ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಅದ್ದೂರಿ ರೊಟ್ಟಿ ಜಾತ್ರೆ; ಇಲ್ಲಿದೆ ಅದರ ಝಲಕ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 09, 2024 | 6:42 PM

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ ಯಲ್ಲಾಲಿಂಗೇಶ್ವರ ಮಠದ ಆವರಣದಲ್ಲಿ ಹತ್ತೂರು ಗ್ರಾಮದ ಸಾವಿರಾರು ಮಹಿಳೆಯರು ಎರಡು ವಾರಗಳ ಕಾಲ ರೊಟ್ಟಿ ಮಾಡಿ, ಬಳಿಕ ಮಠವೊಂದಕ್ಕೆ ಸಮರ್ಪಣೆ ಮಾಡಿದ್ದರು. ತಲೆ ಮೇಲಿನ ಬುತ್ತಿ ಗಂಟಿಗೆ ತಿರಂಗಾ ಧ್ವಜವನ್ನು ಹಾಕಿದ್ದು ವಿಶೇಷವಾಗಿತ್ತು. ಅಷ್ಟಕ್ಕೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರೊಟ್ಟಿ ಬುತ್ತಿ ಜಾತ್ರೆ ಮಾಡೋದ್ಯಾಕೆ? ಈ ರೊಟ್ಟಿ ಬುತ್ತಿ ಜಾತ್ರೆ ಸ್ಟೋರಿ ಇಲ್ಲಿದೆ.

1 / 8
 ತಲೆ ಮೇಲೆ ಬುತ್ತಿ ಹೊತ್ತು ಸಾಗುತ್ತಿರುವ ಮಹಿಳೆಯರು, ತ್ರಿವರ್ಣ ಧ್ವಜದ ಬಣ್ಣಗಳನ್ನೇ ರೊಟ್ಟಿ ಬುತ್ತಿಗೆ ಹಾಕಿ ರಾಷ್ಟ್ರ ಧ್ವಜದ ಮೆರವಣಿಗೆ ಮಾದರಿಯಲ್ಲಿ ಸಾಗಿದ ಯಲ್ಲಾಲಿಂಗೇಶ್ವರ ಭಕ್ತರ ಮೆರವಣಿಗೆ. ಜಾತಿ ಧರ್ಮದ ಬೇಧಭಾವ ಬಿಟ್ಟು ಅದ್ದೂರಿ ಜಾತ್ರೆಯಲ್ಲಿ ಹತ್ತೂರ ಜನರು ಭಾಗಿಯಾಗಿದ್ದರು.

2 / 8
ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ ಯಲ್ಲಾಲಿಂಗೇಶ್ವರ ಮಠದ ಆವರಣದಲ್ಲಿ. ಹೌದು, ಪ್ರತಿವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಯಲ್ಲಾಲಿಂಗ ದೇವರ ಜಾತ್ರೆ ನೆರವೇರಿದೆ.

3 / 8
ಈ ಬಾರಿ ವಿಶೇಷ ಅಂದ್ರೇ ಹತ್ತು ಸಾವಿರ ಮಹಿಳೆಯರು ಹೊತ್ತು ತರ್ತಿದ್ದ ರೊಟ್ಟಿ ಬುತ್ತಿಯನ್ನ ತ್ರಿವರ್ಣ ಧ್ವಜದ ಬಣ್ಣದಲ್ಲಿನ ಬಟ್ಟೆ ಕಟ್ಟಿಕೊಂಡು ಸಾಲಾಗಿ ಬಂದು ದೇವರಿಗೆ ಅರ್ಪಣೆ ಮಾಡಿರುವುದು. ಈ ಮೂಲಕ ಹೊಸ ಸಾಧನೆಯನ್ನೂ ಯಲ್ಲಾಲಿಂಗ ಮಹರಾಜರ ಭಕ್ತರು ಮಾಡಿದ್ದಾರೆ.

4 / 8
ಯಲ್ಲಾಲಿಂಗ ಮಹರಾಜರ 38ನೇ ಪುಣ್ಯಸ್ಮರಣೆ ಕಾರ್ಯಕ್ರಮ ಹಾಗೂ ಜಾತ್ರಾ ಮಹೋತ್ಸವ ಹಿನ್ನೆಲೆ ಮುಗಳಖೋಡ ಗ್ರಾಮದ ಸುತ್ತಮುತ್ತ ಹತ್ತು ಗ್ರಾಮದ ಮಹಿಳೆಯರು ಜಾತ್ರೆಗೂ ಮುನ್ನ ಎರಡು ವಾರಗಳ ಕಾಲ ನಿರಂತರವಾಗಿ ರೊಟ್ಟಿಯನ್ನ ಮಾಡ್ತಾರೆ. ಹತ್ತು ಸಾವಿರ ಮಹಿಳೆಯರು ಒಂದು ಕೋಟಿಗಿಂತ ಹೆಚ್ಚು ರೊಟ್ಟಿಯನ್ನ ತಂದು ಮಠಕ್ಕೆ ಅರ್ಪಣೆ ಮಾಡುತ್ತಾರೆ.

5 / 8
ಇನ್ನು ಇಲ್ಲಿ ಬರೀ ರೊಟ್ಟಿ ಮಾತ್ರ ತರುವುದಿಲ್ಲ, ರೊಟ್ಟಿ ಜತೆಗೆ ವಿವಿಧ ತೆರನಾದ ಪಲ್ಯಗಳು, ಶೇಂಗಾ ಚಟ್ನಿ, ಹೋಳಿಗೆ ಚಕ್ಕುಲಿ ಸೇರಿ ಹಲವು ಖಾದ್ಯಗಳನ್ನ ಸಿದ್ದಪಡಿಸಿಕೊಂಡು ಬೃಹತ್ ಮೆರವಣಿಗೆ ವಿಠ್ಠಲ ಮಂದಿರದಿಂದ ಹೊರಟು ಯಲ್ಲಾಲಿಂಗೇಶ್ವರ ಮಟ್ಟಕ್ಕೆ ಬಂದು ತಲಪುತ್ತಾರೆ. ಮೆರವಣಿಗೆಗೆ ಮಠದ ಪೀಠಾಧಿಪತಿ ಡಾ.ಮುರಘರಾಜೇಂದ್ರ ಸ್ವಾಮೀಜಿ ಚಾಲನೆ ನೀಡುತ್ತಾರೆ.

6 / 8
ಹೀಗೆ ತಂದ ರೊಟ್ಟಿ ಬುತ್ತಿಯನ್ನೇ ಜಾತ್ರೆಗೆ ಬಂದು ಸಾವಿರಾರು ಭಕ್ತರಿಗೆ ಪ್ರಸಾದದ ರೂಪದಲ್ಲಿ ಹಂಚಲಾಗುತ್ತದೆ. ವಿಶೇಷ ಅಂದ್ರೇ ಇಲ್ಲಿ ಮುಸ್ಲಿಂ ಸಮುದಾಯದ ಜನರು, ಜೈನ, ಲಂಬಾಣಿ ಸಮುದಾಯದ ಜನರು ಸೇರಿದಂತೆ ಎಲ್ಲ ಜಾತಿ ಜನಾಂಗದವರು ಭಾಗವಹಿಸಿ ಜಾತ್ರೆಯನ್ನ ಮಾಡುತ್ತಾರೆ.

7 / 8
ಈ ಬಾರಿ ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಗಳನ್ನ ಬುತ್ತಿಗೆ ಸುತ್ತಿ ತ್ರಿವರ್ಣ ಧ್ವಜದ ರೂಪದಲ್ಲಿ ಮೆರವಣಿಗೆ ನಡೆಸಿದ್ದು ವಿಶೇಷವಾಗಿತ್ತು. ಇದೆ ಸಂದರ್ಭದಲ್ಲಿ ಮುಗಳಖೋಡ ಮಠದ ಡಾ. ಮುರುಘರಾಜೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಏಕಕಾಲಕ್ಕೆ ರಾಷ್ಟ್ರಗೀತೆ ಹಾಡಿ ಬಳಿಕ ದೇಶದ ಹೆಸರಿನಲ್ಲಿ ದಾಸೋಹಕ್ಕೆ ರೊಟ್ಟಿಗಳನ್ನ ಸಮರ್ಪಣೆ ಮಾಡಿದ್ದಾರೆ.

8 / 8
ಒಟ್ಟಿನಲ್ಲಿ ಧಾರ್ಮಿಕತೆಯ ಜೊತೆಗೆ ದೇಶ ಭಕ್ತಿಯನ್ನ ಸಾರಿ ದಾಖಲೆ ನಿರ್ಮಿಸಿದ ಮುಗಳಖೋಡ ಮಠದ ಜಾತ್ರೆಗೆ ಜನರು ಪುಲ್ ಫಿದಾ ಆಗಿದ್ದಾರೆ. ಪ್ರತಿ ವರ್ಷ ಇಲ್ಲಿ ಜಾತ್ರೆ ಮಾಡಿಕೊಂಡು ಬರ್ತಿದ್ದು ಪ್ರತಿ ಬಾರಿಯೂ ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಮಹಾರಾಷ್ಟ್ರ ಸೇರಿದಂತೆ ಸಾಕಷ್ಟು ಕಡೆಗಳಿಂದ ಭಕ್ತರು ಬಂದು ದೇವರ ದರ್ಶನದ ಜತೆಗೆ ಮಹಿಳೆಯರೇ ಸಿದ್ದಪಡಿಸಿ ತಂದಿದ್ದ ರೊಟ್ಟಿ ಬುತ್ತಿ ಬಿಚ್ಚಿ ಪ್ರಸಾದ ತಿಂದು ಧನ್ಯವಾಗುತ್ತಾರೆ.