‘ನೀಟ್’ ಆಗಿ​ ಸಂವಿಧಾನ ವಿರೋಧಿ ಕ್ರಮ ಕೈಗೊಂಡ ಕಾಂಗ್ರೆಸ್ ಸರ್ಕಾರ!

ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣದಿಂದ ತತ್ತರಿಸಿರುವ ಕಾಂಗ್ರೆಸ್​ ಸರಕಾರ ಜನರಲ್ಲಿ ಹೊಸ ಸಂಕಥನ ಹುಟ್ಟು ಹಾಕಲು ಪ್ರಯತ್ನಿಸಿದೆ. ಆ ಪ್ರಯತ್ನದ ಫಲವೇ ನೀಟ್​ ವಿರೋಧಿ ಗೊತ್ತುವಳಿಯನ್ನು ವಿಧಾನ ಮಂಡಲ ಅಂಗೀಕರಿಸಿದ್ದು. ನೀಟ್​ ವಿರೋಧಿ ಗೊತ್ತುವಳಿ ಅಂಗೀಕರಿಸಿ, ಕಾಂಗ್ರೆಸ್​ ಕೂಡ ಸಂವಿಧಾನ ವಿರೋಧಿ ಎಂದು ಸಾಬೀತು ಪಡಿಸಿದೆ.

'ನೀಟ್' ಆಗಿ​ ಸಂವಿಧಾನ ವಿರೋಧಿ ಕ್ರಮ ಕೈಗೊಂಡ ಕಾಂಗ್ರೆಸ್ ಸರ್ಕಾರ!
ನೀಟ್
Follow us
ಡಾ. ಭಾಸ್ಕರ ಹೆಗಡೆ
|

Updated on:Jul 26, 2024 | 11:17 AM

ಮುಡಾ ಹಗರಣದ ಗದ್ದಲದ ಮಧ್ಯೆ ವಿಧಾನ ಮಂಡಲದ ಮಳೆಗಾಲದ ಅಧಿವೇಶನ ಅವಧಿಗೂ ಮುನ್ನ ಮುಗಿಯುವುದು ನಿಶ್ಚಿತವಾಗಿದೆ. ಇನ್ನೂ ಒಂದು ದಿನದ ಕಾಲಾವಧಿ ಬಾಕಿ ಇದ್ದಂತೆಯೇ, ಮೇಲ್ಮನೆಯನ್ನು ಗುರುವಾರ ಮಧ್ಯಾಹ್ನ ಅನಿರ್ದಿಷ್ಟ ಕಾಲಾವಧಿವರೆಗೆ ಮುಂದೂಡಲಾಯ್ತು. ವಿಧಾನಸಭೆ ಕೂಡ ಅದೇ ದಾರಿ ಕಾಣುವ ಸಾಧ್ಯತೆ ಹೆಚ್ಚಾಗಿದೆ. ಈ ಮಧ್ಯೆ ಆಡಳಿತಾರೂಢ ಕಾಂಗ್ರೆಸ್ ಹಲವಾರು ವಿಧೇಯಕಗಳನ್ನು ಅಂಗೀಕರಿಸಿದೆ. ಅದೇನು ತಪ್ಪಿಲ್ಲ ಬಿಡಿ. ಅದರ ಜೊತೆ ಜೊತೆಗೆ ನೀಟ್ ಪರೀಕ್ಷೆ ಮತ್ತು ಒಂದು ದೇಶ-ಒಂದು ಚುನಾವಣಾ ಪ್ರಸ್ತಾವಗಳನ್ನು ವಿರೋಧಿಸುವ ಗೊತ್ತುವಳಿಯನ್ನು ಎರಡು ಸದನಗಳು ಅಂಗೀಕರಿಸಿವೆ. ಇದೇನು ಹೊಸದಲ್ಲ. ಪಕ್ಕದ ತಮಿಳುನಾಡಿನಲ್ಲಿಯೂ ಇದೇ ರೀತಿಯ ಗೊತ್ತುವಳಿಯನ್ನು ಅಲ್ಲಿಯ ವಿಧಾನಮಂಡಲ ಅಂಗೀಕರಿಸಿದೆ. ಅಲ್ಲಿಯ ನಾಯಕರುಗಳು ನೀಟ್ ಪರೀಕ್ಷೆಯನ್ನು ಇನ್ನೂ ತೀವ್ರವಾಗಿ ವಿರೋಧಿಸಿವೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಕಲಾಪ: ನೀಟ್ ಪರೀಕ್ಷೆ ರದ್ದುಪಡಿಸುವಂತೆ ಒತ್ತಾಯಿಸಿ ನಿರ್ಣಯ ಅಂಗೀಕಾರ

ನೀಟ್ ಹಿನ್ನೆಲೆ

2010 ರಲ್ಲಿ, ಕಾಂಗ್ರೆಸ್ ನೇತೃತ್ವದ ಯೂಪಿಎ ಸರಕಾರ ಅಧಿಕಾರದಲ್ಲಿದ್ದಾಗ ಈ ನೀಟ್ ಪರೀಕ್ಷೆ ಪರಿಕಲ್ಪನೆ ಹುಟ್ಟಿತು. ಮತ್ತು 2013 ರಲ್ಲಿ ಜಾರಿಗೆ ಬರಬೇಕಿದ್ದ ಈ ಪರೀಕ್ಷೆ ಹಲವಾರು ರಾಜ್ಯಗಳ ವಿರೋಧದಿಂದಾಗಿ ನಡೆಯಲೇ ಇಲ್ಲ. ಈ ನಡುವೆ ಹಲವಾರು ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ರಾಜ್ಯ ಸರಕಾರಗಳು ಸರ್ವೊಚ್ಛ ನ್ಯಾಯಾಲಯದ ಮೆಟ್ಟಿಲು ಹತ್ತಿ ಇದನ್ನು ತಿರಸ್ಕರಿಸಿ ಎಂದು ಕೊರಿದವು. ಭಾರತೀಯ ಕಾನೂನಿನ ಅಡಿ ಪ್ರದತ್ತವಾದ ಯಾವ ಅಧಿಕಾರ ಇಲ್ಲದ ಕಾರಣಕ್ಕಾಗಿ ಭಾರತೀಯ ವೈದ್ಯಕೀಯ ಮಂಡಳಿ ಮತ್ತು ಭಾರತೀಯ ದಂತ ವೈದ್ಯಕೀಯ ಮಂಡಳಿಗೆ ಈ ‘ನೀಟ್’ ಪರೀಕ್ಷೆಯನ್ನು ನಡೆಸುವ ಅಧಿಕಾರ ಇಲ್ಲ ಎಂದು ಹೇಳುತ್ತ ನೀಟ್ ಪರೀಕ್ಷೆ ಪ್ರಸ್ತಾವವನ್ನು 2013 ಜುಲೈನಲ್ಲಿ ಮೂವರು ನ್ಯಾಯಾಧೀಶರ ಪೀಠ 2-1ರಂತೆ ತಿರಸ್ಕರಿಸಿತು.

ಆದರೆ, ಅದೇ ವರ್ಷ ಅಕ್ಟೋಬರ್ನಲ್ಲಿ ಭಾರತೀಯ ವೈದ್ಯಕೀಯ ಮಂಡಳಿ ಮತ್ತೆ ಸುಪ್ರೀಂ ಕೋರ್ಟನ ಮೆಟ್ಟಿಲು ಹತ್ತಿ, ಈ ಹಿಂದಿನ 2-1 ರ ತೀರ್ಪನ್ನು ಪುನರ್ ವಿಮರ್ಶಿಸಬೇಕು ಎಂದು ಕೋರಿತು. ಆಗ ಒಂದು ಸಂವಿಧಾನಿಕ ಪೀಠ ರಚಿಸಲಾಯಿತು. ಅದು ಎಲ್ಲರ ವಿಚಾರವನ್ನು ಆಲಿಸಿ, ಏಪ್ರಿಲ್ 7, 2016 ರಲ್ಲಿ ತೀರ್ಪು ಕಾದಿಟ್ಟಿತು. ಕೊನೆಗೆ ಏಪ್ರಿಲ್ 11 ರಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್ 2013 ರ ತನ್ನದೇ ತೀರ್ಪನ್ನು ತಿರಸ್ಕರಿಸಿತು ಮತ್ತು 2010 ರಲ್ಲಿ ಸರಕಾರ ನೀಟ್ ಪರೀಕ್ಷೆ ನಡೆಸಲು ಹೊರಡಿಸಿದ್ದ ಆದೇಶವನ್ನು ಎತ್ತಿ ಹಿಡಿಯಿತು. ಅಷ್ಟೇ ಅಲ್ಲ, ಇನ್ನು ಮುಂದೆ ನೀಟ್ ತೀರ್ಪಿನ ವಿಚಾರದಲ್ಲಿ ಯಾರಿಗಾದರೂ ತಕರಾರಿದ್ದರೆ ಸುಪ್ರೀಂ ಕೋರ್ಟಿಗೇ ಬರಬೇಕು ಎಂಬ ಮಾತನ್ನು ಒತ್ತಿ ಹೇಳಿತು. ಈ ತೀರ್ಪು ಸಂವಿಧಾನಿಕ ಪೀಠದಿಂದ ಬಂದಿದ್ದರಿಂದ ಅದೇ ಕಾನೂನಾಯಿತು. ಸಂಸತ್ತು ಈ ವಿಚಾರದಲ್ಲಿ ಬೇರೆ ಕಾನೂನು ಮಾಡಿ ನೀಟ್ ಪರೀಕ್ಷೆ ಕೈ ಬಿಡುವ ಕ್ರಮ ತೆಗೆದುಕೊಂಡಿಲ್ಲದೇ ಇರುವುದರಿಂದ ನೀಟ್ ಪರೀಕ್ಷೇಗೆ ಕಾನೂನಿನ ಮುದ್ರೆ ಬಿದ್ದಂತಾಯ್ತು.

ನೀಟ್ ವಿರೋಧ ಮತ್ತು ರಾಜಕೀಯ

ಈ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಕರ್ನಾಟಕ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ಯಾವ ಮಾನ್ಯತೆ ಕೂಡ ಇಲ್ಲ. ಇಲ್ಲಿ ಮುಖ್ಯವಾಗಿ ಮೂರು ವಿಚಾರವನ್ನು ಗಮನಿಸಲೇಬೇಕು. ಒಂದು, ಈ ಎರಡೂ ರಾಜ್ಯಗಳಲ್ಲಿ ಅತೀ ಹೆಚ್ಚು ಮೆಡಿಕಲ್ ಕಾಲೇಜುಗಳು ಯಾರ ಕೈಲಿವೆ ಎಂಬುದನ್ನು ಗಮನಿಸಿದಾಗ ನೀಟ್ ವಿರೋಧಿ ಬಣದ ಹಿಂದಿನ ರಾಜಕೀಯ ಎಲ್ಲರಿಗೂ ಅರ್ಥ ಆಗುತ್ತದೆ.

ಎರಡನೆಯದು: ಸುಪ್ರೀಂ ಕೋರ್ಟಗೆ ಹೋಗದೇ, ವಿಧಾನ ಮಂಡಲದಲ್ಲಿ ಅದೆಷ್ಟೇ ಗೊತ್ತುವಳಿ ಅಂಗೀಕರಿಸಿದರೂ ಅದರಿಂದ ಏನೂ ಪ್ರಯೋಜನ ಆಗುವುದಿಲ್ಲ ಎಂದು ಗೊತ್ತಿದ್ದರೂ ಈ ರೀತಿ ಮಾಡುವುದು ಏಕೆ? ಇದು ರಾಜಕೀಯ ನಡೆ. ಬಿಜೆಪಿ ಮತ್ತು ಮೋದಿ ಸರಕಾರದ ಪ್ರತಿ ನಡೆಯನ್ನು ವಿರೋಧಿಸುತ್ತೇವೆ ಎಂದು ಜನರಿಗೆ ಹೇಳಬಹುದು ಅಷ್ಟೆ.

ಮೂರನೇಯದಾಗಿ, ‘Will of the people’ (ಜನರ ಇಚ್ಛಾಬಲ) ತತ್ವದಡಿ ಒಂದು ಸಾಂವಿಧಾನಿಕ ಪೀಠ ನೀಡಿದ ತೀರ್ಪನ್ನು ನಿಕಷಕ್ಕೆ ಒಡ್ಡುತ್ತೇವೆ ಎಂಬ ವಾದ ಅದೆಷ್ಟು ಸರಿ? ಇದು ನ್ಯಾಯಾಲಯದ ನಿಂದನೆ ಆಗದೇ? ನೀಟ್​ ವಿಚಾರದಲ್ಲಿ ಸರಕಾರ ತೆಗೆದುಕೊಂಡ ನಿರ್ಧಾರ ಖಂಡಿತವಾಗಿ ನ್ಯಾಯಾಲಯ ನಿಂದನೆ ಪರಿವ್ಯಾಪ್ತಿಗೆ ಬರುತ್ತದೆ. ಕಾವೇರಿ ನೀರಿನ ವಿಚಾರದಲ್ಲಿ ಹಿಂದೊಮ್ಮೆ ಸುಪ್ರೀಂ ಕೋರ್ಟ ನೀಡಿದ ನಿರ್ದೇಶನ ಜಾರಿಗೆ ತರದಿದ್ದುದಕ್ಕೆ ಏನಾಗಿತ್ತು ಎಂಬುದನ್ನು ಕರ್ನಾಟಕ ಸರಕಾರ ನೆನಪಿಗೆ ತಂದುಕೊಳ್ಳಬೇಕಿತ್ತು. ಈಗ ನೀಟ್ ಪರೀಕ್ಷೆ ನಿಲ್ಲಿಸುವ ಅಧಿಕಾರ ಯಾವ ರಾಜ್ಯಸರಕಾರಕ್ಕೆ ಇಲ್ಲದಿರುವುದರಿಂದ ಕರ್ನಾಟಕ ವಿಧಾನ ಮಂಡಲ ಅಂಗೀಕರಿಸಿರುವ ಗೊತ್ತುವಳಿಗೆ ಯಾವ ಕವಡೆ ಕಿಮ್ಮತ್ತಿಲ್ಲ. ಹಾಗಾಗಿ ಸರ್ವೋಚ್ಛ ನ್ಯಾಯಾಲಯ ಇಂತಹ ಗೊತ್ತುವಳಿ ಬಗ್ಗೆ ತಲೆಕೆಡಿಸಿಕೊಳ್ಳಲಾರದು. ಆದರೆ, ಈ ರೀತಿ ಮಾಡುವ ಮೂಲಕ ಅಮಾಯಕ ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯುವ ಸರಕಾರದ ನಿರ್ಧಾರ ಅದೆಷ್ಟು ಸಮಂಜಸ?

ಮಾತಲ್ಲಿ ಸಂವಿಧಾನ ಉಳಿಸುವ ಗುಂಪು ನಮ್ಮದು ಎಂದರೆ ಏನು ಪ್ರಯೋಜನ? ಕಿಸೆಯಲ್ಲಿಸಂವಿಧಾನದ ಪುಸ್ತಕ ಹಿಡಿದುಕೊಂಡು, ತಿಂಗಳಿಗೊಮ್ಮೆ ಸಂವಿಧಾನದ ಪೀಠಿಕೆ ಓದಿದರೆ ಯಾರೂ ಸಂವಿಧಾನ ಪ್ರಕಾರ ನಡೆಯುವ ಪ್ರಜೆ ಆಗುವುದಿಲ್ಲ. ಅಧಿಕಾರದಲ್ಲಿದ್ದಾಗ ಜನರನ್ನು ತಪ್ಪುದಾರಿಗೆ ಎಳೆಯುವ ಸಂವಿಧಾನ ವಿರೋಧಿ ಹೆಜ್ಜೆ ಇಡುವುದನ್ನು ಯಾವತ್ತು ನಿಲ್ಲಿಸುತ್ತಾರೋ, ಅವತ್ತು ಈ ಸಂವಿಧಾನ ಹಿಡಿದುಕೊಂಡು ಓಡಾಡುವವರ ಮಾತಿಗೆ ಮಹತ್ವ ಬರುತ್ತದೆ. ಇಲ್ಲದಿದ್ದರೆ ಇವರೂ ಕೂಡ ಸಂವಿಧಾನ ವಿರೋಧಿಗಳಾಗುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Published On - 6:39 pm, Thu, 25 July 24

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!