ಕಸ್ಟಮರ್ ಸೋಗಿನಲ್ಲಿ ಬಂದು ಹಾಡಹಗಲೇ ಅಂಗಡಿ ಮಾಲೀಕನ ಬರ್ಬರ ಹತ್ಯೆ

ಬೆಂಗಳೂರು: ಅತ್ತ ಕೊರೊನಾದ ಆರ್ಭಟ ಏರುತ್ತಲೇ ಇದ್ದರೆ ಇತ್ತ ನಗರದಲ್ಲಿ ಕ್ರೈಮ್​ ಕೂಡ ಜಾಸ್ತಿ ಆಗುತ್ತಲೇ ಇದೆ. ಇದೀಗ, ಗ್ರಾಹಕರ ಸೋಗಿನಲ್ಲಿ ಬಂದು ಅಂಗಡಿ ಮಾಲೀಕನೊಬ್ಬನನ್ನ ಬರ್ಬರವಾಗಿ ಕೊಲೆಮಾಡಿರುವ ಘಟನೆ ವಿಜಯನಗರದ RPC ಲೇಔಟ್​ನಲ್ಲಿ ನಡೆದಿದೆ. ಬಡಾವಣೆಯಲ್ಲಿ ಬೆಸ್ಟ್ ಟೂರ್ಸ್ ಌಂಡ್ ಟ್ರಾವೆಲ್ಸ್ ಹಾಗೂ ಬೆಸ್ಟ್​ ಪೆಸ್ಟ್​ ಕಂಟ್ರೋಲ್​ ಎಂಬ ಹೆಸರಿನಲ್ಲಿ ಅಂಗಡಿ ನಡೆಸುತ್ತಿದ್ದ ಹನುಮೇಶ್ ಗೌಡ ಮೃತ ದುರ್ದೈವಿ.

ಇಂದು ಸಂಜೆ ಕಸ್ಟಮರ್​ಗಳ ಸೋಗಿನಲ್ಲಿ ಅಂಗಡಿಗೆ ಬಂದಿರೋ ದುಷ್ಕರ್ಮಿಗಳು ಹನುಮೇಶ್ ಗೌಡಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಕೃತ್ಯ ನಡೆದ ಸ್ಥಳಕ್ಕೆ ವಿಜಯನಗರ ಎಸಿಪಿ ಹಾಗೂ ಇನ್​ಸ್ಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Tags:

Related Posts :

Category:

error: Content is protected !!