ವ್ಯಕ್ತಿ ಸತ್ತಿದ್ದು ಮರದಿಂದ ಬಿದ್ದಿದ್ದಕ್ಕೋ, ಕೊರೊನಾದಿಂದಲೋ? ಈಗ ವೈದ್ಯರೇ ಕಕ್ಕಾಬಿಕ್ಕಿ!

ಮೈಸೂರು: ಹಳದಿ ಇರೋದೆಲ್ಲಾ ಚಿನ್ನ ಅಲ್ಲ, ಹಾಗೇನೇ ಸತ್ತವರೆಲ್ಲಾ ಕೋವಿಡ್‌ ಪೇಷಂಟ್ಸ್‌ ಅಲ್ಲ ಅಂತಾ ಧೈರ್ಯದಿಂದ ಹೇಳುವ ಕಾಲ ಇದಲ್ಲ ಅಂತಾ ಕಾಣುತ್ತೆ. ಯಾಕಂದ್ರೆ ಸಾವನ್ನಪ್ಪಿದ ವ್ಯಕ್ತಿಗಳ ಕೋವಿಡ್‌ ಟೆಸ್ಟ್‌ನಲ್ಲಿ ಬಹುತೇಕರು ಸೋಂಕಿತರಾಗ್ತಿದ್ದಾರೆ. ಇದಕ್ಕೆ ಲೆಟೆಸ್ಟ್‌ ಉದಾಹರಣೆ ಮೈಸೂರಲ್ಲಿ ನಡೆದ ಘಟನೆ.

ಹೌದು, ಮಡಿಕೇರಿಯ 36 ವರ್ಷದ ವ್ಯಕ್ತಿಯೊಬ್ಬ ಮರದಿಂದ ಜಾರಿ ಕೆಳಗೆ ಬಿದ್ದು ಗಾಯಗೊಂಡಿದ್ದ. ಈತನನ್ನು ಮೈಸೂರಿನ ಕೆ ಆರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಈತನ ಗಾಯದ ಗಂಭೀರತೆ ನೋಡಿದ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ.

ನಿಯಮದಂತೆ ಶಸ್ತ್ರ ಚಿಕಿತ್ಸೆಗೆ ಮೊದಲು ಈತನಿಗೆ ಕೊರೊನಾ ಟೆಸ್ಟ್‌ ಮಾಡಲು ಗಂಟಲು ದ್ರವವನ್ನ ಸಂಗ್ರಹಿಸಿ ಲ್ಯಾಬ್‌ಗೆ ಕಳಿಸಲಾಗಿತ್ತು. ಈಗ ಆ ವ್ಯಕ್ತಿಯ ಕೊರೊನಾ ಟೆಸ್ಟ್‌ ರಿಸಲ್ಟ್‌ ಬಂದಿದ್ದು, ಆತ ಕೊರೊನಾ ಸೋಂಕಿತನಾಗಿದ್ದು ತಿಳಿದು ಬಂದಿದೆ. ಇದು ಕೆ ಆರ್‌ ಆಸ್ಪತ್ರೆಯ ವೈದ್ಯರು ಸೇರಿದಂತೆ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ.

Related Tags:

Related Posts :

Category:

error: Content is protected !!