Tejas LCA: ಭಾರತದ ರಕ್ಷಣಾ ಉದ್ಯಮದಲ್ಲಿ ಹೊಸಶಕೆ: ಅಮೆರಿಕ, ಮಲೇಷ್ಯಾಗಳಿಂದ ಎಲ್​ಸಿಎ ತೇಜಸ್ ಖರೀದಿಗೆ ಅಸಕ್ತಿ

Light Combat Aircraft: ತೇಜಸ್ ಹಗುರ ಯುದ್ಧ ವಿಮಾನ ಖರೀದಿಗೆ ಮಲೇಷ್ಯಾ, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳು ಆಸಕ್ತಿ ತೋರಿವೆ.

Tejas LCA: ಭಾರತದ ರಕ್ಷಣಾ ಉದ್ಯಮದಲ್ಲಿ ಹೊಸಶಕೆ: ಅಮೆರಿಕ, ಮಲೇಷ್ಯಾಗಳಿಂದ ಎಲ್​ಸಿಎ ತೇಜಸ್ ಖರೀದಿಗೆ ಅಸಕ್ತಿ
ವಿಮಾನವಾಹಕ ಯುದ್ಧನೌಕೆ ಐಎನ್​ಎಸ್ ವಿಕ್ರಮಾದಿತ್ಯದಿಂದ ಹಾರುತ್ತಿರುವ ತೇಜಸ್ ಲಘು ಯುದ್ಧವಿಮಾನ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 23, 2021 | 10:43 PM

ದೇಶೀಯವಾಗಿ ಅಭಿವೃದ್ಧಿಪಡಿಸಿದ ಲಘು ಯುದ್ಧ ವಿಮಾನ (Light Combat Aircraft – LCA) ತೇಜಸ್ ಹಲವು ದಶಕಗಳ ವಿಳಂಬದ ಹೊರತಾಗಿಯೂ ರಫ್ತು ಮಾಡಲು ಸಾಧ್ಯವಿರುವ ಸಾಮರ್ಥ್ಯದ ಯುದ್ಧವಿಮಾನವಾಗಿ ಹೊರ ಹೊಮ್ಮಿರುವುದು ಭಾರತೀಯ ವಾಯುಪಡೆಗೆ ಮಾತ್ರವಲ್ಲ ಒಟ್ಟಾರೆಯಾಗಿ ಭಾರತದ ರಕ್ಷಣಾ ವಲಯಕ್ಕೂ ಗೇಮ್ ಚೇಂಜರ್ ಎನಿಸಿದೆ. ಮಲೇಷ್ಯಾ, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳು ತೇಜಸ್ ಖರೀದಿಗೆ ಆಸಕ್ತಿ ತೋರಿವೆ ಎನ್ನುತ್ತಾರೆ ವೈಮಾನಿಕ ಕ್ಷೇತ್ರದ ವಿದ್ಯಮಾನಗಳನ್ನು ಹತ್ತಿರದಿಂದ ಗಮನಿಸುವ ಗಿರೀಶ್ ಲಿಂಗಣ್ಣ.

ಜೂನ್ 2020ರಲ್ಲಿ ರಾಯಲ್ ಮಲೇಷಿಯಾದ ವಾಯುಪಡೆಯು ಫೋರ್ಸ್ ಫೈಟರ್ ಲೀಡ್ ಟ್ರೈನರ್, ಲೈಟ್ ಕಾಂಬ್ಯಾಟ್ ಏರ್​ಕ್ರಾಫ್ಟ್ (FLIT- LCA) ಪಡೆಯಲು ಪ್ರಯತ್ನಿಸಿತು. ಇದನ್ನು ತರಬೇತಿಗೆ ಪ್ರಸ್ತುತ ಬಳಸುತ್ತಿರುವ ವಿಮಾನಗಳಾದ ಬಿಎಇ ಹಾಕ್ 108 ಮತ್ತು ಎಂಬಿ 339 ಸಿಎಂ ತರಬೇತುದಾರರನ್ನು ಎಲ್​ಸಿಎ ವಿಮಾನಗಳೊಂದಿಗೆ ಬದಲಿಸಲು ಪ್ರಯತ್ನ ನಡೆಸಿತು. ವಿಮಾನ ಪೂರೈಕೆಗಾಗಿ ಅರ್ಜೆಂಟೀನಾದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ವ್ಯವಹಾರದಲ್ಲಿ ತಾಂತ್ರಿಕ ಅಡಚಣೆಗಳು ಉಂಟಾದ ಕಾರಣ ಸ್ಥಗಿತಗೊಳಿಸಲಾಗಿದೆ. ಭಾರತೀಯ ಸಾರ್ವಜನಿಕ ವಲಯದ ಕಂಪನಿ ಎಚ್​ಎಎಲ್ ತಯಾರಿಸುತ್ತಿರುವ ಎಲ್​ಸಿಎ ತೇಜಸ್​ ವಿಮಾನಕ್ಕೆ ಹಲವೆಡೆಗಳಿಂದ ಬೇಡಿಕೆ ಬರುತ್ತಿದೆ. ಅಮೆರಿಕ ನೌಕಾಪಡೆಯು ಬೋಯಿಂಗ್ ಟಿ-45 ಗೋಶಾಕ್ಸ್​ನ ಬದಲಿಗೆ ಹೊಸ ತರಬೇತುದಾರ ವಿಮಾನ ಖರೀದಿಸಲು ಮುಂದಾಗಿದೆ. ಈ ಕೋರಿಕೆಗೆ ಎಚ್​ಎಎಲ್​ ಪ್ರತಿಕ್ರಿಯಿಸಿದೆ ಎನ್ನಲಾಗಿದೆ.

ಟಿ-45 ಬ್ರಿಟಿಷ್ ಹಾಕ್ ಟ್ರೈನರ್ ಅನ್ನು ವಿಶೇಷವಾಗಿ ವಿಮಾನವಾಹಕ ನೌಕೆಗಳಲ್ಲಿ ಕಾರ್ಯನಿರ್ವಹಲೆಂದೇ ಅಭಿವೃದ್ಧಿಪಡಿಸಲಾಗಿದೆ. ಇವುಗಳ ಜೊತೆಗೆ ಇತ್ತೀಚೆಗೆ ರಾಯಲ್ ಆಸ್ಟ್ರೇಲಿಯನ್ ಏರ್​ಫೋರ್ಸ್ (ಆರ್​ಎಎಫ್) ಸಹ ತನ್ನ ಟ್ರೇನರ್ ವಿಮಾನಗಳನ್ನು ಬದಲಿಸಲು ಮುಂದಾಗಿದೆ. ಈ ಸ್ಥಾನಕ್ಕೆ ತೇಜಸ್ ಹಗರು ಯುದ್ಧ ವಿಮಾನಗಳನ್ನು ಪಡೆದುಕೊಳ್ಳಲು ಬಯಸುತ್ತಿದೆ.

ಎಲ್​ಸಿಎಯನ್ನು 1980ರಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಭಾರತೀಯ ವಾಯುಪಡೆಯ ಮಿಗ್-21 ಯುದ್ಧವಿಮಾನಗಳ ಸ್ಥಾನಕ್ಕೆ ಎಲ್​ಸಿಎ ತರುವ ಯೋಜನೆಯಿತ್ತು. 2003ರವರೆಗೆ ಈ ಕೆಲಸ ಸಾಗುತ್ತಲೇ ಇತ್ತು. ‘ಫ್ಲೈಯಿಂಗ್ ಡ್ಯಾಗರ್ಸ್’ ಹೆಸರಿನ ಮೊದಲ ಸ್ಕ್ವಾಡ್ರನ್ ರೂಪುಗೊಂಡು, ಕಾರ್ಯಾಚರಣೆಗೆ ಅನುಮತಿ ಪಡೆದುಕೊಳ್ಳಲು 13 ವರ್ಷ ಕಾಲ ಕಾಯಬೇಕಾಯಿತು.

ದೀರ್ಘಕಾಲದವರೆಗೆ ರಕ್ಷಣಾ ಉತ್ಪನ್ನಗಳ ಆಮದು ಮೇಲೆ ಅವಲಂಬಿತವಾಗಿದ್ದ ಭಾರತವು ಇದೀಗ ತಾನೇ ಸ್ವತಃ ರಫ್ತುದಾರನಾಗಿ ಹೊರಹೊಮ್ಮುತ್ತಿದೆ. ಅದರ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಇದು ಸ್ಪಷ್ಟ ಮತ್ತು ಶ್ರೇಷ್ಠ ಉದಾಹರಣೆಯಾಗಿದೆ. ಭಾರತವು ಮುಂದಿನ ದಿನಗಳಲ್ಲಿ ರಕ್ಷಣಾ ಉತ್ಪನ್ನಗಳನ್ನು ತಯಾರಿಸುವ ಪ್ರಮುಖ ದೇಶವಾಗಲಿದೆ. ದೇಶಿ ನಿರ್ಮಿತ ಲಘು ಯುದ್ಧ ವಿಮಾನಕ್ಕೆ ಸ್ಪಷ್ಟ ರೂಪ ಸಿಕ್ಕ ನಂತರವೇ ಇದೆಲ್ಲವೂ ಸಾಧ್ಯವಾಗಿದೆ.

ಭಾರತ ಸರ್ಕಾರದ ಆತ್ಮನಿರ್ಭರ ಭಾರತ್ ಮತ್ತು ಮೇಕ್ ಇನ್ ಇಂಡಿಯಾದ ಉಪಕ್ರಮಗಳು ರಕ್ಷಣಾ ವಲಯಕ್ಕೆ ಪ್ರಮುಖ ಉತ್ತೇಜನವನ್ನು ನೀಡಿವೆ. ಅಲ್ಲಿ ಹಲವಾರು ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳು ಭಾರತದ ರಕ್ಷಣಾ ವಿಮಾನಯಾನ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಕೈಜೋಡಿಸಿವೆ.

2015ರಲ್ಲಿ ಭಾರತೀಯ ವಾಯುಪಡೆಯು 40 ತೇಜಸ್ ಮಾರ್ಕ್ 1 ಮತ್ತು 83 ತೇಜಸ್ ಮಾರ್ಕ್ 1ಎ ಶ್ರೇಣಿಯ ಯುದ್ಧ ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿತು. ಕೇಂದ್ರ ಸಚಿವ ಸಂಪುಟವು 2020ರ ಅಂತ್ಯದ ವೇಳೆಗೆ 73 ತೇಜಸ್ 1 ಎ ಮತ್ತು 10 ತರಬೇತಿ ವಿಮಾನಗಳನ್ನು 45,696 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಖರೀದಿ ಮಾಡಲು ಅನುಮೋದನೆ ನೀಡಿತು. ಈ ಮಹತ್ವದ ನಿರ್ಧಾರದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗುವ ನಿಟ್ಟಿನಲ್ಲಿ ಈ ಖರೀದಿ ಪ್ರಕ್ರಿಯೆಯು ಒಂದು ಗೇಮ್ ಚೇಂಜರ್ ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದರು. ಮುಂಬರುವ ದಿನಗಳಲ್ಲಿ ವಾಯುಪಡೆಯ ಯುದ್ಧವಿಮಾನ ವಿಭಾಗದಲ್ಲಿ ತೇಜಸ್ ಬೆನ್ನೆಲುಬಾಗಲಿದೆ ಎಂದು ಅವರು ಹೇಳಿದ್ದರು.

ತೇಜಸ್ ಎಂಕೆ 1 ಶೇ 58ರಷ್ಟು ದೇಶೀಯ ಉತ್ಪನ್ನಗಳನ್ನು ಹೊಂದಿತ್ತು. ನಂತರದ ದಿನಗಳಲ್ಲಿ ಈ ಪ್ರಮಾಣವು ಶೇ 65ರಷ್ಟಕ್ಕೆ ಹೆಚ್ಚಿಸಲಾಗಿದೆ. ಇದರಲ್ಲಿ ಇಎಲ್ಎಲ್ 8222 ಸೆಲ್ಫ್ ಪ್ರೊಟೆಕ್ಷನ್ ಜಾಮರ್ (ಎಸ್​ಪಿಜೆ) ಪಾಡ್ ಅನ್ನು ಬಾಹ್ಯ ಹಾರ್ಡ್ ಪಾಯಿಂಟ್​ನಲ್ಲಿ ಅಳವಡಿಸಲಾಗಿದೆ. ಅತ್ಯಾಧುನಿಕವಾದ ಶಸ್ತ್ರಾಸ್ತ್ರಗಳಿಂದ ಸುಸಜ್ಜಿತಗೊಳಿಸಲಾಗಿದೆ. ರಷ್ಯಾದ ಆರ್-73 ಕ್ಷಿಪಣಿಯನ್ನು ಎಂಬಿಡಿಎ ಎಎಸ್ಆರ್​ಎಎಎಂ ಕ್ಷಿಪಣಿಯೊಂದಿಗೆ ಹಾಗೂ ಅಸ್ಟ್ರಾ ಎಂಕೆ1ಬಿವಿಆರ್ ಕ್ಷಿಪಣಿಯೊಂದಿಗೆ ಬದಲಾಯಿಸಲಾಗಿದೆ. ಇದು 100 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿರುವ ಇಸ್ರೇಲಿ ಐ-ಡರ್ಬಿ-ಇಆರ್​ಗೆ ಸಹ ಬಳಸಬಹುದಾಗಿದೆ.

ತೇಜಸ್ ಯುದ್ಧ ವಿಮಾನವು ಎಂಕೆ1ರ ಹೊರತಾಗಿ ಇತರ ಶ್ರೇಣಿಗಳಾದ ಎಂಕೆ1ಎ, ಎಂಕೆ1 ನೌಕಾಪಡೆ ಆವೃತ್ತಿಯನ್ನೂ ಹೊಂದಿದೆ. ಎಂಕೆ2 ಮಧ್ಯಮ ತೂಕದ ಫೈಟರ್ ಉತ್ಪಾದನಾ ಹಂತದಲ್ಲಿದೆ. ಸುಧಾರಿತ ಜೆಟ್ ವಿಮಾನಗಳನ್ನು ಚಲಾಯಿಸುವಲ್ಲಿ ಪದವಿ ಪಡೆಯಲಿರುವ ಪೈಲಟ್​ಗಳಿಗಾಗಿ ಎಚ್ಎಎಲ್ ಈ ವಿಮಾನವನ್ನು ಅಭಿವೃದ್ಧಿಪಡಿಸುತ್ತಿದೆ. ಇದನ್ನು ಮೊದಲು ಸೂಪರ್ ಸಾನಿಕ್ ಓಮ್ನಿ ರೋಲ್ ಟ್ರೈನರ್ (ಸ್ಪೋರ್ಟ್) ತೇಜಸ್ ಲಿಫ್ಟ್ (ಫೈಟರ್ ಟ್ರೈನರ್ ಲೀಡ್) ಎಂದು ಕರೆಯಲಾಗುತ್ತಿತ್ತು. ಎಜೆಟಿ ಹಾಕ್​ನಲ್ಲಿ ತರಬೇತಿ ಪಡೆದ ಪೈಲಟ್​ಗಳಿಗೆ ತರಬೇತಿ ನೀಡಲು ಬಳಸಲಾಗುತ್ತದೆ. ಎಲ್​ಸಿಎ ಲಿಫ್ಟ್​ನ ಅನುಕೂಲವೆಂದರೆ ಅದು ಏವಿಯಾನಿಕ್ಸ್ ಸೂಟ್ ಮತ್ತು ಎಸ್ ಯು-30 ಎಂಕೆಐ, ರಾಫೆಲ್, ಮಿಗ್-29, ಮಿರಾಜ್ 2000 ಹಾಗೂ ತೇಜಸ್​ನಂತಹ ಇತರೆ ಎಲ್ಲಾ ಫೈಟರ್ ಗಳ ವ್ಯವಸ್ಥೆಗಳನ್ನು ಪುನರಾವರ್ತಿಸಲು ಸಾಧ್ಯವಾಗುತ್ತದೆ.

ಎಲ್​ಸಿಎ ಲಿಫ್ಟ್​ನಲ್ಲಿ ತರಬೇತಿ ನೀಡುವ ಪೈಲಟ್​ಗಳು ನಿಜವಾದ ಫೈಟರ್ ಗಳೊಂದಿಗೆ ತರಬೇತಿ ನೀಡುವ ಮುನ್ನ ಉಪಕರಣಗಳು, ಶಸ್ತ್ರಾಸ್ತ್ರಗಳು ಹಾಗೂ ಸಂವೇದಕಗಳ ಸಂಪೂರ್ಣ ಶ್ರೇಣಿಯ ಪರಿಚಯ ಪಡೆದುಕೊಳ್ಳುತ್ತಾರೆ. ತೇಜಸ್ ಅನ್ನು ವಾಯುಪಡೆಯು ತನ್ನ ರಕ್ಷಾ ಕವಚಕ್ಕೆ ಸೇರ್ಪಡೆ ಮಾಡಿಕೊಂಡ ನಂತರ, ಅದು ವಿಶ್ವದ ಗಮನ ಸೆಳೆದಿದೆ. ಅನೇಕ ದೇಶಗಳು ಇದನ್ನು ಖರೀದಿಸಲು ಯೋಚಿಸುತ್ತಿವೆ. ರಾಯಲ್ ಮಲೇಶಿಯನ್ ಏರ್​ಫೋರ್ಸ್ (ಆರ್​ಎಎಫ್) ಇತ್ತೀಚೆಗೆ ಟ್ರೈನರ್-ಲೈಟ್ ಕಾಂಬ್ಯಾಟ್ ಏರ್​ಕ್ರಾಫ್ಟ್​ನಲ್ಲಿ 18 ಫೈಟರ್ ಲೀಡ್ ಪೂರೈಕೆಗೆ ಟೆಂಡರ್ ಪ್ರಕಟಿಸಿದ್ದು, ಇದರಲ್ಲಿ ಭಾಗವಹಿಸಲು ಕಡೆಯ ದಿನಾಂಕ ಸೆಪ್ಟಂಬರ್ 2022 ಆಗಿದೆ.

ಅಮೆರಿಕ ನೌಕಾಪಡೆಯು ಎಚ್ಎಎಲ್​ನ ಹಗುರ ಯುದ್ಧ ವಿಮಾನದ ನೌಕಾ ರೂಪಾಂತರಕ್ಕೆ ಆಸಕ್ತಿ ತೋರಿದೆ. ಅಮೆರಿಕ ನೌಕಾಪಡೆಗೆ ಟ್ರೈನರ್ ವಿಮಾನದ ಅಗತ್ಯವಿದ್ದು, ಇದು ಡೆಕ್ ಅನ್ನು ಸಮೀಪಿಸುವ ಸಾಮರ್ಥ್ಯವನ್ನು ಹೊಂದಿದೆ. ಎಲ್​ಸಿಎ (ನೌಕಾಪಡೆ) ವಿಮಾನವಾಹಕ ಯುದ್ಧನೌಕೆಯ ಮೇಲೆ ಲ್ಯಾಂಡಿಂಗ್ ಸಾಮರ್ಥ್ಯವನ್ನೂ ಹೊಂದಿದೆ. ಜನವರಿ 11, 2020 ರಂದು ಎಲ್​ಸಿಎ ಯಶಸ್ವಿಯಾಗಿ ಭಾರತದ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಬಂದಿಳಿದಿದೆ.

ಎಚ್ಎಎಲ್ ಪ್ರಸ್ತುತ ಹಾಗೂ ಭವಿಷ್ಯದ ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆಯಿಂದ ಕಾರ್ಯನಿರ್ವಹಣೆ ಮಾಡಲು ಭಾರತದ ಟ್ವಿನ್ ಇಂಜಿನ್ ಡೆಕ್ ಬೇಸ್ಡ್ ಫೈಟರ್​ನ (ಟಿಇಡಿಬಿಎಫ್) ಹೊಸ ವಿನ್ಯಾಸವನ್ನು ಬಿಡುಗಡೆ ಮಾಡಿದೆ. ಟಿಇಡಿಬಿಎಫ್ ಮಧ್ಯಮ ತೂಕದ 4.5 ತಲೆಮಾರಿನ ಬಹುಮುಖಿ ವಿಮಾನವಾಗಿದೆ. ಇದನ್ನು ಭಾರತೀಯ ಮಲ್ಟಿ ರೋಲ್ ಕ್ಯಾರಿಯರ್ ಬೋರ್ನ್ ಫೈಟರ್ (ಎಂಆರ್​ಸಿಬಿಎಫ್) ಕಾರ್ಯಕ್ರಮದಡಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗುತ್ತಿದೆ.

ಭಾರತೀಯ ನೌಕಾಪಡೆಯ ಮಿಗ್-29ಕೆ ಫೈಟರ್​ಗಳ ಪ್ರಸ್ತುತ ಫ್ಲೀಟ್​ಗೆ ಪೂರಕವಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ಬದಲಿಸುತ್ತದೆ. ಇದು 26 ಟನ್ ಗಳ ಗರಿಷ್ಠ ಟೇಕ್-ಆಫ್ ತೂಕ (ಎಂಟಿಒಡಬ್ಲ್ಯೂ) ಮತ್ತು ಶಾರ್ಟ್ ಟೇಕ್-ಆಫ್ ಆಗಿರುತ್ತದೆ. ಆದರೆ, ಅರೆಸ್ಟ್ ರಿಕವರಿ (ಸ್ಟೋಬಾರ್) ವಿಮಾನವಾಹಕ ನೌಕೆಗಳಿಂದ ಟೇಕ್-ಆಫ್ ಮಾಡಲು ವಿನ್ಯಾಸಗೊಳಿಸಿರುವ 11ರಿಂದ 12 ಟನ್​ಗಳಷ್ಟು ಟ್ವಿನ್-ಎಂಜಿನ್ ಫೈಟರ್ ಆಗಿದೆ. ಐಎನ್ಎಸ್ ವಿಕ್ರಮಾದಿತ್ಯ ಮತ್ತು ಐಎನ್ಎಸ್ ವಿಕ್ರಾಂತ್ (ಐಎಸಿ 1) ಯುದ್ಧನೌಕೆಗಳ ಮೇಲೆ ಈ ವಿಮಾನಗಳ ನೌಕಾಪಡೆ ಆವೃತ್ತಿಯ ಮೊದಲ ಹಾರಾಟವನ್ನು 2026ಕ್ಕೆ ನಿರೀಕ್ಷಿಸಲಾಗಿದೆ.

ಟಿಇಡಿಬಿಎಫ್ ದೇಶೀಯ ಸೆನ್ಸಾರ್ ಗಳು ಮತ್ತು ಏವಿಯಾನಿಕ್ಸ್ ಅನ್ನು ಈಗಾಗಲೇ ಅಸ್ತಿತ್ವದಲ್ಲಿರುವ ತೇಜಸ್ ಕಾರ್ಯಕ್ರಮದಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ತೇಜಸ್ ಎಂಕೆ2 ಮತ್ತು ಎಎಂಸಿಎ ಕಾರ್ಯಕ್ರಮಗಳ ಅಭಿವೃದ್ಧಿಯ ಮುಂದುವರಿದ ಹಂತದಲ್ಲಿವೆ. ಇದು ಪರೀಕ್ಷೆಯ ಅಂತಿಮ ಹಂತದಲ್ಲಿರುವ ವಾಯು ಮತ್ತು ನೆಲ/ಸಮುದ್ರ ಮೋಡ್ ಸ್ಕ್ಯಾನಿಂಗ್ ಸಾಮರ್ಥ್ಯಗಳೊಂದಿಗೆ ಉತ್ತಮ್ ಎಇಎಸ್ಎ ರಾಡಾರ್ ಅನ್ನು ಹೊಂದಿದೆ.

ಲೇಖಕ ಗಿರೀಶ್ ಲಿಂಗಣ್ಣ, ಎಡಿಡಿ ಎಂಜಿನಿಯರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್​ನ ನಿರ್ದೇಶಕರು

(New Era in Indian Defense Sector Many Countries Showing Interest to Buy LCA Tejas)

ಇದನ್ನೂ ಓದಿ: ರಕ್ಷಣಾ ವಿದ್ಯಮಾನ: ಹಗುರ ಯುದ್ಧವಿಮಾನ ತೇಜಸ್​ಗೆ ಶಕ್ತಿ ತುಂಬುವ ಕಾವೇರಿ ಸುಧಾರಣೆ ಈ ಕ್ಷಣದ ತುರ್ತು

ಇದನ್ನೂ ಓದಿ: ಪರೀಕ್ಷಾರ್ಥ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಯುದ್ಧನೌಕೆ ವಿಕ್ರಾಂತ್​; ದೇಶಕ್ಕಿದು ಐತಿಹಾಸಿಕ ದಿನ

Published On - 10:42 pm, Thu, 23 September 21

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್