ರಾಜಧಾನಿ ಲಾಕ್​ಡೌನ್​ಗೆ ಮದ್ಯಪ್ರಿಯರ ‘ತಯಾರಿ’, ಬಾರ್​ ಮುಂದೆ ಲಾಂಗ್ ಲಾಂಗ್ ಕ್ಯೂ!

ಬೆಂಗಳೂರು: ನಾಳೆ ಸಂಜೆಯಿಂದ ಇಡೀ ರಾಜಧಾನಿ ಲಾಕ್​ಡೌನ್ ಆಗುತ್ತಿರುವ ಹಿನ್ನೆಲೆಯಲ್ಲಿ ಇಂದು ನಗರದಲ್ಲಿರುವ ಮದ್ಯದಂಗಡಿಗಳ ಮುಂದೆ ಮದ್ಯ ಪ್ರಿಯರು ಊಟ ನೀರು ಬಿಟ್ಟು ಕ್ಯೂ ನಿಂತಿರುವ ದೃಶ್ಯ ಕಂಡು ಬಂದಿದೆ.

ಈಗಾಗಲೇ ಕೊರೊನಾ ಭಯಕ್ಕೆ ಬೆಂಗಳೂರಿನಲ್ಲಿದ್ದ ಎಷ್ಟೋ ಮಂದಿ ತಮ್ಮ ಸ್ವಂತ ಊರುಗಳಿಗೆ ಮರಳಿದ್ದಾರೆ. ಇನ್ನೂ ಕೆಲ ಮಂದಿ ನಾಳೆಯಿಂದ ಒಂದು ವಾರ ಶುರುವಾಗುವ ಲಾಕ್​ಡೌನ್​ಗೆ ‘ತಯಾರಿ’ ಮಾಡಿಕೊಳ್ಳುತ್ತಿದ್ದಾರೆ.

ಒಂದು ವಾರ ಎಣ್ಣೆ ಇಲ್ಲದೆ ವನವಾಸ ಮಾಡುವುದು ಬೇಡ ಎಂದು ನಗರದಲ್ಲಿರುವ ಮದ್ಯದಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಹೋಲ್ ಸೇಲ್ ಖರೀದಿಯಲ್ಲಿದ್ದಾರೆ. ನಗರದ ಪ್ರಮುಖ ಔಟ್ ಲೆಟ್​ಗಳಲ್ಲಿ ಫ್ಯಾಮಿಲಿ ಸಮೇತವಾಗಿ ಮದ್ಯ ಖರೀದಿ ಮಾಡುತ್ತಿರುವುದು ಕಂಡು ಬಂದಿದೆ. ಇನ್ನು ಬಹುತೇಕ ಕಡೆಗಳಲ್ಲಿ ಸ್ಟಾಕ್ಸ್ ಖಾಲಿ ಎನ್ನಲಾಗಿದೆ. ಖುಷಿಯ ವಿಚಾರ ಎಂದರೆ ಮದ್ಯಪ್ರಿಯರು ಸಾಮಾಜಿಕ ಅಂತರ ಕಾಪಾಡಿಕೊಂಡೇ ಎಣ್ಣೆ ಖರೀದಿ ಬಿಜಿಯಲ್ಲಿದ್ದಾರೆ.

Related Tags:

Related Posts :

Category:

error: Content is protected !!