TV9 Kannada Survey: ಹಿಂದು ಧಾರ್ಮಿಕ ಕ್ಷೇತ್ರಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಬೇಡ ? ಇಲ್ಲಿದೆ ಜನಾಭಿಪ್ರಾಯ
TV9 Kannada Survey: ಟಿವಿ9 ಕನನ್ನಡ ಡಿಜಿಟಲ್ ನಡೆಸಿದ ಈ ಸಮೀಕ್ಷಯಲ್ಲಿ ಅನೇಕ ಮುಸ್ಲಿಂ ವ್ಯಾಪಾರಿಗಳಿಗೆ ಹಿಂದು ಧಾರ್ಮಿಕ ಕ್ಷೇತ್ರಗಳಲ್ಲಿ ವ್ಯಾಪರ ಮಾಡಲು ಅವಕಾಶವನ್ನು ನೀಡಬಾರದು ಎಂದು ಹೇಳಿದ್ದಾರೆ.
ಹಿಂದು ಧಾರ್ಮಿಕ ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯದವರು ಯಾವುದೇ ವ್ಯಾಪಾರವನ್ನು ಮಾಡಬಾರದು ಎಂಬ ಮಾತುಗಳು ಜೋರಾಗಿದೆ. ಈ ಬಗ್ಗೆ ಹಿಂದು ನಾಯಕರುಗಳು ಕೂಡ ಅಭಿಯಾನವನ್ನು ನಡೆಸಿದ್ದಾರೆ. ಇದಕ್ಕಾಗಿ ಎಲ್ಲ ದೇವಾಲಯಗಳಲ್ಲೂ ನಮ್ಮ ದೇವಾಲಯದಲ್ಲಿ ನಿಮಗೆ ವ್ಯಾಪಾರ ಮಾಡಲು ಯಾವುದೇ ಅವಕಾಶ ಇಲ್ಲ ಎಂದು ಭಿತ್ತಿಚಿತ್ರವನ್ನು ಹಾಕಿಕೊಂಡಿದ್ದಾರೆ. ದೇವಾಲಯಗಳ ಆಡಳಿತ ಮಂಡಳಿಗಳು ಕೂಡ ಇದಕ್ಕೆ ಸಾಥ್ ನೀಡಿದೆ. ಮುಸ್ಲಿಂ ವ್ಯಾಪಾರಿಗಳಿಗೆ ದೇವಾಲಯಗಳಲ್ಲಿ ಯಾವುದೇ ರೀತಿ ವ್ಯಾಪಾರಕ್ಕೂ ಅವಕಾಶವನ್ನು ನೀಡಬಾರದು ಎಂದು ಆಡಳಿತ ಮಂಡಳಿಗೂ ಹಿಂದೂ ಸಂಘಟನೆಗಳು ಎಚ್ಚರಿಕೆಯನ್ನು ನೀಡಿದೆ. ಈ ಬಗ್ಗೆ ಸರ್ಕಾರ ನಿರವ ಮೌನವನ್ನು ವಹಿಸಿದೆ. ಹಿಂದು ಧಾರ್ಮಿಕ ಕ್ಷೇತ್ರಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಎಂಬ ವಿಚಾರವನ್ನು ಇಟ್ಟುಕೊಂಡು ಟಿವಿ9 ಕನ್ನಡ ಡಿಜಿಟಲ್ ಒಂದು ಸಮೀಕ್ಷೆಯನ್ನು ಮಾಡಿದಾಗ, ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದೆ. ಟಿವಿ9 ಕನನ್ನಡ ಡಿಜಿಟಲ್ ನಡೆಸಿದ ಈ ಸಮೀಕ್ಷಯಲ್ಲಿ ಅನೇಕ ಮುಸ್ಲಿಂ ವ್ಯಾಪಾರಿಗಳಿಗೆ ಹಿಂದು ಧಾರ್ಮಿಕ ಕ್ಷೇತ್ರಗಳಲ್ಲಿ ವ್ಯಾಪರ ಮಾಡಲು ಅವಕಾಶವನ್ನು ನೀಡಬಾರದು ಎಂದು ಹೇಳಿದ್ದಾರೆ. ಇನ್ನು ಕೆಲವರು ಇದಕ್ಕೆ ವಿರೋಧವಾಗಿ ಕಮೆಂಟ್ ಮಾಡಿದ್ದಾರೆ.
ಫೇಸ್ ಬುಕ್ ನಲ್ಲಿ ಸಮೀಕ್ಷೆಗೆ ಬಂದ ಅಭಿಪ್ರಾಯಗಳು
ಫೇಸ್ ಬುಕ್ ನಲ್ಲಿ 10 ಸಾವಿರ ಬಳಕೆದಾರರೂ ಭಾಗವಹಿಸಿದ್ದಾರೆ, ಒಟ್ಟು 7900 ಬಳಕೆದಾರರೂ ಈ ಬಗ್ಗೆ ಕಮೆಂಟ್ ಮಾಡಿದ್ದಾರೆ. ಹಿಂದು ಧಾರ್ಮಿಕ ಕೇಂದ್ರಗಳಲ್ಲಿ ಮುಸ್ಲಿಂ ಸಮುದಾಯ ವ್ಯಕ್ತಿಗಳಿಗೆ ವ್ಯಾಪಾರ ಮಾಡಬಾರದು, ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಫೇಸ್ ಬುಕ್ ನಲ್ಲಿ ನಾವು ಮಾಡಿದ ಸಮೀಕ್ಷೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇನ್ನು ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
- ದೇವಾಲಯದ ಉತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ಬಹಿಷ್ಕರಿಸಿದರೆ – ಅದು ಅಸಮಾನತೆ .. ಕೋಮುದ್ವೇಷ ಹಾಗಾದರೆ CAA ಪ್ರತಿಭಟನೆ ಸಮಯದಲ್ಲಿ ಜಿಯೋ – ಪತಂಜಲಿ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂದು ವೇದಿಕೆಗಳಲ್ಲಿ ನಿಂತು ಕರೆ ನೀಡಿದರಲ್ಲ.ಅದು ಮಾತ್ರ ಸಾಮ್ರಾಜ್ಯವಾದದ ಬಹಿಷ್ಕಾರ. – ಜಿತೇಶ್ ಕುಮಾರ್
- ತಪ್ಪು ಬೇಡಾ ಇದನ್ನಾ, ಅವ್ರೂ ತಿಂತಾರೆ ಅನ್ಕೊಂಡು ನಾವು ತಿಂದ್ರೆ ತಪ್ಪಾಗುತ್ತೆ, ನಮ್ಮ ದೇಶದ ಧ್ವಜದಲ್ಲಿ ಮೂರು ಬಣ್ಣ ಇದ್ರೆನೆ ಚಂದ ಅದೇ ರೀತಿ ಜಾತ್ರೆ ಅಂತಾ ಬಂದ್ರೆ ಎಲ್ಲಾ ಧರ್ಮದವರು ಇರ್ಬೇಕು. – ನಿರಂಜನ ರಾಜು ಪಾಟೀಲ್
- ನೂರಕ್ಕೆ ನೂರು ಸರಿ ನಮ್ಮ ದೈವತ್ವದ ಮೇಲೆ ನಮ್ಮ ಸಂಸ್ಕೃತಿ ನಮ್ಮ ಆಚಾರ-ವಿಚಾರಗಳ ಮೇಲೆ ನಂಬಿಕೆ ಇಲ್ಲದವರಿಗೆ ಅಲ್ಲಿ ವ್ಯಾಪಾರ ಮಾಡಲು ಹಕ್ಕಿಲ್ಲ- ಅಮರೇಶ ಛತ್ರಪತಿ
- ಗಂಗೊಳ್ಳಿಯಲ್ಲಿ ಹಿಂದೂ ಮೀನುಗಾರರಿಗೆ ಬಹಿಷ್ಕಾರ ಹಾಕಿದ್ರಲ್ಲ? ಆಗ “ಸರ್ವ ಜನಾಂಗದ ಶಾಂತಿಯ ತೋಟ” ಎಂದು ಹೇಳುವ ಒಬ್ಬರಾದರೂ ಕಾಮೆಂಟ್ ಮಾಡಿದ್ರಾ? ಇಲ್ಲ.. ಯಾಕೆ ಹೇಳಿ? ನಾವು ಹಿಂದೂಗಳು ಮಾತ್ರ ಶಾಂತಿ ಮಂತ್ರದ ಗುತ್ತಿಗೆ ತೆಗೆದುಕೊಂಡಿದ್ದೇವಾ? ಹಿಂದೂಗಳು, ಇನ್ನೂ ಎಷ್ಟು ದಿನ ದೌರ್ಜನ್ಯ ಸಹಿಸಿಕೊಂಡು ಇರಬೇಕು? – ವೇಣು ಜಿವಿ
ಇನ್ಸ್ಟಾಗ್ರಾಮ್ ನಲ್ಲಿ ಸಮೀಕ್ಷೆಗೆ ಬಂದ ಅಭಿಪ್ರಾಯಗಳು
ಇನ್ಸ್ಟಾಗ್ರಾಮ್ ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 7 ಸಾವಿರಕ್ಕೂ ಹೆಚ್ಚಿನ ಜನ ಇದರ ಭಾಗವಹಿಸಿದ್ದಾರೆ. 828 ಜನ ಸಮೀಕ್ಷೆಯಲ್ಲಿ ಕಮೆಂಟ್ ಮಾಡಿದ್ದಾರೆ. ಹಿಂದು ಧಾರ್ಮಿಕ ಕೇಂದ್ರಗಳಲ್ಲಿ ಮುಸ್ಲಿಂ ಸಮುದಾಯ ವ್ಯಕ್ತಿಗಳಿಗೆ ವ್ಯಾಪಾರ ಮಾಡಬಾರದು ಅದು ಸರಿಯಲ್ಲ ನಮ್ಮ ದೇವಾಲಯಗಳಲ್ಲಿ ಅವರು ಯಾರು ನಮ್ಮ ಧಾರ್ಮಿಕ ಕೇಂದ್ರದಲ್ಲಿ ವ್ಯಾಪರ ಮಾಡಲು ಎಂಬ ಪ್ರಶ್ನೆಯನ್ನು ಹಾಕಿದ್ದಾರೆ. ಇನ್ನು ಕೆಲವರು ನಾವು ಜೊತೆಯಾಗಿ ಕೆಲಸ ಮಾಡಬೇಕಿದೆ. ನಾವೆಲ್ಲರೂ ಒಂದು ರಾಜಕೀಯ ಕಾರಣಕ್ಕೆ ಈ ರೀತಿ ಮಾಡುವುದು ಸರಿಯಲ್ಲ ಎಂದಿದ್ದಾರೆ.
- ಪ್ರತಿಯೊಬ್ಬ ಮನುಷ್ಯನಿಗೂ ಬದುಕುವ ಹಕ್ಕಿದೆ ಜೀವಿಸುವ ಹಕ್ಕಿದೆ ಅವನ ಕುಟುಂಬಕ್ಕಾಗಿ ಜೀವನ ಸಾಗಿಸುವುದಕ್ಕೆ ಮಾಡಿಕೊಳ್ಳುವ ವ್ಯವಹಾರಕ್ಕೆ ನಾವು ಅಡ್ಡಿಯಾಗುವುದು ಬೇಡ ಅದು ಬಡವನ ಹೊಟ್ಟೆಯ ಮೇಲೆ ಹೊಡೆದಂತೆ ಅದಕ್ಕಾಗಿ ಈ ನಿರ್ಧಾರ ತಪ್ಪು – ಪರಶುರಾಮ
- ಮುಸ್ಲಿಂ ಹಬ್ಬ ಮೂಹರಂ ಇದ್ದಾಗ ಎಲ್ಲಾ ಹಿಂದೂ ಜನಗಳು ಮುಸ್ಲಿಂ ದೇವ್ರಿಗೆ ಸಕ್ಕರೆ ತಗೊಂಡು ಕೊಟ್ಟು ನಮಸ್ಕಾರ ಮಾಡಿ ಬರ್ತಾರೆ. ಅದೇ ನಾವು ಗಣೇಶ ಏರಿಯಾ ದಲ್ಲಿ ಎಲ್ರು ಗಣೇಶ ಕೂರಿಸಿದಾಗ ಒಬ್ಬ ಮುಸ್ಲಿಂ ಬಾಂದವರು ಕೂಡ ಕೈ ಮುಗಿಯೋದು ಇಲ್ಲ ಯಾರು ದೇವ್ರ ಅತ್ರನು ಬರಲ್ಲ.. ನಾವು ಎಲ್ರು ಒಂದೇ ಅಂತ ಓಗುತೀವಿ ಆದ್ರೆ ಧರ್ಮ ಧರ್ಮ ಅಂತ ಜಗಳ ಮಾಡ್ತಾರೆ. – ಪ್ರೇಮ್ ಕುಮಾರ್
- ಅಲ್ಲಿ ಎಲ್ಲಾ ವ್ಯಾಪಾರ ಮಾಡೋರೆಲ್ಲಾ ಬಹುತೇಕ ಬಡವ ಮಧ್ಯಮ ವರ್ಗದ ಜನರೇ ಇರುತ್ತಾರೆ. ದಯವಿಟ್ಟು ಕೋಮುಗಲಭೆ ಭಾಷಣ ಮಾಡುವವರ ಮಾತನ್ನು ಕೇಳಬೇಡಿ. ಮೊದಲು ಮಾನವರಾಗಿ ಇಲ್ಲಿ ಯಾರು ಮೇಲಲ್ಲ ಯಾರು ಕೀಳಲ್ಲ. ಬದಲಾಗಿ ಎಲ್ಲರೂ ದೇಶವನ್ನು ಅಭಿವೃದ್ದಿಎಡೆಗೆ ಕೊಂಡೋಯ್ಯೋಣ. – ಸಿದ್ದು ಕುರುಬ ಗೌಡ
ಟ್ವಿಟರ್ ನಲ್ಲಿ ಸಮೀಕ್ಷೆಗೆ ಬಂದ ಅಭಿಪ್ರಾಯಗಳು
ಟ್ವಿಟರ್ ನಡೆಸಿದ ಸಮೀಕ್ಷೆಯಲ್ಲಿ 3 ಸಾವಿರಕ್ಕೂ ಹೆಚ್ಚಿನ ಟ್ವಿಟರ್ ಬಳಕೆದಾರರೂ ಭಾಗವಹಿಸಿದರು, ಟಿವಿ9 ಕನ್ನಡ ಡಿಜಿಟಲ್ ನಡೆಸಿದ ಸಮೀಕ್ಷೆಯಲ್ಲಿ ವಿಭಿನ್ನ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿತ್ತು. 200ಕ್ಕೂ ಹೆಚ್ಚು ಜನ ಸಮೀಕ್ಷೆಯಲ್ಲಿ ಕಮೆಂಟ್ ಮಾಡಿದ್ದಾರೆ. ಇದರ ಜೊತೆಗೆ ಬಳಕೆದಾರರೂ ತಮ್ಮಲ್ಲಿ ಚರ್ಚೆಯನ್ನು ಮಾಡಿಕೊಂಡಿದ್ದಾರೆ.
- ಸರಿ ಇದೆ, 200% ಮತ್ತು ನಮ್ಮ ಧಾರ್ಮಿಕ ದತ್ತಿ ದೇವಸ್ಥಾನದ ಹಣವನ್ನು ಸರಕಾರ ಅವರ ಸಂಘಗಳಿಗೆ ಅನುದಾನ ಕೊಡುವದನು ಸಹ ನಿಲ್ಲಿಸಿ. -ಮಹೇಂದ್ರ ರಾಜಣ್ಣ
- ಇಲ್ಲಿ ಸರಿ ತಪ್ಪಿನ ಪ್ರಶ್ನೆ ಅಲ್ಲ, ದೇಶ, ನೆಲದ ಕಾನೂನು, ಸಮಾಜದ ಸಾಮರಸ್ಯ, ಐಕ್ಯತೆ… ಮುಂತಾದವುಗಳನ್ನು ಕಾಪಾಡುವುದು ಎಲ್ಲರ ಕರ್ತವ್ಯ… ಆಗಾಗದಿದ್ದಾಗ ಇಂತಹ ಪ್ರತಿಕ್ರಿಯೆಗಳು ಸಹಜ – ವಿಜಯ್
- ಜಗತ್ತಿನಲ್ಲಿ ಮಹತ್ವಾಕಾಂಕ್ಷೆಗಳು ,ಸಿದ್ದಾಂತಗಳ ಮೇಲಾಟಗಳು ,ತನ್ನದೇ ಶ್ರೇಷ್ಠ ಎಂಬ ತತ್ವಗಳು ಮರೆಯಾಗುವ ಕಾಲ ಘಟ್ಟದಲ್ಲಿ ನಾವೇದ್ದೇವೆ ಎಂಬ ಸತ್ಯ ಸರ್ವರೂ ಅರಿಯಬೇಕು.ತಾಂತ್ರಿಕತೆಯ ಪರಾಕಾಷ್ಠತೆ ನಮ್ಮನೆಲ್ಲ ಕಿರಿದಾಗಿಸಿದೆ ಎಂಬುದು ದಿಟ.ಆದ್ದರಿಂದ ಯಾರು ಯಾರನ್ನು ನಿಷೇಧಿಸುವ ,ಹೀಯಾಳಿಸುವ, ಕಾರ್ಯಕ್ಕೆ ಮನ ಮಾಡದೆ ,ಭಾವೈಕ್ಯತೆಯಿಂದ ಬಾಳಬೇಕು. – ವೀರೇಂದ್ರ ಕುಮಾರ್
ಸಾಮಾಜಿಕ ಜಾಲತಾಣಗಳು | ಬೇಕು | ಬೇಡ |
ಫೇಸ್ಬುಕ್ : | ಪುರುಷರು – 95 ಶೇಕಾಡ
ಮಹಿಳೆಯರು -2ಶೇಕಾಡ |
ಪುರುಷರು– 2ಶೇಕಾಡ
ಮಹಿಳೆಯರು -1ಶೇಕಾಡ |
ಇನ್ಸ್ಟಾಗ್ರಾಮ್ | ಪುರುಷರು – 80ಶೇಕಾಡ
ಮಹಿಳೆಯರು -10ಶೇಕಾಡ |
ಪುರುಷರು– 7ಶೇಕಾಡ
ಮಹಿಳೆಯರು -3ಶೇಕಾಡ |
ಟ್ವಿಟರ್ : | ಪುರುಷರು– 70ಶೇಕಾಡ
ಮಹಿಳೆಯರು -30ಶೇಕಾಡ |
ಪುರುಷರು–
ಮಹಿಳೆಯರು – |
ಕೂ : | ಪುರುಷರು– 60ಶೇಕಾಡ
ಮಹಿಳೆಯರು -40ಶೇಕಾಡ |
ಪುರುಷರು–
ಮಹಿಳೆಯರು – |
ಯೂಟ್ಯಬ್ | ಪುರುಷರು– 73ಶೇಕಾಡ
ಮಹಿಳೆಯರು -10ಶೇಕಾಡ |
ಪುರುಷರು– 10ಶೇಕಾಡ
ಮಹಿಳೆಯರು -7ಶೇಕಾಡ |
ಒಟ್ಟಿನಲ್ಲಿ ಟಿವಿ9 ಕನ್ನಡ ಡಿಜಿಟಲ್ ನಡೆಸಿದ ಸಮೀಕ್ಷೆಯಲ್ಲಿ ಹೆಚ್ಚಿನ ತಮ್ಮದೇ ಆಗಿರುವ ರೀತಿಯಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಸಿದ್ದಾರೆ, ಕೂ ಮತ್ತು ಯೂಟ್ಯೂಬ್ ನಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ, ಬೇಕು ಮತ್ತು ಬೇಡ ಎಂಬ ಚರ್ಚೆಗಳು ನಡೆದಿದೆ.
Published On - 7:48 pm, Wed, 30 March 22