1/9

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರು.
2/9

ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಕಾರ್ಯಕರ್ತರು, ತಮಿಳುನಾಡಿನ ಜನರು ಸ್ವಾಗತಿಸಿದರು. ಬಾಲಕಿಯೊಬ್ಬಳನ್ನು ರಾಹುಲ್ ಎತ್ತಿಕೊಂಡಿರುವ ದೃಶ್ಯ ಈ ಸಂದರ್ಭ ಕಂಡುಬಂತು.
3/9

ರಾಹುಲ್ ಗಾಂಧಿ ಧರಪುರಂನಲ್ಲಿ ಪ್ರಚಾರದ ವೇಳೆ, ಬಾಲಕಿಯೊಬ್ಬಳನ್ನು ತಮ್ಮ ಕಾರ್ ಮೇಲೆ ಹತ್ತಿಸಿಕೊಂಡು ಸಂಭ್ರಮಪಟ್ಟರು. ಈ ಸನ್ನಿವೇಶ ವಿಶೇಷವಾಗಿ ಜನರ ಮನಸೆಳೆಯಿತು.
4/9

ತಮಿಳುನಾಡಿನ ಧರಪುರಂನಲ್ಲಿ ನಡೆದ ರೋಡ್ ಶೋನಲ್ಲಿ ಭಾಗವಹಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಾಲಕಿಯೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಂಡರು
5/9

ಸೆಲ್ಫೀ ಕ್ಲಿಕ್ಕಿಸಿಕೊಂಡ ಬಳಿಕ ರಾಹುಲ್ ಗಾಂಧಿ ಹಾಗೂ ಬಾಲಕಿಯ ಮಂದಹಾಸ
6/9

ರಾಹುಲ್ ಗಾಂಧಿ ಮೂರು ದಿನಗಳ ತಮಿಳುನಾಡು ಪ್ರವಾಸದಲ್ಲಿ ಇದ್ದಾರೆ. ಮೂರನೇ ದಿನವಾದ ಇಂದು ರೈತರ ಜೊತೆ ಸಮಯ ಕಳೆದರು.
7/9

ರೈತರೊಂದಿಗಿನ ಸಂವಾದದಲ್ಲಿ ರಾಹುಲ್ ಗಾಂಧಿ ಭಾಗವಹಿಸಿದರು.
8/9

ಕೇಂಧ್ರದ ಮೂರು ನೂತನ ಕೃಷಿ ಕಾಯ್ದೆಗಳ ವಿರುದ್ಧ ರಾಹುಲ್ ಗಾಂಧಿ ಹರಿಹಾಯ್ದರು. ಈ ಕಾಯ್ದೆಗಳು ಕೃಷಿಯನ್ನು ಸಂಕಷ್ಟಕ್ಕೆ ಸಿಲುಕಿಸಲಿದೆ ಎಂದು ಹೇಳಿದರು.
9/9

ತಮಿಳುನಾಡಿನ ಧರಪುರಂ ಹಾಗೂ ಡಿಂಡಿಗುಲ್ನಲ್ಲೂ ರಾಹುಲ್ ಗಾಂಧಿ ರೋಡ್ ಶೋ ನಡೆಸಿದರು. ಈ ಮೂಲಕ ಮೂರು ದಿನಗಳ ತಮಿಳುನಾಡು ಪ್ರವಾಸವನ್ನು ರಾಹುಲ್ ಗಾಂಧಿ ಇಂದು ಮುಕ್ತಾಯಗೊಳಿಸಿದರು.