ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರು ಶೇ. 48; ಜಿಡಿಪಿಗೆ ಕೊಡುಗೆ ಶೇ. 18 ಮಾತ್ರ; ಸರ್ಕಾರಕ್ಕೆ ಮಹಿಳಾ ಅಂತರ ತಗ್ಗಿಸುವ ಗುರಿ
ನವದೆಹಲಿ, ಜನವರಿ 20: ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಮಹಿಳೆಯರು ಶೇ. 48ರಷ್ಟಿದ್ದಾರೆ. ಆದರೆ, ಜಿಡಿಪಿಗೆ ಇವರ ಕೊಡುಗೆ ಶೇ. 18 ಮಾತ್ರ. ಜಾಗತಿಕವಾಗಿ ಮಹಿಳಾ ಉದ್ಯೋಗಿಗಳ ಪ್ರಮಾಣ ಶೇ. 50 ಇದ್ದರೆ, ಭಾರತದಲ್ಲಿ ಇದು ಶೇ. 41.7 ಮಾತ್ರವೇ. ಸರ್ಕಾರವು ಈ ವೈರುದ್ಧ್ಯವನ್ನು ನೀಗಿಸಲು ಯತ್ನಿಸುತ್ತಿದೆ. ಬಜೆಟ್ನಲ್ಲಿ ಮಹಿಳೆಯರ ಪರವಾಗಿ ಕೆಲ ಪ್ರಮುಖ ಕ್ರಮಗಳ ಘೋಷಣೆ ಆಗಬಹುದು.
ದುಡಿಯುವ ಹೆಣ್ಮಗಳು ಇವತ್ತಿನ ಕುಟುಂಬಗಳಿಗೆ ಅಗತ್ಯವಾಗಿದೆ. ಹಾಗೆಯೇ, ದೇಶಕ್ಕೂ ಕೂಡ ಹೆಣ್ಮಕ್ಕಳ ದುಡಿಮೆ ಅಗತ್ಯ ಇದೆ. ಪುರುಷರಿಗೆ ಸರಿಸಮಾನ ಸಂಖ್ಯೆಯಲ್ಲಿ ಮಹಿಳೆಯರೂ ಇದ್ದಾರೆ. ಆದರೆ, ಉದ್ಯೋಗ ವಿಚಾರದಲ್ಲಿ ಈಗಲೂ ಕೂಡ ಪುರುಷರಿಗಿಂತ ಮಹಿಳೆಯರು ಹಿಂದಿದ್ದಾರೆ.
1 / 6
ಶೇ. 77.2ರಷ್ಟು ಪುರುಷರು ಉದ್ಯೋಗಸ್ಥರಾಗಿದ್ದಾರೆ. ಆದರೆ, ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಶೇ. 41.7 ಮಾತ್ರವೇ ಇರುವುದು. ಮಹಿಳೆಯರನ್ನು ಕೆಲಸಕ್ಕೆ ಹೋಗಲು ಹುರಿದುಂಬಿಸುವಂತಹ ವಾತಾವರಣ ಸೃಷ್ಟಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಬಜೆಟ್ನಲ್ಲಿ ಪ್ರಮುಖ ಹೆಜ್ಜೆಗಳನ್ನಿಡುವ ನಿರೀಕ್ಷೆ ಇದೆ.
2 / 6
ಉದ್ಯೋಗಸ್ಥಳದಲ್ಲಿ ಮಹಿಳೆಯರಿಗೆ ಅನುಕೂಲವಾಗುವಂತೆ ಫ್ಲೆಕ್ಸಿಬಲ್ ಆಗಿರುವಂತಹ ಕೆಲಸದ ಅವಧಿಯ ಆಯ್ಕೆಗಳನ್ನು ನೀಡುವುದು; ಮಹಿಳೆಯರಿಗೆ ಸೂಕ್ತವಾಗುವ ಅಗತ್ಯ ಸೌಕರ್ಯಗಳನ್ನು ಸೃಷ್ಟಿಸುವುದು ಇವೇ ಮುಂತಾದ ಪ್ರಯತ್ನಗಳನ್ನು ಬಜೆಟ್ನಲ್ಲಿ ಮಾಡಬಹುದು.
3 / 6
ಮಹಿಳೆಯರನ್ನು ಉದ್ಯೋಗ ವಲಯಕ್ಕೆ ತರಲು ಏನೇನು ಮಾಡಬಹುದು ಎಂದು ಅವಲೋಕಿಸುವಂತೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಕೆಲ ತಿಂಗಳ ಹಿಂದೆ ಟ್ಯಾಸ್ಕ್ ಫೋರ್ಸ್ ತಂಡವೊಂದನ್ನು ರಚಿಸಿತ್ತು. ಕಾರ್ಮಿಕ ಕಾರ್ಯದರ್ಶಿ ಸುಮಿತಾ ದಾವ್ರಾ ನೇತೃತ್ವದ ಈ ಕಾರ್ಯಪಡೆಯು ಮುಂದಿನ ವಾರ ತನ್ನ ವರದಿಯನ್ನು ಸಲ್ಲಿಸಲಿದೆ. ಈ ವರದಿಯಲ್ಲಿನ ಅಂಶಗಳು ಬಜೆಟ್ ಹಾಗೂ ಸರ್ಕಾರದ ನೀತಿಗಳ ಮೇಲೆ ಪ್ರಭಾವ ಬೀರುವುದು ನಿಶ್ಚಿತ ಎನಿಸಿದೆ.
4 / 6
ಜಾಗತಿಕವಾಗಿ ಮಹಿಳೆಯರು ಕೆಲಸಕ್ಕೆ ಹೋಗುವ ಪ್ರಮಾಣ ಶೇ. 50ರಷ್ಟಿದೆ. ಭಾರತದಲ್ಲಿ ಇದು ಶೇ. 42ಕ್ಕಿಂತಲೂ ಕಡಿಮೆ. ಸದ್ಯದ ಮಟ್ಟಿಗೆ ಈ ಪ್ರಮಾಣವನ್ನು ಜಾಗತಿಕ ಮಟ್ಟಕ್ಕಾದರೂ ಕೊಂಡೊಯ್ಯುವ ಗುರಿ ಸರ್ಕಾರದ್ದಾಗಿದೆ.
5 / 6
ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಮಹಿಳೆಯರು ಶೇ. 48ರಷ್ಟಿದ್ದಾರೆ. ಆದರೆ, ದೇಶದ ಜಿಡಿಪಿಗೆ ಈ ವರ್ಗದವರಿಂದ ಆಗುತ್ತಿರುವ ಕೊಡುಗೆ ಶೇ. 18 ಮಾತ್ರವೇ. ಇಷ್ಟೊಂದು ದೊಡ್ಡ ಅಂತರವನ್ನು ತಗ್ಗಿಸಿದರೆ ಭಾರತದ ಬೆಳವಣಿಗೆಗೆ ಹೊಸ ಶಕ್ತಿ ಸಿಕ್ಕಂತಾಗಬಹುದು.