Kannada News » Photo gallery » Best Smart TV Here are the top 5 Latest Smart TVs under Rs 30,000 that you can buy in India
Best Smart Tv: ಬಜೆಟ್ ಬೆಲೆಗೆ ಹೊಸ ಟಿವಿ ಖರೀದಿಸಬೇಕೇ?: ಇಲ್ಲಿದೆ ನೋಡಿ 5 ಬೆಸ್ಟ್ ಸ್ಮಾರ್ಟ್ ಟಿವಿ
TV9kannada Web Team | Edited By: Vinay Bhat
Updated on: Jul 31, 2022 | 6:45 AM
Smart TVs under Rs 30,000: ಇಲ್ಲಿ 30,000 ರೂ. ಒಳಗೆ ಸಿಗುತ್ತಿರುವ 43 ಇಂಚಿನ ಬೆಸ್ಟ್ ಸ್ಮಾರ್ಟ್ ಟಿವಿಗಳು ಯಾವುವು ಎಂಬುದನ್ನು ಹೇಳಲಾಗಿದೆ.
Jul 31, 2022 | 6:45 AM
ನೀವು ಹೊಸ ಸ್ಮಾರ್ಟ್ ಟಿವಿ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಮತ್ತು ನಿಮ್ಮ ಬಜೆಟ್ ಕಡಿಮೆ ಇದ್ದರೆ ತಪ್ಪದೆ ಈ ಸುದ್ದಿ ಓದಿ. ಯಾಖೆಂದರೆ ಮಾರುಕಟ್ಟೆಯಲ್ಲಂತು ಈಗ ಹೊಸ ಮಾದರಿಯ ವಿಭಿನ್ನ ರೆಸಲ್ಯೂಶನ್ ಸಾಮರ್ಥ್ಯದ ಸ್ಮಾರ್ಟ್ ಟಿವಿಗಳಿಗೆನೂ ಭರವಿಲ್ಲ. ದೊಡ್ಡ ಗಾತ್ರದ ಸ್ಮಾರ್ಟ್ ಟಿವಿಗಳು ಇಂದು ಮಾರುಕಟ್ಟೆಯನ್ನ ಆವರಿಸಿಕೊಂಡಿದ್ದು, ಕಡಿಮೆ ಬೆಲೆಗೆ ಸಿಗುತ್ತಿದೆ. ಹಾಗೆಯೆ ಇಲ್ಲಿ 30,000 ರೂ. ಒಳಗೆ ಸಿಗುತ್ತಿರುವ 43 ಇಂಚಿನ ಬೆಸ್ಟ್ ಸ್ಮಾರ್ಟ್ ಟಿವಿಗಳು ಯಾವುವು ಎಂಬುದನ್ನು ಹೇಳಲಾಗಿದೆ.
1 / 6
Infinix X1 TV 43 inch: ಈ ಸ್ಮಾರ್ಟ್ ಟಿವಿಯ ಬೆಲೆ 23,999 ರೂ. ಆಗಿದೆ. ಡಾಲ್ಡಿ ಆಡಿಯೋ ವ್ಯವಸ್ಥೆ ಇದರಲ್ಲಿದ್ದು 24W ಇನ್ ಬ್ಯುಲ್ಟ್ ಸ್ಪೀಕರ್ ನೀಡಲಾಗಿದೆ. ಮೀಡಿಯಾ ಟೆಕ್ ಕ್ವಾಡ್-ಕೋರ್ ಪ್ರೊಸೆಸರ್ ಅಳವಡಿಸಲಾಗಿದ್ದು 1GB RAM ಮತ್ತು 8GB ROM ನೊಂದಿಗೆ ಬರುತ್ತದೆ. HDR 10 ಬೆಂಬಲ ಪಡೆದುಕೊಂಡಿರುವ ಈ ಟಿವಿ 400 ನಿಟ್ಸ್ ಬ್ರೈಟ್ ಬೆಸ್ ಅನ್ನು ನೀಡುತ್ತದೆ.
2 / 6
Realme Smart TV X Full HD: ಇದರ ಬೆಲೆ ಕೇವಲ 21,999 ರೂ. ಆಗಿದೆ. 43 ಇಂಚಿನ ಸ್ಕ್ರೀನ್ ಹೊಂದಿದ್ದು, ಆಂಡ್ರಾಯ್ಡ್ 11 ಒಎಸ್ ಮೂಲಕ ಕಾರ್ಯನಿರ್ವಹಿಸುತ್ತದೆ. ನಿಮಗೆ ಸಿನಿಮಾ ಮನೋರಂಜನೆಗಾಗಿ ನೆಟ್ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಸೇರಿದಂತೆ ಪ್ರಮುಖ ಓಟಿಟಿ ಸೇವೆ ಇದರಲ್ಲಿದೆ. ಇದರಲ್ಲಿರುವ ಕ್ರೋಮ್ ಬೂಸ್ಟ್ ಟೆಕ್ನಾಲಜಿ ಅದ್ಭುತ ಇಮೇಜ್ ಗಳನ್ನು ಸೆರೆ ಹಿಡಿದು ಅಂದವಾಗಿ ಕಾಣಿಸುತ್ತದೆ.
3 / 6
Redmi Smart TV 43 inch Full HD: ಇದರ ಬೆಲೆ 22,999 ರೂ. LED ಪ್ಯಾನೆಲ್ ನಿಂದ ಬರುತ್ತಿರುವ ಈ ಟಿವಿಯಲ್ಲಿ ಡಾಲ್ಡಿ ಆಡಿಯೋ ಜೊತೆಗೆ 24W ಸ್ಪೀಕರ್ ನೀಡಲಾಗಿದೆ. 64- ಬಿಟ್ ಕ್ವಾಡ್ ಕೋರ್ ಪ್ರೊಸೆಸರ್ ನೀಡಲಾಗಿದೆ.
4 / 6
OnePlus TV Y Series Y1S Edge: ಇದರ ಬೆಲೆ 25,999 ರೂ. ಈ ಟಿವಿ 1920*1080 ಸಾಮರ್ಥ್ಯದ 43 ಇಂಚಿನ ಸ್ಕ್ರೀನ್ ಘಾತ್ರ ಹೊಂದಿದ್ದು ಡಾಲ್ಡಿ ಸೌಂಡ್ ಟೆಕ್ನಾಲಜಿ ಮೂಲಕ ಬರುತ್ತದೆ. ಎರಡು HTML ಪೋರ್ಟ್ ನೀಡಲಾಗಿದ್ದು ಹೆಡ್ ಫೋನ್ ಕನೆಕ್ಟ್ ಮಾಡಲು ಕೂಡ ಅವಕಾಶ ಇದೆ. ಇದುಕೂಡ ಅಮೆಜಾನ್ ನಲ್ಲಿ ಖರೀದಿಗೆ ಸಿಗಲಿದೆ.
5 / 6
Hisense A6GE Ultra HD: ಈ ಸ್ಮಾರ್ಟ್ ಟಿವಿಯ ಬಲೆ 26,990 ರೂ. ಇದು 4K ಆಲ್ಟ್ರಾ HD ಟಿವಿ ಆಗಿದ್ದು ದೊಡ್ಡ ಸ್ಕ್ರೀನ್ ನಲ್ಲಿ ಅತ್ಯುತ್ತಮ ಅನುಭವವನ್ನು ನೀಡುತ್ತದೆ. ವಿಶೇಷ ಎಂದರೆ ಇದರಲ್ಲಿ ವಿವಿಧ ರೀತಿಯ ಸೌಂಡ್ ಟೆಕ್ನಾಲಜಿ ನೀಡಿಲಾಗಿದ್ದು, ಸ್ಟಾಂಡರ್ಡ್, ಥಿಯೇಟರ್, ಸ್ಪೋರ್ಟ್ಸ್, ಮ್ಯೂಸಿಕ್ ಹೀಗೆ ಅನೇಕ ಆಯ್ಕೆಗಳಿವೆ. ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಮೂಲಕ ಖರೀದಿಸಬಹುದು.