TV9 Kannada Survey: ಭಗವದ್ಗೀತೆ ಪಠ್ಯಕ್ರಮದಲ್ಲಿ ಅಗತ್ಯ ಇದೆ ? ಇಲ್ಲಿದೆ ಜನಾಭಿಪ್ರಾಯ

TV9 Kannada Survey: ಟಿವಿ9 ಕನ್ನಡ ಡಿಜಿಟಲ್ ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಅಥವಾ ಬೇಡ? ಎಂಬ ಪ್ರಶ್ನೆಗೆ ಸೋಶಿಯಲ್ ಮಿಡಿಯಾದಲ್ಲಿ ಸಖತ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಈ ಪ್ರಶ್ನೆಯನ್ನು ಆಧಾರಿಸಿ ಫೇಸ್ ಬುಕ್, ಯೂಟ್ಯಬೂ, ಇನ್ಸ್ಟಾಗ್ರಾಮ್, ಟ್ವಿಟರ್, ಕೂನಲ್ಲಿ ಸಮೀಕ್ಷೆಯನ್ನು ನಡೆಸಿತ್ತು, ಈ ಸಮೀಕ್ಷೆಯಲ್ಲಿ ವಿಭಿನ್ನ ರೀತಿಯ ಪ್ರತಿಕ್ರಿಯೆ ಬಂದಿದೆ.

TV9 Kannada Survey: ಭಗವದ್ಗೀತೆ ಪಠ್ಯಕ್ರಮದಲ್ಲಿ ಅಗತ್ಯ ಇದೆ ? ಇಲ್ಲಿದೆ ಜನಾಭಿಪ್ರಾಯ
ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ಸಮೀಕ್ಷೆ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 22, 2022 | 7:02 PM

ರಾಜ್ಯದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಒಂದಲ್ಲ ಒಂದು ಸುದ್ದಿಗಳು ಭಾರೀ ಸದ್ದು ಮಾಡುತ್ತಿದೆ. ಇತ್ತೀಚೆಗೆ ಶಿಕ್ಷಣ ಕ್ಷೇತ್ರದಲ್ಲಿ ಹಿಜಾಬ್ ವಿಚಾರವು ಭಾರೀ ಸದ್ದು ಮಾಡಿತ್ತು. ಕೇಸರಿ Vs ಹಿಜಾಬ್‌ ಎಂಬ ಚರ್ಚೆಗಳು ನಡೆದವು, ಸರ್ಕಾರದ ವಲಯದಲ್ಲೂ ಚರ್ಚೆಗೆ ಸಾಕ್ಷಿಯಾಗಿತ್ತು. ಕೊನೆಗೆ ಹೈಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿಯು ವಾದ -ವಿವಾದಗಳು ನಡೆದು ಹಿಜಾಬ್ ಶಾಲಾ-ಕಾಲೇಜುಗಳಲ್ಲಿ ಹಾಕುವಂತಿಲ್ಲ ಎಂದು ತೀರ್ಪುನ್ನು ನೀಡಿತ್ತು. ಅದರ ಚರ್ಚೆಗಳು  ಅಲ್ಪವಾಗಿ ಕಡಿಮೆಯಾದರೂ, ಇದೀಗ ಹೊಸ ವಿಚಾರವೊಂದು ಚರ್ಚೆಯಲ್ಲಿದೆ, ಹೌದು ರಾಜ್ಯದಲ್ಲಿ ಶೈಕ್ಷಣಿಕ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಭೋದಿಸಬೇಕು ಎಂಬ ಚರ್ಚೆಗಳು ನಡೆಯುತ್ತಿದೆ. ಆದರೆ ಇದೀಗ ಇದಕ್ಕೂ ಪರ – ವಿರೋಧಗಳು ಚರ್ಚೆಯಾಗುತ್ತಿದೆ, ಗುಜರಾತ್ ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಭಗವದ್ಗೀತೆಯನ್ನು ಭೋಧಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿದೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲೂ ಭಗವದ್ಗೀತೆಯನ್ನು ಶಾಲಾ – ಕಾಲೇಜುಗಳಲ್ಲಿ ಭೋದಿಸಬೇಕು ಎಂಬ ಚಿಂತನೆಯನ್ನು ಸರ್ಕಾರ ನಡೆಸುತ್ತಿದೆ. ಈ ವಿಚಾರವನ್ನು ಇಟ್ಟುಕೊಂಡು ಟಿವಿ9 ಕನ್ನಡ ಡಿಜಿಟಲ್ ಸಾಮಾಜಿಕ ಜಾಲತಾಣದಲ್ಲಿ ಒಂದು ಸಮೀಕ್ಷೆಯನ್ನು ಮಾಡಿತ್ತು. ಪಠ್ಯಕ್ರಮದಲ್ಲಿ ಭಗವದ್ಗೀತೆ ಬೇಕು ಅಥವಾ ಬೇಡ ಎಂದು, ನಾವು ಕೇಳಿದ ಈ ಪ್ರಶ್ನೆಗೆ ಸಾವಿರಾರು ಜನ ಕಮೆಂಟ್ ಮಾಡಿದ್ದಾರೆ. ಕನ್ನಡ ಮಾಧ್ಯಮ ಲೋಕದಲ್ಲಿ ಶೈಕ್ಷಣಿಕವಾಗಿ ಈ ರೀತಿಯ ಸಮೀಕ್ಷೆ ಇದೇ ಮೊದಲ ಬಾರಿ ಎಂದೆನ್ನಿಸುತ್ತದೆ ಇಷ್ಟು ದೊಡ್ಡದಾಗಿ ಜನರು ಈ ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿದ್ದು.

ಟಿವಿ9 ಕನ್ನಡ ಡಿಜಿಟಲ್ ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಅಥವಾ ಬೇಡ? ಎಂಬ ಪ್ರಶ್ನೆಗೆ ಸೋಶಿಯಲ್ ಮಿಡಿಯಾದಲ್ಲಿ ಜನರು ಸಖತ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಈ ಪ್ರಶ್ನೆಯನ್ನು ಆಧಾರಿಸಿ ಫೇಸ್ ಬುಕ್, ಯೂಟ್ಯಬೂ, ಇನ್ಸ್ಟಾಗ್ರಾಮ್, ಟ್ವಿಟರ್, ಕೂನಲ್ಲಿ ಸಮೀಕ್ಷೆಯನ್ನು ನಡೆಸಿತ್ತು, ಈ ಸಮೀಕ್ಷೆಯಲ್ಲಿ ವಿಭಿನ್ನ ರೀತಿಯ ಪ್ರತಿಕ್ರಿಯೆ ಬಂದಿದೆ. ಒಂದಿಷ್ಟು ಜನ ಭಗವದ್ಗೀತೆ ಎನ್ನುವುದು ಭಾರತದ ಸಂಸ್ಕೃತಿ ಅದು ಬೇಕೇ ಬೇಕು ಎಂದರೆ, ಇನ್ನೂ ಕೆಲವರು ಅದರ ವಿರೋಧವಾಗಿ ಹೇಳಿದ್ದಾರೆ. ಧರ್ಮದ ವಿಚಾರದಲ್ಲಿ ಶಿಕ್ಷಣವನ್ನು ಹೊಡೆಯಬೇಡಿ ಎಂದು, ಒಂದಿಷ್ಟು ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಎಂದರೆ ಇನ್ನೂ ಕೆಲವರು ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಡ ಎಂದು ವೋಟ್ ಮಾಡಿದ್ದಾರೆ.

ಸೋಶಿಯಲ್ ಮಿಡಿಯಾದಲ್ಲಿ ಮಹಾಸಮೀಕ್ಷೆ 

ಸಾಮಾಜಿಕ ಜಾಲತಾಣದಲ್ಲಿ ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಅಥವಾ ಬೇಡ? ಎಂದು ಟಿವಿ9 ಡಿಜಿಟಲ್ ಮಾಡಿದ ಸಮೀಕ್ಷೆಗೆ ಸಾವಿರರೂ ಜನ ಕರ್ನಾಟಕದ ಬೇರೆ ಬೇರೆ ಕಡೆಯಿಂದ ಕಮೆಂಟ್ ಮತ್ತು ವೋಟ್ ಮಾಡಿದ್ದಾರೆ. ಇದರ ಜೊತೆಗೆ ಭಗವದ್ಗೀತೆ ಪಠ್ಯಕ್ರಮದಲ್ಲಿ ಯಾಕೆ ಬೇಕು ಮತ್ತು ಯಾಕೆ ಬೇಡ ಎನ್ನುವುದನ್ನು  ತಮ್ಮ ಅಭಿಪ್ರಾಯದ ಮೂಲಕ ವ್ಯಕ್ತಪಡಿಸಿದ್ದಾರೆ. ಇದರ ಆಧಾರ ಮೇಲೆ ಟಿವಿ9 ಕನ್ನಡ ಡಿಜಿಟಲ್ ಒಂದು ವರದಿಯನ್ನು ತಯಾರು ಮಾಡಿದೆ. ಅದು ಇಲ್ಲಿದೆ

ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಅಥವಾ ಬೇಡ? ಫೇಸ್ ಬುಕ್ ಸಮೀಕ್ಷೆ 

ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಫೇಸ್ ಬುಕ್ ನಲ್ಲಿ ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಅಥವಾ ಬೇಡ? ಎಂದು ಕೇಳಿದಾಗ ಸಾವಿರಾರೂ ಫೇಸ್ ಬುಕ್ ಬಳಕೆದಾರರೂ ಅಲ್ಲಿ ಕಮೆಂಟ್ ಮಾಡಿದ್ದಾರೆ, ಬೇಕು – ಬೇಡ ಎಂದು ವೋಟ್ ಕೂಡ ಮಾಡಿದ್ದಾರೆ.  ಈ ಮೂಲಕ ಫೇಸ್ ಬುಕ್ ನಲ್ಲಿ ಸಾವಿರಾರೂ ಮಂದಿ ಟಿವಿ9 ಕನ್ನಡ ಡಿಜಿಟಲ್ ಮಾಡಿದ ಸಮೀಕ್ಷೆಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಟಿವಿ9 ಕನ್ನಡ ಡಿಜಿಟಲ್ ಮಾಡಿದ ಸಮೀಕ್ಷೆಗೆ 8ಸಾವಿರ ಜನ ಮೆಚ್ಚುಗೆಯನ್ನು ವ್ಯಕ್ತಪಡಿದ್ದಾರೆ. 6,600 ಜನ  ಟಿವಿ9 ಕನ್ನಡ ಡಿಜಿಟಲ್ ಮಾಡಿದ ಸಮೀಕ್ಷೆಗೆ ಕಮೆಂಟ್ ಮಾಡಿದ್ದಾರೆ. 6,600 ಜನರಲ್ಲಿ 5 ಸಾವಿರಕ್ಕೂ ಹೆಚ್ಚಿನ ಜನ ಬೇಕು ಎಂದು ಹೇಳಿದ್ದಾರೆ . ಒಂದಿಷ್ಟು ಜನ ಶಿಕ್ಷಣದಲ್ಲಿ ಧರ್ಮ ಗ್ರಂಥಗಳು ಬೇಡ ಎಂದಿದ್ದಾರೆ.

  1. ನಾನು ಒಬ್ಬ ಮುಸ್ಲಿಮ್ ಆಗಿ ಹೇಳ್ತಾಯಿದೀನಿ ಬೇಕು, ಭಗವದ್ಗೀತೆ ದೇವರ ಪುಸ್ತಕ, ಅದು ಯಾವತ್ತು ಮನುಷತ್ವ ದ ಪಾಠ ಕಲಿಸತ್ತೆ ಜಾತಿ ಧರ್ಮದ ಪಾಠ ಕಲಿಸಲ್ಲ, ದ್ವೇಷದ ಪಾಠ ಕಲಿಸಲ್ಲ,ಮುಂದಿನ ಮಕ್ಕಳಿಗೆ ಕೋಮು ಕಲಭೆ ಮಾಡದಂತೆ ಎಲ್ಲ ಧರ್ಮದವರಿಗೂ ಬೆಲೆ ಕೊಡುವಂತಹ ಮನುಷ್ಯವತ್ತ ಪಾಠ ಸಿಗುತ್ತೆ,, ರಾಮ ಕೆಟ್ಟವನಲ್ಲ, ಜೀಸಸ್ ಕೆಟ್ಟವನಲ್ಲ, ಅಲ್ಲಾಹ್ ಕೆಟ್ಟವನಲ್ಲ, ಅವರಿಗೆ ಪೂಜಿಸುವ ಮನುಷ್ಯ ಜನ್ಮ ಕೆಟ್ಟದು, ಕುರಾನ್ ಬೈಬಾಲ್ ಭಗವತ್ ಗೀತಾ, ಯಾವುದು ಕೆಟ್ಟದಲ್ಲ ಅದನ್ನ ಓದದೆ ಇರುವವನು ಕೆಟ್ಟವನು,,ಮೊದಲು ಮನುಷ್ಯರಾಗಿ. –ಬಾಜಿಗರ್ ಬಾಜಿ
  2. ಬೇಕು. ಯಾಕೆಂದರೆ ಭಗವದ್ಗೀತೆ ಯಾವುದೇ ಧರ್ಮ,ಜಾತಿಗೆ ಸಂಬಂಧಿಸಿದ್ದು ಎಂದು ತಿಳಿಯುವುದು ಸರಿಯಲ್ಲ.ಇದು ಮಾನವ ಜನ್ಮದಲ್ಲಿ ಜನಿಸಿದ ಜಗತ್ತಿನ ಎಲ್ಲ ಮನುಷ್ಯ ರಿಗೂ ಅತೀ ಅಗತ್ಯ.. ಮಾನವನಾಗಿ ಹುಟ್ಟಿದ ಮೇಲೆ ಹೇಗಿರಬೇಕು ಎಂಬುದನ್ನು ತಿಳಿಸಿ ಹೇಳಿದ ಈ ಭಗವತ್ ಗೀತೆ ಎಲ್ಲಾ ಧರ್ಮದ ಮಕ್ಕಳು ಕಲಿಯುವ ಶಾಲಾ ಕಾಲೇಜುಗಳಲ್ಲಿ ಅತೀ ಅವಶ್ಯಕ ಎಂಬುದು ನನ್ನ ಅಭಿಪ್ರಾಯ- ಭಾರತಿ ಮೈಯಾ
  3. ನ್ಯಾಯಾಲಯದಲ್ಲಿ ಅದೇ ಭಗವದ್ಗೀತೆ ಮುಟ್ಟಿ ಸತ್ಯವನ್ನೇ ಹೇಳುತ್ತೇನೆ ಸತ್ಯವನ್ನು ಬಿಟ್ಟು ಬೇರೇನೂ ಹೇಳಲ್ಲ ಅಂತ ಪ್ರಮಾಣ ಮಾಡ್ತಾರೆ, ಅದೇ ರೀತಿ ಭಗವದ್ಗೀತೆ ಪ್ರತಿ ಪಠ್ಯಪುಸ್ತಕಗಳಲ್ಲಿ ಇದ್ದರೆ ಏನು ತಪ್ಪು.. ಈಗಿನ ದಿನಗಳಲ್ಲಿ, ಅದು ಮಕ್ಕಳಿಗೆ ಅನಿವಾರ್ಯವಾಗಿದೆ, ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಭಗವದ್ಗೀತೆ ಬಗ್ಗೆ ಬೋಧನೆ ಮಾಡಲೇ ಬೇಕು… ಬೇಕು ಭಗವದ್ಗೀತೆಯ ತಿಳುವಳಿಕೆ ಪ್ರತಿಯೊಬ್ಬ ಮನುಷ್ಯನಿಗೆ ಅನಿವಾರ್ಯ. – ಸತೀಶ ದೊಡ್ಡಮನಿ

ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಅಥವಾ ಬೇಡ? ಇನ್ಸ್ಟಾಗ್ರಾಮ್  ಸಮೀಕ್ಷೆ 

ಇನ್ಸ್ಟಾಗ್ರಾಮ್  ನಲ್ಲಿ ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಅಥವಾ ಬೇಡ? ಎಂದು ಕೇಳಿದಾಗ ಇನ್ಸ್ಟಾಗ್ರಾಮ್ ಬಳಕೆದಾರರೂ ಸ್ಪಷ್ಟವಾಗಿ ಉತ್ತರವನ್ನು ನೀಡಿದ್ದಾರೆ. ಬೇಕು ಅಥವಾ ಬೇಡ ಎನ್ನುವುದನ್ನು ಇದರ ಜೊತೆಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಟಿವಿ9 ಕನ್ನಡ ಡಿಜಿಟಲ್ ನಡೆಸಿದ ಸಮೀಕ್ಷೆಯಲ್ಲಿ ಸಾವಿರರೂ ಜನ ಭಾಗವಹಿಸದರು. 3,656 ಜನ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದು ಜತೆಗೆ ಇದಕ್ಕೆ ಮೆಚ್ಚುಗೆಯನ್ನು ಪಡಿಸಿದ್ದಾರೆ. 600ಕ್ಕೂ ಹೆಚ್ಚು ಜನರು ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಎಂದು ಮತ್ತು ಒಂದಿಷ್ಟು ಜನ ಬೇಡ ಎಂದು ವೋಟ್ ಮಾಡಿದ್ದಾರೆ.

  1. ಭಗವದ್ಗೀತೆಯ ಮೇಲೆ ಕೋರ್ಟಿನಲ್ಲಿ ಪ್ರಮಾಣ ಮಾಡುವಾಗ ಶಾಲೆಯಲ್ಲಿ ಏಕೆ ಬೇಡ ಇನ್ನಾದರೂ ಸರಕಾರದವರು ಭಗವದ್ಗೀತೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಬೇಕು ಮತ್ತು ಅದರ ಇತಿಹಾಸ ಜನರ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ ಮತ್ತು ಅದರ ಬಗ್ಗೆ ತಿಳುವಳಿಕೆ ಬರುತ್ತದೆ. – ವೈ.ಶರಣಪ್ಪ
  2. ಶಾಲೆಯಲ್ಲಿ ಎಲ್ಲರು ಸಮಾನರು ಯಾವುದೇ ಧರ್ಮ ಶಾಲೆಯಲ್ಲಿ ಅನುಸರಿಸಬಾರದು.ಸರ್ಕಾರವೇ ಹೇಳಿದೆ. ಸರ್ಕಾರದ ವಿರುದ್ಧ ಮಾತನಾಡುವರೆಲ್ಲ ದೇಶದ್ರೋಹಿಗಳು. – ಕೃಷ್ಣದೇವರಾಯ
  3. ವಿದ್ಯಾರ್ಥಿಯಾಗಿ ನಾನು ಕಾಮೆಂಟ್ ಮಾಡುತ್ತಿದ್ದೇನೆ ಬೇಕು.. ಬೇಕು ನಮಗೇ ನಮ್ಮ ಪುರಾಣದಲ್ಲಿಯೇ  ಒಳ್ಳೆಯ ನೀತಿ ಮಾತುಗಳು ಇರೋದು,  ಮಹಾಭಾರತ- ಭಗವತ್ಗೀತೆ ಬೇಕು – ರಚನಾ ಶ್ರೀನಿವಾಸ್ 
  4. ಈಗಿನ ಕಾಲದ ಮಕ್ಕಳಲ್ಲಿ ನೈತಿಕತೆ ‌‌‌‌‍‌-ಸಂಸ್ಕಾರ ಮಾನವೀಯ ಮೌಲ್ಯಗಳನ್ನು ಬೆಳೆಸಲು ಅವಶ್ಯಕವಾಗಿ ಭಗವದ್ಗೀತೆ ಶಾಲಾ ಪಠ್ಯಗಳಲ್ಲಿ ಬೇಕು – ಮಂಜೇಶ್ ಗೌಡ ಬಿ

ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಅಥವಾ ಬೇಡ? ಯೂಟ್ಯೂಬ್  ಸಮೀಕ್ಷೆ 

ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಅಥವಾ ಬೇಡ? ಎಂಬ ಪ್ರಶ್ನೆಯನ್ನು ಟಿವಿ9 ಕನ್ನಡ ಡಿಜಿಟಲ್ ಯೂಟ್ಯೂಬ್  ವೇದಿಕೆಯಲ್ಲಿ ಕೇಳಿದಾಗ ಸಾವಿರಾರು ಮಂದಿ ಈ ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿದರು. ಯೂಟ್ಯೂಬ್  ನಲ್ಲಿ ಮಾಡಿದ ಸಮೀಕ್ಷೆಯಲ್ಲಿ 168 ಕೆ ಜನರು ವೋಟ್ ಮಾಡಿದ್ದಾರೆ. ಇದರ ಜೊತೆಗೆ 1 ಸಾವಿರ ಜನ ಟಿವಿ9 ಕನ್ನಡ ಡಿಜಿಟಲ್ ಮಾಡಿದ ಸಮೀಕ್ಷೆಗೆ ಕಮೆಂಟ್ ಮಾಡಿದ್ದಾರೆ. 85 ಶೇಕಡದಷ್ಟು ಜನ ಬೇಕು ಎಂದರೆ 15 ಶೇಕಡದಷ್ಟು ಜನ ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಡ ಎಂದಿದ್ದಾರೆ.

  1. ಭಗವದ್ಗೀತೆಯು ಯಾವುದೇ ಒಂದು ಧಾರ್ಮಿಕ ಗ್ರಂಥ ಅಲ್ಲ. ಅದೊಂದು ಜೀವನ ಕ್ರಮ. ಅದಕ್ಕಾಗಿ ಅದನ್ನು ಪಠ್ಯ ಪುಸ್ತಕ ದಲ್ಲಿ ಪರಿಚಯಿಸಿದರೆ, ತುಂಬಾ ಒಳ್ಳೆಯದು. ಶಿವಕುಮಾರ್ ಸಿಎಂ
  2. ಭಗವದ್ಗೀತೆ ಪಠ್ಯ ಪುಸ್ತಕದಲ್ಲಿ ಸೇರಿಸುವುದು ತುಂಬಾ ಅವಶ್ಯಕವಿದೆ , ಒಳ್ಳೆಯ ನಿರ್ಧಾರ ಮಾಡಿದೆ ಕರ್ನಾಟಕ ಸರ್ಕಾರ – ಶಂಕರಚಾರಿ ಜಿ
  3. ಧಾರ್ಮಿಕತೆ ಅಲ್ವಾ ,ಶಾಲಾ-ಕಾಲೇಜುಗಳಲ್ಲಿ ಧರ್ಮ ಧಾರ್ಮಿಕತೆ ಬೇಡ ಅಂದ ಮೇಲೆ ಪಠ್ಯ ಪುಸ್ತಕ ದಲ್ಲಿ ಯಾಕೆ ? ಭಗವದ್ಗೀತೆ ರಾಮಾಯಣ ಮಹಾಭಾರತ ಕುರಾನ್ ಬೈಬಲ್.. ಧರ್ಮ ಇವುಗಳನ್ನು ಒಳಗೊಂಡಿದೆ ಮತ್ತು ಇವು ಧರ್ಮ ಧಾರ್ಮಿಕತೆ ಒಳಗೊಂಡಿದೆ.. ನೀವು ಭಗವದ್ಗೀತೆಯನ್ನು ಕೇಳಿದ್ರೆ ನಾಳೆ ಅವರು ಕುರಾನ್ ಮತ್ತೆ ಬೈಬಲ್ಲನ್ನು ಕೇಳುತ್ತಾರೆ. ಇದು ಜಾತ್ಯಾತೀತ ರಾಷ್ಟ್ರ ಭಾರತ ದೇಶದಲ್ಲಿ ಎಲ್ಲಾ ಜಾತಿದವರಿಗೆ ಧರ್ಮದವರಿಗೆ ಬದುಕಿ ಬಾಳುವ ಅವಕಾಶವಿದೆ ಎಲ್ಲರನ್ನೂ ಎಲ್ಲ ಧರ್ಮದವರನ್ನೂ ಗೌರವಿಸೋಣ – ಅಶ್ವಿನಿ ಪಿಕೆ
ಸಾಮಾಜಿಕ ಜಾಲತಾಣಗಳು ಬೇಕು ಬೇಡ
ಫೇಸ್ಬುಕ್ : ಪುರುಷರು – 95 ಶೇಕಾಡ

ಮಹಿಳೆಯರು -2ಶೇಕಾಡ

ಪುರುಷರು– 2ಶೇಕಾಡ

ಮಹಿಳೆಯರು -1ಶೇಕಾಡ

ಇನ್ಸ್ಟಾಗ್ರಾಮ್ ಪುರುಷರು – 80ಶೇಕಾಡ

ಮಹಿಳೆಯರು -10ಶೇಕಾಡ

ಪುರುಷರು– 7ಶೇಕಾಡ

ಮಹಿಳೆಯರು -3ಶೇಕಾಡ

ಟ್ವಿಟರ್ : ಪುರುಷರು– 70ಶೇಕಾಡ

ಮಹಿಳೆಯರು -30ಶೇಕಾಡ

ಪುರುಷರು

ಮಹಿಳೆಯರು

ಕೂ : ಪುರುಷರು– 60ಶೇಕಾಡ

ಮಹಿಳೆಯರು -40ಶೇಕಾಡ

ಪುರುಷರು

ಮಹಿಳೆಯರು

ಯೂಟ್ಯೂಬ್  ಪುರುಷರು– 73ಶೇಕಾಡ

ಮಹಿಳೆಯರು -10ಶೇಕಾಡ

ಪುರುಷರು– 10ಶೇಕಾಡ

ಮಹಿಳೆಯರು -7ಶೇಕಾಡ

ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಅಥವಾ ಬೇಡ? ಎಂಬ ಸಮೀಕ್ಷೆಯಲ್ಲಿ ಸಾವಿರರೂ ಮಂದಿ ತಮ್ಮ ಮುಕ್ತ ಮನಸ್ಸಿನಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಸರ್ಕಾರಕ್ಕೂ ಒಂದು ರೀತಿ ಸಾರ್ವಜನಿಕ ಸಲಹೆ ಸಿಕ್ಕತಾಂಗಿದೆ. ಬೇಕು – ಬೇಡ ಎಂಬುದರ ಮಧ್ಯೆ ವಿದ್ಯಾರ್ಥಿಗಳಿಗೆ ಉತ್ತಮ ಮತ್ತು ಒಳ್ಳೆಯ ಶಿಕ್ಷಣ ನೀಡಬೇಕಾಗಿದೆ.

Published On - 6:36 pm, Tue, 22 March 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ