ಬೆಂಗಳೂರು ತೊರೆದು ತಮ್ಮ ಊರುಗಳಿಗೆ ತೆರಳುತ್ತಿರುವ ಜನರೇ ಎಚ್ಚರ.. ಸೋಂಕು ಅಲ್ಲೂ ಹರಡಬಹುದು

ಬೆಂಗಳೂರು: ಇಂದು ರಾತ್ರಿ 8ಗಂಟೆಯಿಂದ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಲಾಕ್​ಡೌನ್ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆಯೇ ಸಿಟಿಮಂದಿ ಊರಿನ ಕಡೆ ಮುಖ ಮಾಡಿದ್ದಾರೆ. ಮೆಜೆಸ್ಟಿಕ್ ಬಸ್​ ನಿಲ್ದಾಣ ಸೇರಿದಂತೆ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಕೆಎಸ್ಆರ್‌ಟಿಸಿ ಹೆಚ್ಚುವರಿ ಬಸ್ ನಿಯೋಜನೆ ಮಾಡಿದೆ.

ನಿನ್ನೆ ಕೂಡ ಅನೇಕ ಮಂದಿ ತನಗೆ ನೆಲ ಕೊಟ್ಟು ಬೆಂಗಳೂರನ್ನು ಬಿಟ್ಟು ತಮ್ಮ ಸ್ವಂತ ಗೂಡಿಗೆ ಮರಳಿದ್ದರು. ಇಂದು ಸಹ ಅನೇಕ ಮಂದಿ ಗಂಟು ಮೂಟೆ ಕಟ್ಟಿಕೊಂಡು ಬೆಂಗಳೂರನ್ನು ಬಿಟ್ಟು ಹೋಗುತ್ತಿದ್ದಾರೆ. ನಾನಾ ಕೆಲಸಗಳನ್ನು ಮಾಡ್ತಾ ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಬದುಕು ಕಟ್ಟಿ ಕೊಂಡಿದ್ದ ಜನರು ಕಳೆದ ಮೂರು ತಿಂಗಳಿನಿಂದ ಕೊರೊನಾ ಅಟ್ಟಹಾಸಕ್ಕೆ ನಲುಗಿ ಹೋಗಿದ್ದಾರೆ. ಕೊರೊನಾ ಪರಿಣಾಮ ಕೆಲಸವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಬೆಂಗಳೂರನ್ನು ತೊರೆದು‌ ಮರಳಿ ತಮ್ಮ ಊರುಗಳತ್ತ ತೆರಳ್ತಿದ್ದಾರೆ.

ಗ್ರಾಮಗಳತ್ತ ತೆರಳುತ್ತಿರುವ ಜನರೇ ಎಚ್ಚರ
ಬೆಂಗಳೂರು ತೊರೆದು ಗ್ರಾಮಗಳತ್ತ ತೆರಳುತ್ತಿರುವ ಜನರು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ರೆ ಗ್ರಾಮಗಳಿಗೂ ಕೊರೊನಾ ಸೋಂಕು ಹರಡುತ್ತದೆ. ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯ. ನಗರದಿಂದ ಗ್ರಾಮಕ್ಕೆ ಹೋದವರು ಮನೆಯಲ್ಲಿರಬೇಕು. ಕನಿಷ್ಠ 14 ದಿನ ಸ್ವಯಂ ನಿರ್ಬಂಧ ವಿಧಿಸಿಕೊಳ್ಳಬೇಕು . ಗ್ರಾಮಗಳಲ್ಲಿ ಸಂತೆಗಳಿಗೆ ಬ್ರೇಕ್ ಹಾಕುವುದು ಒಳಿತು.

Related Tags:

Related Posts :

Category:

error: Content is protected !!