ ಕಾರಣಗಳನ್ನು ಹೊಂದಿದ್ದಾರೆ ಎಂಬುದು ಸಮಾಧಾನಕರ.

ಅಂತಹವುಗಳನ್ನು ಪ್ರಾರಂಭಿಸಲು ವಯಸ್ಸಿನ ನಿರ್ಬಂಧ ಏಕೆ? ಕೆಲ ನಿರ್ದಿಷ್ಟ ಚಟುವಟಿಕೆಗಳು ಪ್ರಾರಂಭದ ವಯಸ್ಸನ್ನು ಹೊಂದಿವೆ. ಇದಕ್ಕೆ ಅನ್ವಯಿಸುವಂತಹ ಕೆಲವು ಸಾರ್ವತ್ರಿಕ ಮಾನದಂಡಗಳಿವೆ. ಮತ್ತು ಅದನ್ನು ಆಯಾ ಸರ್ಕಾರಗಳು ನಿಗದಿಪಡಿಸಿವೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಚಾಲನೆ ಮಾಡಲು 16 ವರ್ಷ ವಯಸ್ಸಿನವರೆಗೆ ಕಾಯಬೇಕು, ಮದ್ಯಪಾನವನ್ನು ಪ್ರಾರಂಭಿಸಲು 21 ವರ್ಷ, ಪೋಷಕರ ಒಪ್ಪಿಗೆಯಿಲ್ಲದೆ ಮದುವೆಯಾಗಲು 18 ವರ್ಷ, ಅಧ್ಯಕ್ಷನಾಗಲು 35 ವರ್ಷ ಮತ್ತು ಹೀಗೆ. ಭಾರತೀಯ ಸನ್ನಿವೇಶದಲ್ಲಿ, ಈ ವಯಸ್ಸುಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ ಆದರೆ ಕನಿಷ್ಠ ವಯಸ್ಸು ಎಂಬ ಸಂಖ್ಯೆ ಸಾರ್ವತ್ರಿಕ ನಿಯಮವಾಗಿ ನಿಗದಿಯಾಗಿದೆ.

Also Read: Stridhan law in IPC – ಅಮೂಲ್ಯವಾದ ಸ್ತ್ರೀಧನ ಮಹಿಳೆಯರಿಗೆ ಆಪತ್ಬಾಂಧವ -ಏನೆಲ್ಲಾ ಹಕ್ಕುಗಳಿವೆ ತಿಳಿದುಕೊಳ್ಳಿ

ಮದ್ಯದ ವಯಸ್ಸಿನ ಮಿತಿಯು ಯಾಕೆಂದರೆ ಯುವಜನರು ಆಲ್ಕೋಹಾಲ್​​ಗೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ ಎಂದು ಸಾದರಪಡಿಸುವ ಸಂಶೋಧನೆಯನ್ನು ಆಧರಿಸಿದೆ. ಹದಿಹರೆಯದವರು ವಯಸ್ಕರಿಗಿಂತ ಎರಡು ಪಟ್ಟು ವೇಗವಾಗಿ ಕುಡಿಯುತ್ತಾರೆ ಮತ್ತು ಕುಡಿತವನ್ನು ಯಾವಾಗ ನಿಲ್ಲಿಸಬೇಕೆಂದು ತಿಳಿಯುವಲ್ಲಿ ಹೆಚ್ಚು ತೊಂದರೆಗೆ ಸಿಲುಕುತ್ತಾರೆ. ಹದಿಹರೆಯದವರು ವಯಸ್ಕರಿಗಿಂತ ಹೆಚ್ಚಾಗಿ ಸೇವಿಸುವ ಮತ್ತು ಅತಿಯಾಗಿ ಸೇವಿಸುವ ಸಾಧ್ಯತೆ ಹೆಚ್ಚು ಎಂದು 2023 ರಲ್ಲಿ National Crime Records Bureau (NCRB) ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕುಡಿಯುವ ವಯಸ್ಸನ್ನು 21 ವರ್ಷಕ್ಕೆ ಕಾನೂನುಬದ್ಧವಾಗಿ ಜಾರಿಗೊಳಿಸುವುದರ ಸಂಭವನೀಯ ಪ್ರಯೋಜನಗಳನ್ನು ಪಟ್ಟಿ ಮಾಡಿದೆ. ಇದು ಟ್ರಾಫಿಕ್ ಕ್ರ್ಯಾಶ್‌ಗಳನ್ನು ಕಡಿಮೆ ಮಾಡುತ್ತದೆ, ಯುವ ಜನರ ಮೆದುಳನ್ನು ರಕ್ಷಿಸುತ್ತದೆ ಮತ್ತು ಒಟ್ಟಾರೆಯಾಗಿ ಯುವಜನರನ್ನು ಸುರಕ್ಷಿತವಾಗಿರಿಸುತ್ತದೆ. ಜೊತೆಗೆ ಇತರೆ ಅಮೂಲ್ಯ ಜೀವಗಳನ್ನೂ ರಕ್ಷಿಸುತ್ತದೆ ಎಂಬುದನ್ನು ಮನಗಾಣಬೇಕು.

ಇನ್ನು, ವಯಸ್ಸಿನ ನಿರ್ಬಂಧಗಳಿಗೆ ವೈದ್ಯಕೀಯ ಶಿಫಾರಸು ಇದೆಯೇ? ಎಂಬ ಪ್ರಶ್ನೆಗೆ ಹೌದು, ವಯಸ್ಸಿನ ನಿರ್ಬಂಧಗಳನ್ನು ಹಾಕಲು ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಕಾರಣವಿದೆ. ಮನುಷ್ಯನ ದೇಹದ ಬೆಳವಣಿಗೆಯು 18-20 ವರ್ಷಗಳ ನಡುವೆ ನಿಲ್ಲುತ್ತದೆ. ಅಂದರೆ ನಿಮ್ಮ ಎಲ್ಲಾ ಅಂಗಗಳು ಈ ವಯಸ್ಸಿಗೆ ಅಭಿವೃದ್ಧಿ ಹೊಂದುತ್ತವೆ. ವಯಸ್ಸಿಗೆ ಸಂಬಂಧಿಸಿದ ಯಾವುದೇ ನಿರ್ಬಂಧಗಳನ್ನು ಹೊಂದಿಸಲು ಇದು ಆಧಾರವಾಗುತ್ತದೆ ಎಂದು ದೆಹಲಿಯ ಅಪೋಲೋ ಆಸ್ಪತ್ರೆಗಳ ಆಂತರಿಕ ಔಷಧ ತಜ್ಞ ಡಾ.ಸುರಂಜಿತ್ ಚಟರ್ಜಿ ವಿವರಿಸುತ್ತಾರೆ.

ನೀವು ವಯಸ್ಸನ್ನು ದಾಟಿದ ನಂತರ ದೈಹಿಕವಾಗಿ ದೇಹವು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುವ ನಿರೀಕ್ಷೆಯಿದೆ ಎಂದು ಅವರು ಸೇರಿಸುತ್ತಾರೆ. ಪ್ರಾಯಶಃ 15 ವರ್ಷಕ್ಕಿಂತ ಮೊದಲು ಕುಡಿಯಲು ಪ್ರಾರಂಭಿಸುವ ಯುವ ಜನತೆ 21 ವರ್ಷದ ನಂತರ ಕುಡಿಯಲು ಪ್ರಾರಂಭಿಸುವ ವಯಸ್ಕರರಿಗಿಂತ ತಮ್ಮ ನಂತರದ ಜೀವನದಲ್ಲಿ ಆಲ್ಕೊಹಾಲ್ ಅವಲಂಬನೆ ಅಥವಾ ದುರುಪಯೋಗ ಸಾಧ್ಯತೆ ಆರು ಪಟ್ಟು ಹೆಚ್ಚು ಎಂಬ ಆತಂಕಕಾರಿ ಅಂಶ ಅಡಗಿದೆ!

ಕೆಲ ನಿರ್ದಿಷ್ಟ ಕೆಲಸಗಳ ಆರಂಭಕ್ಕೆ ವಯಸ್ಸಿನ ನಿರ್ಬಂಧದ ಕಡಿವಾಣ ವಿಧಿಸುವುದು ದೇಹಕ್ಕೆ ಸಂಬಂಧಪಟ್ಟದ್ದಕ್ಕಿಂತ ಮಾನಸಿಕ ಯೋಗಕ್ಷೇಮದ ಮಹತ್ತರ ಸಂದರ್ಭಗಳಾಗಿವೆ ಅವು. ಯಾವುದೇ ವಯಸ್ಸಿನಲ್ಲಿ ಅತಿಯಾಗಿ ಕುಡಿಯುವುದು ಅಂತಹವರ ಒಟ್ಟಾರೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಚಿಕ್ಕ ವಯಸ್ಸಿನಲ್ಲೇ ಆಲ್ಕೋಹಾಲ್​​ ಕುಡಿಯುವುದು ಅಂತಹ ದುರಂತ ಪರಿಣಾಮವನ್ನು ಬೀರುವುದಿಲ್ಲ. ಆದರೆ ಅದೇ ವ್ಯಕ್ತಿಯು ಪ್ರಬುದ್ಧ ಮೆದುಳನ್ನು ಹೊಂದಿದ್ದರೆ, ಅಂತಹವರು ತಮ್ಮ ಆರೋಗ್ಯ ಮತ್ತು ಸಮಾಜದ ಮೇಲೆ ಪರಿಣಾಮ ಬೀರುವ ಬಗ್ಗೆ ಹೆಚ್ಚು ಜಾಗೃತನಾಗಿರುತ್ತಾನೆ ಮತ್ತು ಜವಾಬ್ದಾರಿ ಹೊಂದಿರುತ್ತಾನೆ ಎಂದು ಅವರು ವಿವರಿಸುತ್ತಾರೆ.

ಇದೇ ಉದಾತ್ತ ನಿಯಮವು ಡ್ರೈವಿಂಗ್, ಮದುವೆ, ಟಿವಿ ಮತ್ತು OTT ಯಲ್ಲಿ ವಿಡಿಯೋಗಳ ವೀಕ್ಷಣೆಗೂ ಸಹ ಅನ್ವಯಿಸುತ್ತದೆ. ಅಂತಹ ವ್ಯಕ್ತಿಯ ಮೆದುಳು ಎಷ್ಟು ಪ್ರಬುದ್ಧವಾಗಿದೆ ಎಂಬುದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. 18, 21 ಮತ್ತು 25 ವರ್ಷಗಳನ್ನು ತಲುಪುವ ಮೊದಲು ಪ್ರಾರಂಭಿಕ ವಯಸ್ಸನ್ನು ನಿಗದಿಪಡಿಸುವುದರ ಹಿಂದೆ ಇರುವ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ತಜ್ಞರು ಪರಿಗಣನೆಗೆ ತೆಗೆದುಕೊಂಡಿದ್ದಾರೆ ಎಂದು ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಸಮಾಜಶಾಸ್ತ್ರಜ್ಞ ರೇಷ್ಮಾ ಅಘಾ ಹೇಳುತ್ತಾರೆ.

ಪ್ರೌಢಾವಸ್ಥೆ ಎಂದರೆ ಪ್ರಬುದ್ಧತೆಯೇ? ಆದ್ದರಿಂದ, ನೀವು 18 ನೇ ವಯಸ್ಸಿನಲ್ಲಿ ವಯಸ್ಕ ಎಂದು ಪರಿಗಣಿಸಿದರೆ, 25 ವರ್ಷ ವಯಸ್ಸಿನ ನಂತರ ಕೆಲವು ವಯಸ್ಸಿನ ಉಪಕ್ರಮಗಳನ್ನು ಏಕೆ ಹೊಂದಿಸಲಾಗಿದೆ? ಬಹುಮತದ ವಯಸ್ಸು (age of majority -AoM-ಪ್ರೌಢಾವಸ್ಥೆ) ಮತ್ತು ಮೆಚ್ಯೂರಿಟಿ (ಪ್ರಬುದ್ಧತೆ -maturity) ನಡುವಿನ ವ್ಯತ್ಯಾಸವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಮೊದಲನೆಯದು ಕಾನೂನುಬದ್ಧ ಪ್ರೌಢಾವಸ್ಥೆಯ ಮಿತಿಯಾಗಿದ್ದು, ಕಾನೂನಿನಿಂದ ಗುರುತಿಸಲ್ಪಟ್ಟಿದೆ ಅಥವಾ ಘೋಷಿಸಲ್ಪಟ್ಟಿದೆ. ಪ್ರಬುದ್ಧತೆಯು ಯಾವುದೇ ನಿರ್ದಿಷ್ಟ ಮಾರ್ಗಸೂಚಿಗಳನ್ನು ಹೊಂದಿರದ ವ್ಯಕ್ತಿನಿಷ್ಠ ಪದವಾಗಿದೆ. AoM ಎಂಬ ಪ್ರೌಢಾವಸ್ಥೆ ಎನ್ನುವುದು ಒಬ್ಬ ವ್ಯಕ್ತಿಯು ಮೈನರ್​​ (ಅಪ್ರಾಪ್ತ ವಯಸ್ಸು) ಎಂದು ಪರಿಗಣಿಸುವುದನ್ನು ನಿಲ್ಲಿಸುವ ಕ್ಷಣವಾಗಿದೆ.

AoM ಎನ್ನುವುದು ವ್ಯಕ್ತಿಯನ್ನು ಅಪ್ರಾಪ್ತ ಎಂದು ಪರಿಗಣಿಸುವುದನ್ನು ನಿಲ್ಲಿಸಿದಾಗ, ಅಲ್ಲಿಂದಾಚೆಗೆ ಆ ವ್ಯಕ್ತಿಯ ಕೆಲಸಗಳು, ಚಟುವಟಿಕೆಗಳು, ಕ್ರಮಗಳು ಮತ್ತು ನಿರ್ಧಾರಗಳ ಮೇಲೆ ಕಾನೂನು ನಿಯಂತ್ರಣವನ್ನು ಪಡೆದುಕೊಳ್ಳುವ ಕ್ಷಣವಾಗಿದೆ. ಹೀಗಾಗಿ ಅಂತಹ ವ್ಯಕ್ತಿಯ ಮೇಲೆ ಪೋಷಕರ ನಿಯಂತ್ರಣ ಕೊನೆಗೊಂಡು, ಕಾನೂನುಬದ್ಧ ಜವಾಬ್ದಾರಿಗಳನ್ನು ಆರಂಭಿಸುತ್ತದೆ.

ಹೆಚ್ಚಿನ ದೇಶಗಳು ಬಹುಮತದ ವಯಸ್ಸನ್ನು 18 ಕ್ಕೆ ನಿಗದಿಪಡಿಸಿವೆಯಾದರೂ ಕೆಲವು ದೇಶಗಳಲ್ಲಿ ಈ ನ್ಯಾಯವ್ಯಾಪ್ತಿಗಳು ಹೆಚ್ಚಿನ ವಯಸ್ಸನ್ನು ಹೊಂದಿವೆ ಮತ್ತು ಇತರೆ ಕೆಲ ದೇಶಗಳಲ್ಲಿ ಆ ವಯಸ್ಸು ಕಡಿಮೆ ಇದೆ.

Also Read: ಮದರಸಾದಲ್ಲಿ ಓದಿದ ವಿದ್ಯಾರ್ಥಿಗೆ IAS ನಲ್ಲಿ 751ನೇ ರ‍್ಯಾಂಕ್‌​​! UPSC ನಲ್ಲಿ ಹೆಚ್ಚು ಹೆಚ್ಚು ಯಶಸ್ಸು ಕಾಣುತ್ತಿರುವ ಯುವ ಮುಸಲ್ಮಾನರು!

ವ್ಯಕ್ತಿಗತ ಪ್ರಬುದ್ಧತೆಯನ್ನು ತಲುಪುವುದಕ್ಕೆ ಮತ್ತು ಪ್ರೌಢಾವಸ್ಥೆಗೆ ತಲುಪುವುದಕ್ಕೆ ಯಾವುದೇ ಸಂಬಂಧವಿಲ್ಲ. ನಮ್ಮ ಕಾನೂನು, ನೀತಿ ನಿರೂಪಕರು ಕೆಲವು ಉದ್ದೇಶಗಳಿಗಾಗಿ ಪ್ರಮಾಣಿತ ವಯಸ್ಸನ್ನು ನಿಗದಿಪಡಿಸಿದಾಗ, ನಮ್ಮ ಮೆದುಳು 20 ವರ್ಷ ವಯಸ್ಸಿನ ನಂತರ ಬೆಳವಣಿಗೆಯನ್ನು ನಿಲ್ಲಿಸುತ್ತದೆ ಎಂಬ ಮಹತ್ವದ ಅಂಶವನ್ನು ಪರಿಗಣನೆಗೆ ತೆಗೆದುಕೊಂಡ ನಂತರವೇ ನಿರ್ಧರಿಸಿದ್ದಾರೆ.

ಒಟ್ಟಾರೆಯಾಗಿ, ವಯಸ್ಸಿನ ನಿರ್ಬಂಧಗಳು ಕೆಲವು ಶಾರೀರಿಕ ಮತ್ತು ಮಾನಸಿಕ ಅಂಶಗಳ ಮೇಲೆ ಆಧಾರಿತವಾಗಿವೆ. ಆ ಅಂಶಗಳನ್ನು ನಿರ್ಲಕ್ಷಿಸಲಾಗುವುದಿಲ್ಲ (ಮತ್ತು ನಿರ್ಲಕ್ಷಯ ಮಾಡಬಾರದು) ಎಂಬುದು ಗಮನಾರ್ಹ. ಅದಕ್ಕೇ ಹೇಳಿದ್ದು ಮುಂದಿನ ಬಾರಿ ನೀವು A ಪ್ರಮಾಣೀಕೃತ ಚಲನಚಿತ್ರವನ್ನು ವೀಕ್ಷಿಸಲು ಪ್ರಚೋದಿತರಾದರೆ ಅಥವಾ 17 ನೇ ವಯಸ್ಸಿಗೇ ಆಲ್ಕೋಹಾಲ್​​ ಕುಡಿಯಲು ಬಯಸಿದರೆ ಸದಾ ನೆನಪಿಡಿ – ಎಲ್ಲದಕ್ಕೂ ಒಂದು ವಯಸ್ಸು, ಇತಿಮಿತಿ ಇದೆ ಎಂಬುದು ಮತ್ತು ಅದು ಇಂದಿನ ದಿನ ಅಲ್ಲ ಎಂಬುದನ್ನೂ ಚೆನ್ನಾಗಿ ಮನಗಾಣಿ. ಆಗ ಎಲ್ಲವೂ ಕ್ಷೇಮ ಕ್ಷೇಮ ಕ್ಷೇಮ.

Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ