‘ಹೆಣಗಳ ಮೇಲೆ ರಾಜ್ಯ ಸರ್ಕಾರ ಹಣ ಮಾಡಿದೆ.. BJP ಸಂಸದರಿಗೆ ಕೇಂದ್ರದಿಂದ ಹಣ ತರೋ ತಾಕತ್ತಿಲ್ಲ’

ಬೆಂಗಳೂರು: ಕೊವಿಡ್‌ ಸಂದರ್ಭದಲ್ಲೂ ಸರ್ಕಾರ ಭ್ರಷ್ಟಾಚಾರ ಮಾಡಿದೆ ಎಂದು ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್​ ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸತ್ತ ಹೆಣಗಳ ಮೇಲೆ ರಾಜ್ಯ ಸರ್ಕಾರ ಹಣ ಮಾಡಿದೆ. ಕೊವಿಡ್‌ ವೈದ್ಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಕನಿಷ್ಠ 2 ಸಾವಿರ ಕೋಟಿ ರೂಪಾಯಿಯಷ್ಟು ಅವ್ಯವಹಾರ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಬಂದ್​ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ನಾಳೆ ನಡೆಯಲಿರುವ ಕರ್ನಾಟಕ ಬಂದ್​ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಘೋಷಣೆ ಮಾಡಿದರು. ರಾಜ್ಯ ಸರ್ಕಾರ ರೈತರು ಮತ್ತು ಕಾರ್ಮಿಕರ ಪರ ಇರಬೇಕಿತ್ತು. ಆದ್ರೆ ಇವರ ವಿರುದ್ಧವೇ ಕಾನೂನು ತರಲು ಮುಂದಾಗಿದೆ. ನಾಳಿನ ಬಂದ್​ಗೆ ಸಾಕಷ್ಟು ಸಂಘಟನೆಗಳು ಬೆಂಬಲ ನೀಡಿವೆ. ಬಂದ್​ಗೆ ಕಾಂಗ್ರೆಸ್‌ ಬೆಂಬಲ ಸಹ ಇದೆ ಎಂದು ಹೇಳಿದರು.

‘BJPಸಂಸದರಿಗೆ ಕೇಂದ್ರದಿಂದ ಹಣ ತರೋ ತಾಕತ್ತಿಲ್ಲ’
ಬಿಜೆಪಿ ಸಂಸದರು ಷಂಡರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದ ಸಂಸದರನ್ನು ಟೀಕಿಸಿದ್ದಾರೆ. ಇವರು ಕೇಂದ್ರ ಸರ್ಕಾರದಿಂದ ಹಣ ತರಲು ತಾಕತ್ತು ಇಲ್ಲದವರು. ಇವರಿಂದ GSTಯ ಬಾಕಿ ಹಣ ಹಾಗೂ ನೆರೆ ಪರಿಹಾರದ ಹಣವನ್ನು ತರಲು ಆಗಿಲಿಲ್ಲ ಎಂದು ಸಂಸದರನ್ನು ಟೀಕಿಸಿದ್ದಾರೆ.

Related Tags:

Related Posts :

Category:

error: Content is protected !!