ಎಚ್ಎಂಟಿ ಸರ್ಕಲ್ ಬಳಿ ಕಾಲಿಗೆ ಚೈನ್ ಬಿಗಿದಿದ್ದ ಮಾನಸಿಕ‌ ಅಸ್ವಸ್ಥನ ರಂಪಾಟ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾವಳಿಯಿಂದಾಗಿ ಜನ ಮಾಸ್ಕ್ ಧರಿಸದವರ ಬಳಿ ನಿಲ್ಲಲು ಸಹ ಭಯಪಡುತ್ತಿದ್ದಾರೆ. ಅಂತಹದ್ದರಲ್ಲಿ ಇಂದು ಮಾನಸಿಕ ಅಸ್ವಸ್ಥನೊಬ್ಬ ಮಾಸ್ಕ್ ಧರಿಸದೆ ರಸ್ತೆಯಲ್ಲಿ ಓಡಾಡಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಜಾಲಹಳ್ಳಿಯ ಎಚ್ಎಂಟಿ ಸರ್ಕಲ್ ಬಳಿ ಕಾಲಿಗೆ ಚೈನ್ ಇಂದ ಬಂಧಿತನಾಗಿದ್ದ ಮಾನಸಿಕ ಅಸ್ವಸ್ಥನೊಬ್ಬ ಮಾಸ್ಕ್ ಧರಿಸದೆ ರಸ್ತೆಯ ತುಂಬಾ ಓಡಾಡಿದ್ದಾನೆ. ಇದರಿಂದ ತೀವ್ರ ಆಘಾತಗೊಂಡ ಸಾರ್ವಜನಿಕರು ಮಾನಸಿಕ ಅಸ್ವಸ್ಥನಿಂದ ತಪ್ಪಿಸಿಕೊಳ್ಳಲು ದೂರ ಓಡಿದ್ದಾರೆ.

ಕೂಡಲೇ ಸ್ಥಳೀಯರು ಸಿವಿಲ್ ಡಿಫೆನ್ಸ್ ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸಿವಿಲ್ ಡಿಫೆನ್ಸ್ ಸಿಬ್ಬಂದಿ ಮಾನಸಿಕ ಅಸ್ವಸ್ಥನನ್ನು ಜಾಲಹಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಮಾನಸಿಕ ಅಸ್ವಸ್ಥ ಜಾಲಹಳ್ಳಿ ಪೊಲೀಸರ ವಶದಲ್ಲಿದ್ದಾನೆ.

Related Tags:

Related Posts :

Category:

error: Content is protected !!