ಬಿಯರ್​ ಸಾಗಿಸ್ತಿದ್ದ ಲಾರಿಗೆ ಸಣ್ಣ ಅಪಘಾತ.. ಸ್ಥಳೀಯರು ಕತ್ತಲಲ್ಲೇ ಬಿಯರ್​ ಬಾಕ್ಸ್​ ಹೊತ್ತೊಯ್ದರು!

  • KUSHAL V
  • Published On - 17:25 PM, 20 Oct 2020

ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಡುವಿನ ಕೋಟೆ ಬಳಿ ಬಿಯರ್​ ಸಾಗಿಸುತ್ತಿದ್ದ ಲಾರಿ ಅಪಘಾತವಾದ ಹಿನ್ನೆಲೆಯಲ್ಲಿ ಸ್ಥಳೀಯರು ಬಾಕ್ಸ್​ ಬಾಕ್ಸ್ ಬಿಯರ್​ ಹೊತ್ತೊಯ್ದ ಸ್ವಾರಸ್ಯಕರ ಘಟನೆ ಕಳೆದ ರಾತ್ರಿ ನಡೆದಿದೆ.

ಹಾಸನದಿಂದ ವುಡ್​ಪಿಕರ್​ನಿಂದ 900 ಬಾಕ್ಸ್​ ಬಿಯರ್​ ತುಂಬಿಕೊಂಡು ತೆರಳುತ್ತಿದ್ದ ಲಾರಿ ಕೇರಳದ ಪೆರಿನ್ ತಾಲಮನ್ನಾಗೆ ಹೊರಟಿತ್ತು. ಇದೇ ವೇಳೆ ರಸ್ತೆ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಸಿಲುಕಿದ ಲಾರಿ ಕೊಂಚ ವಾಲಿಕೊಂಡಿತು.

ಇದೇ ಅವಕಾಶವನ್ನು ಬಳಸಿಕೊಂಡ ಕೆಲವರು ಕತ್ತಲಲ್ಲಿ ಲಾರಿಯಲ್ಲಿದ್ದ 10ಕ್ಕೂ ಹೆಚ್ಚು ಬಿಯರ್ ಬಾಕ್ಸ್​ಗಳನ್ನು​ ಹೊತ್ತೊಯ್ದಿದ್ದಾರೆ ಎಂದು ಹೇಳಲಾಗಿದೆ. ಇನ್ನು ಮಾರನೇ ದಿನ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಬಂದ ಅಬಕಾರಿ ನಿರೀಕ್ಷಕ ಶಂಕರಪ್ಪ ತಮ್ಮ ಸಮ್ಮುಖದಲ್ಲಿ ಮತ್ತೊಂದು ಲಾರಿಗೆ ಬಿಯರ್ ಬಾಕ್ಸ್​ಗಳನ್ನು ತುಂಬಿಸಿ ಕೇರಳಕ್ಕೆ ಕಳುಹಿಸಿದರು.