ಸ್ಟ್ರೈಕರ್ ಶಕ್ತಿ ಸಾಮರ್ಥ್ಯದ ಅನಾವರಣ: ಅಸಾಧಾರಣ ಆಯುಧ ಪ್ರಾಬಲ್ಯದ ವಾಹನಕ್ಕೆ ಸಾಕ್ಷಿಯಾಗೋಣ

ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕಾ ಭೇಟಿ ಭಾರತಕ್ಕೆ ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನಗಳನ್ನು ಅರಿತುಕೊಂಡು, ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಲು ಅವಕಾಶ ಮಾಡಿಕೊಡಲಿದೆ. ಪ್ರಸ್ತುತ ಸ್ಟ್ರೈಕರ್ ಎಂಬ ಶಸ್ತ್ರಸಜ್ಜಿತ ವಾಹನದ ಕುರಿತು ಮಾತುಕತೆಗಳು ನಡೆಯುತ್ತಿವೆ.

ಸ್ಟ್ರೈಕರ್ ಶಕ್ತಿ ಸಾಮರ್ಥ್ಯದ ಅನಾವರಣ: ಅಸಾಧಾರಣ ಆಯುಧ ಪ್ರಾಬಲ್ಯದ ವಾಹನಕ್ಕೆ ಸಾಕ್ಷಿಯಾಗೋಣ
ಶಸ್ತ್ರಸಜ್ಜಿತ ಮಿಲಿಟರಿ ವಾಹನ
Follow us
ಗಂಗಾಧರ​ ಬ. ಸಾಬೋಜಿ
|

Updated on: Jun 21, 2023 | 8:02 PM

ಪ್ರಧಾನಿ ನರೇಂದ್ರ ಮೋದಿ (Narendra Modi) ಯವರ ಅಮೆರಿಕಾ ಭೇಟಿ ಭಾರತಕ್ಕೆ ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನಗಳನ್ನು ಅರಿತುಕೊಂಡು, ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಲು ಅವಕಾಶ ಮಾಡಿಕೊಡಲಿದೆ. ಪ್ರಸ್ತುತ ಮಾತುಕತೆಗಳು ಸ್ಟ್ರೈಕರ್ ಎಂಬ ಶಸ್ತ್ರಸಜ್ಜಿತ ವಾಹನದ ಕುರಿತು ನಡೆಯುತ್ತಿದ್ದು, ಭಾರತ ಈ ಆಧುನಿಕ ಸಾಮರಿಕ ವಾಹನವನ್ನು ತನ್ನ ಸೇನೆಗೆ ಸೇರ್ಪಡೆಗೊಳಿಸಿ, ರಕ್ಷಣಾ ಸಿದ್ಧತೆಯನ್ನು ಇನ್ನಷ್ಟು ಉತ್ತಮಗೊಳಿಸುವ ನಿರೀಕ್ಷೆಗಳಿವೆ. ಮೋದಿಯವರ ಅಮೆರಿಕಾ ಭೇಟಿಯ ಸಂದರ್ಭದಲ್ಲಿ ಬರಲಿರುವ ಘೋಷಣೆಗಳು ಭಾರತದ ರಕ್ಷಣಾ ವಲಯವನ್ನು ಇನ್ನಷ್ಟು ಮೇಲೆತ್ತಿ, ಪ್ರಾದೇಶಿಕ ಮತ್ತು ಜಾಗತಿಕ ಸುರಕ್ಷತಾ ಸಹಯೋಗಿ ರಾಷ್ಟ್ರ ಎನಿಸುವಂತೆ ಮಾಡಲಿದೆ.

ಸ್ಟ್ರೈಕರ್: ಏನಿದು ಶಸ್ತ್ರಸಜ್ಜಿತ ವಾಹನ?

ಅಮೆರಿಕಾದ ಸೇನೆ ಮತ್ತು ಇತರ ಸೇನೆಗಳು ಎಂಟು ಚಕ್ರಗಳ, ಶಸ್ತ್ರಸಜ್ಜಿತ ವಾಹನವಾದ ಸ್ಟ್ರೈಕರ್ ಅನ್ನು ಬಳಸುತ್ತಿವೆ. 2002ರಲ್ಲಿ ಪರಿಚಯಿಸಲಾದ ಈ ವಾಹನಕ್ಕೆ ಇಬ್ಬರು ಮೆಡಲ್ ಆಫ್ ಆನರ್ ವಿಜೇತರಾದ, ಪಿಎಫ್‌ಸಿ ಸ್ಟುವರ್ಟ್ ಎಸ್ ಸ್ಟ್ರೈಕರ್ ಹಾಗೂ ಎಸ್‌ಪಿಸಿ ರಾಬರ್ಟ್ ಎಫ್ ಸ್ಟ್ರೈಕರ್ ಅವರ ಗೌರವಾರ್ಥವಾಗಿ ‘ಸ್ಟ್ರೈಕರ್’ ಎಂದೇ ಹೆಸರಿಡಲಾಗಿದೆ.

1990ರ ದಶಕದ ಅಂತ್ಯದ ವೇಳೆಗೆ, ಅಮೆರಿಕಾದ ಸೇನೆ ತನ್ನ ಪಡೆಗಳನ್ನು ಇನ್ನಷ್ಟು ಮಾರ್ಪಾಡುಗೊಳಿಸಿ, ಹೆಚ್ಚು ಹೊಂದಿಕೊಳ್ಳುವ ಮತ್ತು ಸ್ಪಂದಿಸುವ ಸೇನೆಯನ್ನಾಗಿಸಲು ಮತ್ತು ಜಾಗತಿಕವಾಗಿ ಯಾವುದೇ ಸಮಸ್ಯೆಯನ್ನು ಎದುರಿಸಲು ಸ್ಟ್ರೈಕರ್ ವಾಹನವನ್ನು ಪರಿಹಾರವಾಗಿ ಮುಂದಿಟ್ಟಿತು.

ಇದನ್ನೂ ಓದಿ: ಭಾರತೀಯ ಮಿಲಿಟರಿಯಲ್ಲಿ ನೂತನ ಶಕೆ ಆರಂಭಿಸಲಿದೆ ಜಿಇ 414 – ಐಎನ್ಎಸ್6 ತಂತ್ರಜ್ಞಾನ ವರ್ಗಾವಣೆ!

ಸೇನೆ ಇಂಟರಿಮ್ ಆರ್ಮರ್ಡ್ ವೆಹಿಕಲ್ (ಐಎವಿ) ಕಾರ್ಯಕ್ರಮದಡಿ ಸ್ಟ್ರೈಕರ್ ಅನ್ನು ಉತ್ಪಾದಿಸಲು ಯೋಜನೆ ರೂಪಿಸಿಕೊಂಡಿತು. ಈ ಯೋಜನೆಯ ಮೂಲಕ, ವಿವಿಧ ಪ್ರದೇಶಗಳಿಗೆ ವೇಗವಾಗಿ ಶಸ್ತ್ರಸಜ್ಜಿತ ವಾಹನಗಳನ್ನು ಕಳುಹಿಸಲು ಉದ್ದೇಶಿಸಲಾಗಿತ್ತು.

ಸೇನೆಯ ಗುರಿ ಅತ್ಯಂತ ಕನಿಷ್ಠ ಸಮಯ ಮತ್ತು ಪ್ರಯತ್ನಗಳ ಮೂಲಕ, ಅತ್ಯಂತ ವೇಗವಾಗಿ ಜಗತ್ತಿನ ಬೇರೆ ಬೇರೆ ಸ್ಥಳಗಳಿಗೆ ಕಳುಹಿಸಿಕೊಡಬಲ್ಲ ವಿವಿಧ ಶ್ರೇಣಿಯ ವಾಹನಗಳನ್ನು ಉತ್ಪಾದಿಸುವುದಾಗಿತ್ತು.

ಸ್ಟ್ರೈಕರ್ ವಾಹನವನ್ನು ಅಪಾರ ಪ್ರಮಾಣದ ಶಸ್ತ್ರಸಜ್ಜಿತ ವಾಹನಗಳಾದ ಬ್ರಾಡ್ಲಿ ಫೈಟಿಂಗ್ ವೆಹಿಕಲ್ಸ್ ಮತ್ತು ಹಮ್‌ವೀ ಸೇರಿದಂತೆ ಲೈಟ್ ವೀಲ್ಡ್ ವೆಹಿಕಲ್‌ಗಳ ನಡುವಿನ ಅಂತರವನ್ನು ತಗ್ಗಿಸುವ ನಿಟ್ಟಿನಲ್ಲಿ ಆರಂಭಿಸಲಾಯಿತು.

ಅಮೆರಿಕಾದ ಸೇನೆ ಸೈನಿಕರನ್ನು ರವಾನಿಸಲು, ಕಣ್ಗಾವಲು ವ್ಯವಸ್ಥೆ ಮಾಡಲು, ಸಮರದಲ್ಲಿ ಬೆಂಬಲ ನೀಡಲು ಸೇರಿದಂತೆ ವಿವಿಧ ಉದ್ದೇಶಗಳಿಗೆ ಪೂರಕವಾದ ವಾಹನಕ್ಕಾಗಿ ಹುಡುಕಾಟ ನಡೆಸುತ್ತಿತ್ತು. ಈ ವಾಹನ ಅತ್ಯಂತ ಕುಶಲವೂ, ಹೊಂದಿಕೊಳ್ಳುವ ಸಾಮರ್ಥ್ಯ ಇರುವುದಾಗಿರಬೇಕಿತ್ತು.

2002ರಲ್ಲಿ ಅಮೆರಿಕಾದ ಸೇನೆ ಸ್ಟ್ರೈಕರ್ ವಾಹನವನ್ನು ವಿವಿಧ ಕಾರ್ಯಾಚರಣೆಗಳು ಮತ್ತು ಸಂಘರ್ಷಗಳಲ್ಲಿ ಬಳಸಿಕೊಳ್ಳಲು ಆರಂಭಿಸಿತು. ಈ ವಾಹನ ಎಲ್ಲ ಅವಶ್ಯಕತೆಗಳು ಮತ್ತು ಗುರಿಗಳನ್ನು ಈಡೇರಿಸುವ ಸಲುವಾಗಿ ನಂತರದ ವರ್ಷಗಳಲ್ಲಿ ವಾಹನದಲ್ಲಿ ವಿವಿಧ ಮಾರ್ಪಾಡುಗಳು ಮತ್ತು ಅಭಿವೃದ್ಧಿಗಳನ್ನು ಮಾಡಲಾಯಿತು.

ಇಲ್ಲಿಯ ತನಕ ಎಷ್ಟು ಸ್ಟ್ರೈಕರ್ ವಾಹನಗಳನ್ನು ಉತ್ಪಾದಿಸಲಾಗಿದೆ ಎನ್ನುವ ಮಾಹಿತಿಯನ್ನು ಇನ್ನೂ ಸ್ಪಷ್ಟಪಡಿಸಲಾಗಿಲ್ಲ. ಆದರೆ ಅಮೆರಿಕನ್ ಸೇನೆ ಇನ್‌ಫ್ಯಾಂಟ್ರಿ ಸಾಗಾಟ ವಾಹನ, ಮೊಬೈಲ್ ಗನ್ ವ್ಯವಸ್ಥೆ ವಾಹನ ಹಾಗೂ ಆ್ಯಂಟಿ ಟ್ಯಾಂಕ್ ಕ್ಷಿಪಣಿ ವಾಹನ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ 4,700ಕ್ಕೂ ಹೆಚ್ಚು ಸ್ಟ್ರೈಕರ್ ವಾಹನಗಳನ್ನು ಖರೀದಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: NavIC: ಪ್ರಾದೇಶಿಕ ಸಂಚರಣಾ ವ್ಯವಸ್ಥೆ ನಾವಿಕ್ ಭಾರತಕ್ಕೇಕೆ ಮಹತ್ವದ್ದು? ಇಲ್ಲಿದೆ ಮಾಹಿತಿ

ಸ್ಟ್ರೈಕರ್ ವಾಹನವನ್ನು ಅಮೆರಿಕಾದ ಸೇನೆ ಮಾತ್ರವಲ್ಲದೆ, ಕೆನಡಾ, ಥೈಲ್ಯಾಂಡ್, ಹಾಗೂ ಆಸ್ಟ್ರೇಲಿಯಾಗಳೂ ಖರೀದಿಸಿವೆ.

1990ರ ನಂತರ, ಜನರಲ್ ಡೈನಾಮಿಕ್ಸ್ ಲ್ಯಾಂಡ್ ಸಿಸ್ಟಮ್ಸ್ ಹಾಗೂ ಓಶ್‌ಕೋಶ್ ಕಾರ್ಪೊರೇಷನ್ ಸ್ಟ್ರೈಕರ್ ವಾಹನವನ್ನು ಬೇರೆ ಬೇರೆ ಬ್ಯಾಚ್‌ಗಳಲ್ಲಿ ಉತ್ಪಾದಿಸಿದ್ದು, ಅದಕ್ಕೆ ಕಾಲಾನುಕ್ರಮದಲ್ಲಿ ವಿವಿಧ ಅಭಿವೃದ್ಧಿಗಳು ಹಾಗೂ ಮಾರ್ಪಾಡುಗಳನ್ನು ಮಾಡಲಾಗಿದೆ.

ಸ್ಟ್ರೈಕರ್ ಸಮರ ರಂಗದಲ್ಲಿ ಅಪಾರ ಯಶಸ್ಸು ಸಾಧಿಸಿದ್ದು, ಅದರಲ್ಲೂ ಅಫ್ಘಾನಿಸ್ತಾನ ಹಾಗೂ ಇರಾಕ್ ಯುದ್ಧಗಳಲ್ಲಿ ಹಲವಾರು ಸೈನಿಕರ ಪ್ರಾಣ ರಕ್ಷಣೆಗೆ ನೆರವಾಗಿದೆ. ಇದರ ಉತ್ತಮ ರಕ್ಷಣೆ ಮತ್ತು ಚಾಲನಾ ಸಾಮರ್ಥ್ಯ ಸ್ಟ್ರೈಕರ್ ಅನ್ನು ಅಮೆರಿಕಾ ಸೇನೆಯ ಕ್ಷಿಪ್ರ ಪರಿಹಾರ ಕಾರ್ಯಾಚರಾ ತಂಡದ ಪ್ರಮುಖ ಅಂಗವಾಗಿಸಿದೆ. ಸ್ಟ್ರೈಕರ್ ವಾಹನವನ್ನು ಅಮೆರಿಕಾದ ಸೇನೆ ಹಾಗೂ ಜಗತ್ತಿನಾದ್ಯಂತ ವಿವಿಧ ಸೇನೆಗಳು ಬಳಸಿಕೊಳ್ಳುತ್ತಿವೆ.

ಸ್ಟ್ರೈಕರ್ ವಾಹನವನ್ನು ಕುಶಲತೆಯಿಂದ ಚಲಿಸಲು ಮತ್ತು ವಿವಿಧ ಕಾರ್ಯಗಳಲ್ಲಿ ಬಳಸಲು ಅಭಿವೃದ್ಧಿ ಪಡಿಸಲಾಗಿದ್ದು, ಸೈನಿಕರ ಸಾಗಾಣಿಕೆ, ಕಣ್ಗಾವಲು, ಆಯುಧಗಳ ಪೂರೈಕೆಗೆ ಬಳಸಿಕೊಳ್ಳಲಾಗುತ್ತದೆ. ಇದೊಂದು ಸರಳ ರಚನೆಯಾಗಿದ್ದು, ಇದನ್ನು ಆಯುಧಗಳು, ವಿಶೇಷ ಕಾರ್ಯಾಚರಣೆಗಳಿಗೆ ಬೇಕಾದ ವಿಶೇಷ ಭಾಗಗಳು, ಸಂವಹನ ವ್ಯವಸ್ಥೆಗಳು ಸೇರಿದಂತೆ, ವಿವಿಧ ಬಿಡಿಭಾಗಗಳನ್ನು ಸುಲಭವಾಗಿ ಜೋಡಿಸಿ, ಬದಲಾಯಿಸಿಕೊಳ್ಳಲು ಸಾಧ್ಯವಾಗುತ್ತದೆ.

ಸ್ಟ್ರೈಕರ್ ವಾಹನ ದಪ್ಪನೆಯ ಲೋಹವನ್ನು ಹೊಂದಿದ್ದು, ಸಣ್ಣ ಪ್ರಮಾಣದ ಸ್ಫೋಟ, ಐಇಡಿ ಹಾಗೂ ಇತರ ದಾಳಿಗಳಿಂದ ಪ್ರಯಾಣಿಕರ ರಕ್ಷಣೆಗೆ ಸೂಕ್ತ ತಂತ್ರಜ್ಞಾನಗಳನ್ನು ಹೊಂದಿದೆ. ಸ್ಟ್ರೈಕರ್ ವಾಹನದ ಡೀಸೆಲ್ ಇಂಜಿನ್ ಇದು ರಸ್ತೆಗಳಲ್ಲಿ ಪ್ರತಿ ಗಂಟೆಗೆ 60 ಮೈಲಿಗಳ (97 ಕಿಲೋಮೀಟರ್) ವೇಗದಲ್ಲಿ ಚಲಿಸುವಂತೆ ಮಾಡುತ್ತದೆ.

ಸ್ಟ್ರೈಕರ್ ಇನ್ನಷ್ಟು ಅಭಿವೃದ್ಧಿಗಳನ್ನು ಹೊಂದುವ ಸಾಧ್ಯತೆಗಳಿದ್ದು, ವಿಶೇಷವಾಗಿ ಆಯುಧಗಳಲ್ಲಿ ಬದಲಾವಣೆಗಳನ್ನು ತರಲಾಗುವುದು. ಇದರಲ್ಲಿ ಪ್ರಸ್ತುತ 30 ಎಂಎಂ ಕ್ಯಾನನ್, ವಿವಿಧ ಮೆಷಿನ್ ಗನ್‌ಗಳನ್ನು ಹೊಂದಿದ್ದು, ಸ್ಟ್ರೈಕರ್ ಇನ್ನಷ್ಟು ಆಧುನಿಕ ಮತ್ತು ಸಮರ್ಥ ಆಯುಧಗಳನ್ನು ಹೊಂದುವ ಸಾಧ್ಯತೆಗಳಿವೆ.

ಮುಂದಿನ ದಿನಗಳಲ್ಲಿ, ಸ್ಟ್ರೈಕರ್ ವಾಹನಕ್ಕೆ ಆಧುನಿಕ ಸ್ಫೋಟಕಗಳು, ಅನ್ ಮ್ಯಾನ್ಡ್ ಏರಿಯಲ್ ವೆಹಿಕಲ್‌ಗಳು (ಯುಎವಿ) ಅಥವಾ ಸ್ವಾಯತ್ತ ವ್ಯವಸ್ಥೆಗಳನ್ನು ಅಳವಡಿಸಿಕೊಂಡು, ಇನ್ನೂ ಹೆಚ್ಚಿನ ಕಣ್ಗಾವಲು ಸಾಮರ್ಥ್ಯ ಹೊಂದುವ ನಿರೀಕ್ಷೆಗಳಿವೆ.

ಸ್ಟ್ರೈಕರ್ ಅಮೆರಿಕಾದ ಸೇನಾಪಡೆಗಳ ಶಸ್ತ್ರಸಜ್ಜಿತ ವಾಹನ ದಳದ ಒಂದು ಅವಿಭಾಜ್ಯ ಅಂಗವಾಗಿದ್ದು, ಸದ್ಯದ ಸನ್ನಿವೇಶದಲ್ಲಿ ಇದು ಅತ್ಯುತ್ತಮ ಆಯ್ಕೆ ಎನಿಸಿದೆ.

Girish Linganna

ಗಿರೀಶ್ ಲಿಂಗಣ್ಣ

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಮತ್ತಷ್ಟು ಅಭಿಮತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ