ಮೆಜೆಸ್ಟಿಕ್​ನಲ್ಲಿ ಅಣ್ಣಮ್ಮ ದೇವಸ್ಥಾನದ ಮುಂದೆ ಜನವೋ ಜನ!

ಬೆಂಗಳೂರು: ಕೋವಿಡ್ 19ನಿಂದಾಗಿ ಆಗಬೇಕಿದ್ದ ಎಷ್ಟೋ ಕಾರ್ಯಕ್ರಮಗಳು ನಿಂತಿವೆ. ಎಷ್ಟೂ ಮದುವೆಗಳು ರದ್ದಾಗಿವೆ. ಆದ್ರೆ ಲಾಕ್​ಡೌನ್ ಸಡಿಲಿಕೆ ಬಳಿಕ ಮದುವೆ ಕಾರ್ಯಗಳು ನಡೆಯುತ್ತಿವೆ. ಸರ್ಕಾರ ಸಮಾರಂಭಗಳಿಗೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ. ನಿಯಮದ ಪ್ರಕಾರ ಮಾತ್ರ ಮದುವೆ  ಕಾರ್ಯಕ್ರಮ ನಡೆಯಬೇಕು ಎಂದಿದೆ.

ಆದರೆ ಕೊರೊನಾ ಭೀತಿ ನಡುವೆಯೂ ಮೆಜೆಸ್ಟಿಕ್​ನಲ್ಲಿರುವ ಅಣ್ಣಮ್ಮ ದೇವಸ್ಥಾನದ ಮುಂದೆ ಜನಸಾಗರ ಕಂಡು ಬಂದಿದೆ. ಇವರೆಲ್ಲಾ ಇಲ್ಲಿ ಸೇರಿದ್ದು, ದೇವರ ದರ್ಶನಕ್ಕಾಗಿ ಅಲ್ಲ ಮದುವೆ ಸಮಾರಂಭಕ್ಕಾಗಿ. ಸಾಮಾಜಿಕ‌ ಅಂತರ ಮರೆತು ಮದುವೆಯಲ್ಲಿ ನೂರಾರು ಜನ ಪಾಲ್ಗೊಂಡಿದ್ದಾರೆ.

ಸರ್ಕಾರದ ಅದೇಶ ಉಲ್ಲಂಘಿಸಿದ್ದಾರೆ. ಮದುವೆ ಶುಭ ಸಮಾರಂಭದಲ್ಲಿ 50ಕ್ಕಿಂತ ಹೆಚ್ಚು ಜನ‌ ಸೇರೋ ಹಾಗಿಲ್ಲ. ಮದುವೆಗೆ ಬರೋ‌ ಜನ‌ ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಆದ್ರೆ ಇಲ್ಲಿ ಕೊರೊನಾ ಮಹಾಮಾರಿಯನ್ನೇ ಮರೆತು ಮದುವೆಯಲ್ಲಿ ಭಾಗಿಯಾಗಿದ್ದಾರೆ.

Related Tags:

Related Posts :

Category:

error: Content is protected !!