ಅತ್ಯಾಚಾರಿಗಳಿಗೆ ಈ ಶಿಕ್ಷೆಯೇ ಸರಿ ಎಂದ ಇಮ್ರಾನ್​ ಖಾನ್​, ಯಾವುದು ಆ ಶಿಕ್ಷೆ?

ಇಸ್ಲಾಮಾಬಾದ್: ಇತ್ತೀಚೆಗೆ ಪುರುಷರಿಬ್ಬರು ಮಹಿಳೆಯ ಮೇಲೆ ಆಕೆಯ ಪುಟ್ಟ ಮಕ್ಕಳ ಎದುರಿಗೇ ಸಾಮೂಹಿಕ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ದೇಶದಲ್ಲಿ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯವನ್ನು ತಡೆಯಲು ಅತ್ಯಾಚಾರಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಲೇಬೇಕು ಎಂದು ಸಾರಿದ್ದಾರೆ.

ರೇಪಿಸ್ಟ್​ಗಳಿಗೆ ರಾಸಾಯನಿಕವಾಗಿ castration ಮಾಡಿಸಿಬಿಡಬೇಕು
ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವುದು ಅಥವಾ ಅವರ ಪುರುಷತ್ವವನ್ನು ನಾಶಗೊಳಿಸಬೇಕು ಎಂದು ಸ್ಥಳೀಯ ಟೆಲಿವಿಷನ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಇಮ್ರಾನ್ ತಿಳಿಸಿದ್ದಾರೆ. ಮುಖ್ಯವಾಗಿ ಅಪರಾಧಿ ರೇಪಿಸ್ಟ್​ಗಳಿಗೆ castration ಮಾಡಿಸಿಬಿಡಬೇಕು. ಅಂದ್ರೆ ರಾಸಾಯನಿಕ ಸಿಂಪಡಿಸಿ ಅವರ ಪುರುಷ ಜನನಾಂಗವನ್ನು ನಿಷ್ಕ್ರಿಯಗೊಳಿಸಬೇಕು ಎಂದು ಇಮ್ರಾನ್ ಖಾನ್ ಗರಂ ಆಗಿ ಹೇಳಿದ್ದಾರೆ.

ಸಾಮೂಹಿಕ ಅತ್ಯಾಚಾರ ಪ್ರಕರಣವು ಇಡೀ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ ಹಾಗೂ ದೇಶದಲ್ಲಿ ಲೈಂಗಿಕ ಅಪರಾಧಗಳು ಹೆಚ್ಚುತ್ತಿವೆ ಎಂದು ಪೊಲೀಸರಿಂದ ತಿಳಿದು ನಾನು ಆಘಾತಗೊಂಡಿದ್ದೇನೆ. ಅತ್ಯಾಚಾರಿಗಳಿಗೆ ಮಾದರಿ ಶಿಕ್ಷೆಗಳನ್ನು ನೀಡಬೇಕು. ನನ್ನ ಅಭಿಪ್ರಾಯದಲ್ಲಿ, ಅವರನ್ನು ಬಹಿರಂಗವಾಗಿ ಗಲ್ಲಿಗೇರಿಸಬೇಕು ಅಥವಾ castration ಮಾಡಿಸಿಬಿಡಬೇಕು ಎಂದಿದ್ದಾರೆ. ಈ ಶಿಕ್ಷೆಯನ್ನು ಅತ್ಯಾಚಾರಿಗಳಿಗೆ ಮತ್ತು ಮಕ್ಕಳನ್ನು ನಿಂದಿಸುವವರಿಗೂ ಮೀಸಲಿಡಬೇಕು ಎಂದು ಮಾಜಿ ಕ್ರಿಕೆಟ್ಟಿಗ ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

Related Tags:

Related Posts :

Category: