‘ರಾಗಿಣಿ ತುಂಬಾ ಸುಸ್ತಾಗಿದ್ದೀಯಾ, ಮೊದ್ಲು ಊಟ ಮಾಡಮ್ಮಾ’ ಅಂದ್ರು ವೈದ್ಯೆ!

ಆನೇಕಲ್: ಸರ್ಕಾರಿ ಸಾಂತ್ವನ ಕೇಂದ್ರದಿಂದ ಸೀದಾ ಪರಪ್ಪನ ಅಗ್ರಹಾರ ಜೈಲಿಗೆ ತಲುಪಿ ‘ಪಂಜರದ ಗಿಣಿ’ಯಾಗಿರುವ ರಾಗಿಣಿ ದ್ವಿವೇದಿಗೆ ಅಲ್ಲಿನ ಜೈಲು ವಾತಾವರಣ ಸುತರಾಂ ಇಷ್ಟವಾಗುತ್ತಿಲ್ಲ. ಆ ನಿಟ್ಟಿನಲ್ಲಿ ಮೊದಲು ಆಹಾರ ಸೇವನೆ ಅಷ್ಟಕ್ಕಷ್ಟೇ ಅಂತಾ ಬಲವಂತಕ್ಕೆ ಒಂದಷ್ಟು ತಿನ್ನುವ ಶಾಸ್ತ್ರ ಮುಗಿಸಿದ್ದಾರೆ ರಾಗಿಣಿ.

ಮನೆಯಿಂದ, ಸ್ವತಃ ಸಿಸಿಬಿಯಿಂದ ಬಂದ ಆಹಾರ ಸೇವನೆಗೆ ಕ್ವಾರಂಟೈನ್ ನಿಯಮ ಬ್ರೇಕ್ ಹಾಕಿದೆ. ಇಷ್ಟಾನುಸಾರ ತಿನ್ನುವ ಹಾಗಿಲ್ಲ ಅನ್ನುತ್ತಿದೆ ಜೈಲಿನ ಕೊರೊನಾ ಕ್ವಾರಂಟೈನ್ ನಿಯಮ. ಇದರಿಂದ ರಾಗಿಣಿ ನಿತ್ರಾಣಗೊಂಡಿದ್ದಾಳೆ. ಇಂದು ಚೆಕಪ್​ಗೆ ಬಂದ ವೈದ್ಯರ ಬಳಿ ಮತ್ತದೇ ರಾಗ ತೆಗೆದಿದ್ದಾಳೆ ರಾಗಿಣಿ.. ನನಗೆ ಅಸ್ತಮಾ, ಬೆನ್ನು ನೋವು ಅಂತೆಲ್ಲಾ ಹೇಳಿಕೊಂಡಿದ್ದಾರೆ. ಅಂದಹಾಗೆ, ಜೈಲು ವೈದ್ಯೆ ಉಮಾ ಅವರು ರಾಗಿಣಿ ಚಿಕಿತ್ಸೆಗೆ ಬಂದಿದ್ರು. ರಾಗಿಣಿಯನ್ನು ನೋಡಿದವರೇ ‘ರಾಗಿಣಿ ತುಂಬಾ ಸುಸ್ತಾಗಿದ್ದೀಯಾ, ಮೊದ್ಲು ಊಟ ಮಾಡಮ್ಮಾ’ ಅಂತಾ ಮಾತೃ ಅಂತಃಕರಣದ ವೈದ್ಯೆ ಗದರಿಕೊಂಡಿದ್ದಾರೆ.

ಆಗಷ್ಟೇ ರಾಗಿಣಿ ಸೆಂಟ್ರಲ್​ ಜೈಲಿನಲ್ಲಿ ಮಧ್ಯಾಹ್ನದ ಊಟ ಸೇವಿಸಿದ್ದಾರೆ. ಜೈಲು ಸಿಬ್ಬಂದಿ ನೀಡಿದ ಚಪಾತಿ, ಪಲ್ಯ, ಅನ್ನ, ಸಾಂಬಾರ್​ ಅನ್ನೇ ತಿಂದುಮುಗಿಸಿದ್ದಾರೆ. ಊಟೋಪಚಾರದ ಬಳಿಕ, ವೈದ್ಯರು ರಾಗಿಣಿಗೆ ವೈದ್ಯೋಪಚಾರ ನೀಡಲು ಮುಂದಾಗಿದ್ದಾರೆ.

Related Tags:

Related Posts :

Category: