ಬೆಂಗಳೂರಿಗೆ ಶುರುವಾಗಿದೆ ಬಿಹಾರಿ ನಂಜಿನ ಭಯ, P 419 ಟ್ರಾವೆಲ್ ಹಿಸ್ಟರಿ ಆತಂಕಕಾರಿ

ಬೆಂಗಳೂರು: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್​ಡೌನ್ ಮಾಡಲಾಗಿದೆ. ಆದರೆ ಈ ಮಹಾಮಾರಿ ಕೊರೊನಾ ದಿನೇ ದಿನೆ ಬೆಳೆಯುತ್ತಲೇ ಹೋಗುತ್ತಿದ್ದು, 419 ಸೋಂಕಿತನ ಹಿಸ್ಟರಿ ಬೆಂಗಳೂರಿಗರನ್ನು ಬೆಚ್ಚಿ ಬೀಳಿಸುವಂತಿದೆ. ಸೋಂಕಿತ ವ್ಯಕ್ತಿ 54 ವರ್ಷದ ಬಿಹಾರಿ ಮೂಲದವನು ಕಳೆದ ಕೆಲ ದಿನಗಳಿಂದ ತನ್ನ ಸ್ನೇಹಿತನ ಜೊತೆ ಹೊಂಗಸಂದ್ರದಲ್ಲಿ 150ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದ ಸ್ಲಂನಲ್ಲಿ ವಾಸಿಸುತ್ತಿದ್ದನು. ನಿನ್ನೆ ಈತನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಸೋಂಕು ದೃಢವಾಗೋ ಮೊದಲು ಎಲ್ಲಿ ಬೇಕಂದ್ರಲ್ಲಿ ಓಡಾಡಿದ್ದ. ಜ್ವರ, ಕೆಮ್ಮ ಕಾಣಿಸಿಕೊಂಡಿದೆ ಎಂದು ಹೊಂಗಸಂದ್ರದ 4 ಕ್ಲಿನಿಕ್​ಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಿದ್ದಾನೆ. ಮೊದಲು ಏಪ್ರಿಲ್ 18 ವೇಣು ಹೆಲ್ತ್ ಕೇರ್ ಸೆಂಟರ್​ನಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಏಪ್ರಿಲ್19 ರಂದು ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ.

ಏ.20ರಂದು ವಿಕ್ಟೋರಿಯಾಗೆ ಚಿಕಿತ್ಸೆಗಾಗಿ ತೆರಳಿದ್ದ ಆದರೆ ಅಲ್ಲಿ ರಾಜೀವ್ ಗಾಂಧಿ ಆಸ್ಪತ್ರೆಗೆ ಹೋಗುವಂತೆ ವಾಪಸ್ ಕಳುಹಿಸಿದ್ದಾರೆ. ಏ.20ರಂದೇ ಕಿಮ್ಸ್ ಆಸ್ಪತ್ರೆಗೆ ತೆರಳಿದ್ದಾನೆ. ನಂತರ ಅಲ್ಲಿಂದ ಅದೇ ದಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ನಿನ್ನೆ ಬಿಹಾರ ಮೂಲದ ಕಾರ್ಮಿಕನಿಗೆ ಕೊರೊನಾ ಪಾಸಿಟಿವ್ ಇರುವುದು ದೃಢ ಪಟ್ಟಿದೆ.

ಒಬ್ಬನಿಂದ 9 ಮಂದಿಗೆ ಸೋಂಕು:
ಈ ಬಿಹಾರಿ ಮೂಲದ ಕೊರೊನಾ ಸೋಂಕಿತನಿಂದ 9 ಮಂದಿಗೆ ಸೋಂಕು ಹರಡಿದೆ. ತಡರಾತ್ರಿ ಕಾರ್ಯಾಚರಣೆ ನಡೆಸಿ 123 ಮಂದಿಯನ್ನು ಸರ್ ಸಿ.ವಿ. ರಾಮನ್ ಆಸ್ಪತ್ರೆಯಲ್ಲಿ ಕ್ವಾರಂಟೈನ್​ ಮಾಡಲಾಗಿದೆ. ಕ್ವಾರಂಟೈನ್ ಕಾರ್ಯ ಇವತ್ತೂ ಮುಂದುವರಿದಿದೆ.

ಇಡೀ ಬೊಮ್ಮನಹಳ್ಳಿ, ವಿದ್ಯಾಜ್ಯೋತಿ ನಗರ ಕಂಪ್ಲೀಟ್ ಖಾಲಿ ಖಾಲಿ ಹೊರಗೆ ಬರಲು ಜನರಿಗೆ ಭಯ, ಎಲ್ಲಾ ಮನೆಗಳಿಗೂ ಬೀಗ ಬಿದ್ದಿದೆ. ವಿದ್ಯಾಜ್ಯೋತಿ ನಗರದ ಜನರನ್ನು ಖಾಲಿ ಮಾಡಿಸಿ ಕ್ವಾರಂಟೈನ್ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

1PM- TV9 Kannada Facebook Live, ಟಿವಿ9 ಕನ್ನಡ ಫೇಸ್ ಬುಕ್ ಲೈವ್

1PM- TV9 Kannada Facebook Live, ಟಿವಿ9 ಕನ್ನಡ ಫೇಸ್ ಬುಕ್ ಲೈವ್ #Coronavirus #FightAgainstCoronavirus #TV9Kannada #TV9FacebookLive #Lockdown2

Tv9Kannada यांनी वर पोस्ट केले गुरुवार, २३ एप्रिल, २०२०

Related Tags:

Related Posts :

Category:

error: Content is protected !!