ಅಭಿನಂದನ್​ ಬಿಡುಗಡೆ ಮಾಡದಿದ್ರೆ ಭಾರತದ ದಾಳಿ ಆತಂಕ: ಪಾಕ್​ ಸೇನಾ ಮುಖ್ಯಸ್ಥನ ಕಾಲು ನಡುಗುತಿತ್ತು

  • Ayesha Banu
  • Published On - 8:44 AM, 29 Oct 2020

ದೆಹಲಿ: ವಿಶ್ವ ಸೇರಿದಂತೆ ಇಡೀ ಭಾರತದ ಗಮನ ಸೆಳೆದಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್​ ಅವರನ್ನು ಬಿಡುಗಡೆ ಮಾಡುತ್ತಿರುವುದು ಶಾಂತಿಗಾಗಿ ಎಂದು ಹೇಳಿದ್ದ ಪಾಕಿಸ್ತಾನದ ನಿಜ ರೂಪ ಬಯಲಾಗಿದೆ. ಭಾರತದ ಆ ಒಂದು ಮಾತಿಗೆ ಹೆದರಿ ಪಾಪಿ ಪಾಕಿಸ್ತಾನ ಬಾಲ ಮುದುಡಿಕೊಂಡಿತ್ತು.

ಅಭಿನಂದನ್​ ಬಿಡುಗಡೆ ಮಾಡದಿದ್ರೆ ಭಾರತದಿಂದ ದಾಳಿ ಆಗುವ ಆತಂಕಕ್ಕೆ ಪಾಕ್​ ಸೇನೆ ಮುಖ್ಯಸ್ಥ ಖಮರ್ ಬಜ್ವಾ ಕಾಲುಗಳು ನಡುಗುತ್ತಿತ್ತು. 2019ರ ಪಾಕ್​ ಸರ್ವಪಕ್ಷ ಸಭೆ ಬಗ್ಗೆ ಪಾಕಿಸ್ತಾನ ಮುಸ್ಲಿಂ ಲೀಗ್​-ಎನ್​ ನಾಯಕ ಅಯಾಜ್ ಸಾದಿಕ್​ ಮಾಹಿತಿ ಹಂಚಿಕೊಂಡಿದ್ದಾರೆ. ಅಂದು ನಡೆದ ಸಭೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್​ ಖುರೇಷಿ ಆತಂಕ ವ್ಯಕ್ತಪಡಿಸಿದ್ದರು.

ವಿಂಗ್ ಕಮಾಂಡರ್ ಅಭಿನಂದನ್​ ಅವರನ್ನು ಬಿಡುಗಡೆ ಮಾಡದಿದ್ರೆ ರಾತ್ರಿ 9 ಗಂಟೆಯೊಳಗೆ ಭಾರತ ದಾಳಿ ಮಾಡುತ್ತೆ ಎಂಬ ಆತಂಕ ಅವರಿಗಿತ್ತು. ಹೀಗಾಗಿ ಇಮ್ರಾನ್ ಖಾನ್ ಸರ್ಕಾರವು ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ಧಮಾನ್​ ಅವರನ್ನು ಭಾರತಕ್ಕೆ ಮರಳಿ ಕಳಿಸಿತ್ತು ಎಂದಿದ್ದಾರೆ.